Valentine's Day 2023: ಸಂಗಾತಿಗೆ ಮರೆತೂ ಕೂಡ ಈ 5 ಉಡುಗೊರೆಗಳನ್ನು ಕೊಡಬೇಡಿ, ಇಲ್ದಿದ್ರೆ ಸಂಬಂಧದಲ್ಲಿ ಬಿರುಕು ತಪ್ಪಿದ್ದಲ್ಲ!

Valentine's Day 2023: ಪ್ರೇಮಿಗಳ ದಿನ ಸಮೀಪಿಸುತ್ತಿದೆ. ಈ ಬಾರಿಯ ವ್ಯಾಲೆಂಟೈನ್ ಡೇ ದಿನ ನೀವೂ ಕೂಡ ನಿಮ್ಮ ಸಂಗಾತಿಗೆ ಉಡುಗೊರೆಯನ್ನು ಕೊಡಲು ಯೋಜನೆ ಹಾಕಿಕೊಂಡಿದ್ದರೆ, ನೀವು ಜಾಕೆಟ್‌ಗಳು, ಜೀನ್ಸ್, ಬಟ್ಟೆ, ಕೈಗಡಿಯಾರಗಳು, ವರ್ಣರಂಜಿತ ನೆಕ್ಲೇಸ್‌ಗಳು, ಗ್ಯಾಜೆಟ್‌ಗಳು, ಸೊಗಸಾದ ಬಟ್ಟೆ, ಅಥವಾ ಕಿವಿಯೋಲೆಗಳನ್ನು ಉಡುಗೊರೆಯಾಗಿ ಕೊಡಬಹುದು.   

Written by - Nitin Tabib | Last Updated : Feb 11, 2023, 04:14 PM IST
  • ಆದರೆ ಅನೇಕ ಬಾರಿ ಜನರು ಗೊತ್ತಿಲ್ಲದೆ ಕೆಲ ಉಡುಗೊರೆಗಳನ್ನು ಆಯ್ಕೆ ಮಾಡುತ್ತಾರೆ
  • ಮತ್ತು ಅದು ಅವರ ಸಂಬಂಧವನ್ನು ಸುಧಾರಿಸುವ ಬದಲು,
  • ಸಂಬಂಧಗಳ ನಡುವಿನ ಅಂತರ ಹೆಚ್ಚಳಕ್ಕೆ ಕಾರಣವಾಗುತ್ತದೆ.
Valentine's Day 2023: ಸಂಗಾತಿಗೆ ಮರೆತೂ ಕೂಡ ಈ 5 ಉಡುಗೊರೆಗಳನ್ನು ಕೊಡಬೇಡಿ, ಇಲ್ದಿದ್ರೆ ಸಂಬಂಧದಲ್ಲಿ ಬಿರುಕು ತಪ್ಪಿದ್ದಲ್ಲ! title=
ಪ್ರೇಮಿಗಳ ದಿನ: ಉಡುಗೊರೆಗೆ ಸಲಹೆಗಳು

Valentine's Day 2023 Gift Tips: ಪ್ರೇಮಿಗಳ ವಾರ ಪ್ರಾರಂಭವಾಗಿದೆ. ಪ್ರೇಮಿಗಳ ದಿನ ಅಂದರೆ ಫೆಬ್ರವರಿ 14 ರಂದು ವ್ಯಾಲೆಂಟೈನ್ ಡೇ ಆಚರಿಸಲು ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಪ್ರೇಮಿಗಳ ದಿನದಂದು ಜನರು ಪರಸ್ಪರ ತಮ್ಮ ಪ್ರೀತಿ ಮತ್ತು ಬದ್ಧತೆಯನ್ನು ವ್ಯಕ್ತಪಡಿಸುತ್ತಾರೆ. ಈ ದಿನ ಜನರು ತಮ್ಮ ಸಂಗಾತಿಗೆ ಹೂವು ಸೇರಿದಂತೆ ಉಡುಗೊರೆಗಳನ್ನು ನೀಡುತ್ತಾರೆ. ಆದರೆ ಅನೇಕ ಬಾರಿ ಜನರು ಗೊತ್ತಿಲ್ಲದೆ ಕೆಲ ಉಡುಗೊರೆಗಳನ್ನು ಆಯ್ಕೆ ಮಾಡುತ್ತಾರೆ ಮತ್ತು ಅದು ಅವರ  ಸಂಬಂಧವನ್ನು ಸುಧಾರಿಸುವ ಬದಲು, ಸಂಬಂಧಗಳ ನಡುವಿನ ಅಂತರ ಹೆಚ್ಚಳಕ್ಕೆ ಕಾರಣವಾಗುತ್ತದೆ. ವಾಸ್ತವದಲ್ಲಿ ಅಂತಹ ವಸ್ತುಗಳನ್ನು ನೀಡದಿರುವುದು ಸೂಕ್ತ. ಪ್ರೇಮಿಗಳ ದಿನದಂದು ನಿಮ್ಮ ಸಂಗಾತಿಗೆ ಯಾವ ವಸ್ತುಗಳನ್ನು ಉಡುಗೊರೆ ರೂಪದಲ್ಲಿ ನೀಡಬಾರದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,

>> ಕಪ್ಪು ವಸ್ತುವು ನಿಮ್ಮ ಸಂಗಾತಿಯ ನೆಚ್ಚಿನ ಬಣ್ಣವಾಗಿರಬಹುದು, ಆದರೆ ನೀವು ಅವರಿಗೆ ಕಪ್ಪು ಬಣ್ಣದ ಉಡುಗೆ ಅಥವಾ ಯಾವುದೇ ವಸ್ತುವನ್ನು ಉಡುಗೊರೆಯಾಗಿ ನೀಡಲು ಯೋಚಿಸುತ್ತಿದ್ದರೆ, ಅದನ್ನು ಮಾಡಬೇಡಿ. ಕಪ್ಪು ಬಣ್ಣವನ್ನು ಮಂಗಳಕರ ಬಣ್ಣವೆಂದು ಪರಿಗಣಿಸಲಾಗುವುದಿಲ್ಲ ಮತ್ತು ನೀವು ಅವರಿಗೆ ಕಪ್ಪು ವಸ್ತುಗಳನ್ನು ಉಡುಗೊರೆಯಾಗಿ ನೀಡಿದರೆ ಅದು ನಿಮ್ಮ ಸಂಬಂಧದ ಮೇಲೆ ಪರಿಣಾಮ ಬೀರಬಹುದು.

>> ಕರವಸ್ತ್ರವು ತುಂಬಾ ರೋಮ್ಯಾಂಟಿಕ್ ಉಡುಗೊರೆಯಾಗಿದೆ, ಸಂಗಾತಿಗೆ ಅಗತ್ಯವಿರುವ ಕಾರಣ ನಾವು ಅದನ್ನು ಅನೇಕ ಬಾರಿ ಅಗತ್ಯವಾಗಿ ತೆಗೆದುಕೊಳ್ಳುತ್ತೇವೆ. ಆದರೆ ನಿಮ್ಮ ಸಂಗಾತಿಗೆ ಕರವಸ್ತ್ರವನ್ನು ನೀಡುವುದು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ ಎಂಬುದು ನಿಮಗೆ ತಿಳಿದಿದೆಯೇ? ಹೌದು, ಪ್ರೇಮಿಗಳ ದಿನದಂದು ಅವರಿಗೆ ಕರವಸ್ತ್ರದ ಬದಲು ಬೇರೆ ಉಡುಗೊರೆಯನ್ನು ನೀಡುವುದು ಉತ್ತಮ.

>> ಉಡುಗೊರೆಯ ರೂಪದಲ್ಲಿ ಪರ್ಫ್ಯೂಮ್ ನೀಡುವುದು ತುಂಬಾ ಸಾಮಾನ್ಯವಾಗಿದೆ. ಆದರೆ ಸಂಗಾತಿಗೆ ಉಡುಗೊರೆ ನೀಡುವ ವಿಷಯಕ್ಕೆ ಬಂದರೆ, ಸುಗಂಧ ದ್ರವ್ಯ ಅಥವಾ ಯಾವುದೊಂದು ರೀತಿಯ ಬಾಡಿ ಸ್ಪ್ರೇ ಸಂಬಂಧದಲ್ಲಿ ಬಿರುಕು ಉಂಟುಮಾಡಬಹುದು. ಸಂಗಾತಿಗೆ ಇಂತಹ ಉಡುಗೊರೆಯನ್ನು ನೀಡುವುದು ಪತಿ ಮತ್ತು ಹೆಂಡತಿಯ ನಡುವಿನ ಸಂಬಂಧವನ್ನು ಹಾಳುಮಾಡುತ್ತದೆ ಎಂದು ನಂಬಲಾಗಿದೆ.

ಇದನ್ನೂ ಓದಿ-ಮಕರ ರಾಶಿಯಲ್ಲಿ ಪವರ್ಫುಲ್ ಬುಧಾದಿತ್ಯ ರಾಜಯೋಗ, 4 ರಾಶಿಗಳ ಜನರಿಗೆ ಬಂಪರ್ ಲಾಭ!

>> ಪೆನ್ನು ಕೊಡುವ ಸಂಸ್ಕೃತಿ ಕೂಡ ತುಂಬಾ ಹಳೆ ಪದ್ಧತಿಯಾಗಿದೆ, ಆದರೆ ನೀವು ಸಂಬಂಧವನ್ನು ಗಟ್ಟಿಯಾಗಿ ಇಟ್ಟುಕೊಳ್ಳಲು ಬಯಸಿದರೆ, ಪ್ರೇಮಿಗಳ ದಿನದಂದು ನಿಮ್ಮ ಸಂಗಾತಿಗೆ ಪೆನ್ ನೀಡುವುದನ್ನು ತಪ್ಪಿಸಿ. ವಾಸ್ತು ಶಾಸ್ತ್ರದ ಪ್ರಕಾರ, ಅಂತಹ ಉಡುಗೊರೆಗಳನ್ನು ತೆಗೆದುಕೊಳ್ಳುವುದು ಮತ್ತು ನೀಡುವುದು ಸಂಬಂಧಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಇದನ್ನೂ ಓದಿ-Bruhaspati-Rahu Yuti 2023: ಮೇಷ ರಾಶಿಯಲ್ಲಿ ರಾಹು-ಗುರು ಮೈತ್ರಿ, 3 ರಾಶಿಗಳ ಜನರಿಗೆ ಕಾದಿದೆ ಗಂಡಾಂತರ!

>> ತಮ್ಮ ಸಂಗಾತಿಗೆ ಶೂಗಳು, ಚಪ್ಪಲಿಗಳು ಅಥವಾ ಸುಂದರವಾದ ಹೀಲ್ಸ್ ಅನ್ನು ಉಡುಗೊರೆಯಾಗಿ ನೀಡುವುದು ಕೂಡ ಒಂದು ಸಾಮಾನ್ಯ ಪ್ರಕ್ರಿಯೆಯಾಗಿದೆ, ಆದರೆ ಬೂಟುಗಳು ನಕಾರಾತ್ಮಕ ಶಕ್ತಿಯ ಸಂಕೇತವಾಗಿದೆ ಎಂಬುದು ನಿಮಗೆ ತಿಳಿದಿದೆಯೇ. ನಿಮ್ಮ ಪ್ರೀತಿಯಿಂದ ನಿಮ್ಮನ್ನು ದೂರವಿಡುವ ಕೆಲಸ ಅದು ಮಾಡುತ್ತದೆ. ಆದ್ದರಿಂದ ನಿಮ್ಮ ಸಂಗಾತಿಗೆ ಇಂತಹ ಉಡುಗೊರೆ ನೀಡುವುದನ್ನು ತಪ್ಪಿಸಿ.

ಇದನ್ನೂ ಓದಿ-Mahashivratri 2023: ಜಾತಕದಲ್ಲಿ ಕಾಲಸರ್ಪ ದೋಷವಿದ್ದರೆ ಮಹಾಶಿವರಾತ್ರಿಯ ದಿನ ಈ ಉಪಾಯ ಮಾಡಿ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News