ಸುಂದರ ಸಂಸಾರ ಹಾಳು ಮಾಡುತ್ತಿದೆ ಹಳೆ ಲವ್‌ ಸ್ಟೋರಿ...!

Valentines Day 2025: ಒಬ್ಬರ ಮೇಲೆ ಮನಸ್ಸು ಆಯ್ತು ಅಂದ್ರೆ ಅವರು ನಮ್ಮವರು ಅನ್ನೋ ಭಾವನೆ ಹೃದಯದಾಳದಲ್ಲಿ ನೆಲೆಯೂರಿಬಿಡುತ್ತೆ.. ಆದ್ರೆ ಎಷ್ಟು ಪ್ರೀತಿ ಪ್ರೇಮದ ಕಥೆಗಳು ಮದುವೆಯಲ್ಲಿ ಮುಕ್ತಾಯ ಆಗ್ತಾವೆ ಅಂತ ನೋಡಿದ್ರೆ ಬೆರಳೆಣಿಕೆ ಮಾತ್ರ..

Written by - MALLIKARJUN PATIL | Edited by - Yashaswini V | Last Updated : Feb 13, 2025, 03:12 PM IST
  • ಮದುವೆ ಆದ್ರೂ ಹಳೆ ಲವರ್‌ ಜೊತೆ ಮಾತುಕತೆ
  • ಲವ್ವಿಡವ್ವಿ ಗೊತ್ತಾದ್ರೆ ಬೀದಿಗೆ ಬೀಳ್ತೀರಾ ಹುಷಾರ್
  • ಮನಸ್ಸು ಚಂಚಲಗೊಂಡ್ರೆ ಸಂಸಾರವೇ ಹಾಳು
ಸುಂದರ ಸಂಸಾರ ಹಾಳು ಮಾಡುತ್ತಿದೆ ಹಳೆ ಲವ್‌ ಸ್ಟೋರಿ...! title=

Valentines Day 2025:  ಲವ್‌... ಯವ್ವನದ ಸುಂದರ ಸಮಯದಲ್ಲಿ ಅರಳುವ ಆಕರ್ಷಕ ಭಾವನೆ.. ಒಬ್ಬರಿಗೊಬ್ಬರು ಬಿಟ್ಟಿರಲಾಗದ ಭಾವ.. ಕಣ್ಣೋಟದ ಸಲುಗೆಯಿಂದ ಶುರುವಾಗಿ ಸ್ನೇಹವಾಗಿ ಬಳಿಕ ಪ್ರೀತಿಯಾಗುವ ಘಳಿಗೆಯೇ ಲವ್‌.. ಪ್ರೀತಿ ಅನ್ನೋದು ಹೀಗೆ ಹುಟ್ಟಬೇಕು ಅಂತ ಯಾವ ಶಾಸ್ತ್ರದಲ್ಲೂ ಬರೆದಿಲ್ಲ.. ಬರೆಯಲೂ ಸಾಧ್ಯವೂ ಇಲ್ಲ.. ಅದು ಆ ಕ್ಷಣದ ಭಾವನೆ ಅಷ್ಟೇ... ಒಬ್ಬರ ಮೇಲೆ ಮನಸ್ಸು ಆಯ್ತು ಅಂದ್ರೆ ಅವರು ನಮ್ಮವರು ಅನ್ನೋ ಭಾವನೆ ಹೃದಯದಾಳದಲ್ಲಿ ನೆಲೆಯೂರಿಬಿಡುತ್ತೆ.. ಆದ್ರೆ ಎಷ್ಟು ಪ್ರೀತಿ ಪ್ರೇಮದ ಕಥೆಗಳು ಮದುವೆಯಲ್ಲಿ ಮುಕ್ತಾಯ ಆಗ್ತಾವೆ ಅಂತ ನೋಡಿದ್ರೆ ಬೆರಳೆಣಿಕೆ ಮಾತ್ರ.. ಸಮಯದ ಗೊಂಬೆಯಾಗಿ, ಪರಿಸ್ಥಿತಿಗೆ ಗಂಟುಬಿದ್ದು ಬೇರೆಯವರ ಸಂಗಾತಿಯಾಗಿ ಹೋಗ್ತೀವಿ, ಪ್ರೀತಿಗೆ ಕೊನೆಯಿಲ್ಲ ಆದ್ರೆ ಪ್ರೀತಿ ಮಾಡೋರಿಗೆ ಕೊನೆಯಿದೆ ಅನ್ನೋ ಜೀವನದ ಲೆಕ್ಕಾಚಾರ ಹಾಕಿ ದೂರ ಆಗ್ತೀವಿ. 

ದೂರಾ ಏನೋ ಆಗಿಬಿಟ್ರು.. ಅಮೇಲೆ ಮನೆಯಲ್ಲಿ ತೋರಿಸಿದವರನ್ನ ಮದುವೆ ಆಗಿ ಎರಡು-ಮೂರು ವರ್ಷ ಕಳೆದ ಮೇಲೆ ಕೆಲವರಿಗೆ ಸಂಸಾರ ಅನ್ನೋದು ಸಪ್ಪೆಯಾಗಿ ಕಾಣಿಸಲು ಆರಂಭ ಆಗತ್ತೆ.. ಆಗ ಬರೋದೇ ಹಳೆ ನೆನಪುಗಳ ಕಾಟ.. ಅಯ್ಯೋ ಪ್ರೀತಿಸಿದವರನ್ನೇ ಮದುವೆ ಆಗಿದ್ರೆ ನಮ್ಮ ಲೈಫ್‌ ತುಂಬಾ ಚನ್ನಾಗಿ ಇರ್ತೀತ್ತೇನೋ ಅನ್ನೋ ಭಾವನೆ ಬರಲು ಶುರುವಾಗಿಬಿಡುತ್ತೆ.. ಇದು ಎಲ್ಲರಿಗೂ ಆಗತ್ತೆ ಅಂತ ಏನು ಇಲ್ಲ.. 100% ಜನರಲ್ಲಿ 70% ಜನರಿಗೆ ಆಗಬಹುದು.. 20% ಜನರಿಗೂ ಆಗಬಹುದು.. ಅಥವಾ ಆಗದೇ ಇರಬಹುದು.. ಆದ್ರೆ ಇಂದಿನ ಪರಿಸ್ಥಿತಿ ನೋಡಿದ್ರೆ ಹೀಗೆ ಆಗಬಹುದು ಅನ್ನೋದು ನನ್ನ ಭಾವನೆ.. ಅದರಲ್ಲಿ ಇನ್ನೂ 30% ಜನರು ಅದೊಂದು ಕೆಟ್ಟ ಕನಸು ಅಂತ ಮರೆತು ತಾವಾಯ್ತು ತಮ್ಮ ಸಂಸಾರ ಆಯ್ತು ಅಂತ ಸುಮ್ಮನೆ ಇದ್ದು ಬಿಡ್ತಾರೆ..

ಇದನ್ನೂ ಓದಿ- 2025ರಲ್ಲಿ ಈ ರಾಶಿಯವರಿಗೆ ಸಿಗಲಿದೆ ನಿಜವಾದ ಪ್ರೀತಿ, ನಿಮ್ಮ ಲವ್ ಲೈಫ್ ಹೇಗಿರುತ್ತೆ ಗೊತ್ತಾ...!

ಆಗಲೇ ಹೇಳಿದ ಹಾಗೆ ಹಳೆ ನೆನಪುಗಳು ಕಾಡೋಕೆ ಶುರು ಮಾಡಿದಾಗ ಪದೇ ಹಳೆ ಪ್ರೀತಿಯನ್ನ ಕಾಂಟ್ಯಾಕ್ಟ್‌ ಮಾಡೋಕೆ ಸಣ್ಣ ಪ್ರಯತ್ನ ಶುರುವಾಗತ್ತೆ.. FACEBOOK, INSTAGRAM ನಲ್ಲಿ ಅವರ ಹುಡುಕಾಟ ಕೂಡ ಶುರುವಾಗತ್ತೆ.. ಕೆಲವರಿಗೆ ಮೊದಲಿನಿಂದಲೂ ಕಾಂಟೆಕ್ಟ್‌ನಲ್ಲೇ ಇರ್ತಾರೆ.. ಇಲ್ಲಿಂದ ಸಂಸಾರ ಹಾಳು ಮಾಡಿಕೊಳ್ಳುವುದಕ್ಕೆ ಮೊದಲ ಹೆಜ್ಜೆ ಇಡ್ತಾರೆ.. ಅದು ಹುಡುಗಿ ಆಗಿರಬಹುದು ಅಥವಾ ಹುಡುಗನೇ ಆಗಿರಬಹುದು.. ಮತ್ತೆ ಹಳೆ ಮಾತು.. ಕದ್ದು ಮುಚ್ಚಿ ಮಾತನಾಡೋದು.. ಕೊನೆಗೆ ಕದ್ದು ಮುಚ್ಚಿ ಭೇಟಿ ಆಗೋಕು ಶುರು ಮಾಡ್ತಾರೆ.. 

ಕೆಲವೊಂದು ಯಾರಿಗೂ ಗೊತ್ತಾಗದಂತೆ ನಡೆದು ಹೋಗುತ್ತೆ.. ಇನ್ನೂ ಕೆಲವು ಸಂಸಾರವನ್ನೇ ಹಾಳು ಮಾಡುತ್ತೆ... ಮಾಡಿದ ಕೆಟ್ಟ ಕೆಲಸ ಸಪ್ತಪದಿ ತುಳಿದವರಿಗೆ ಗೊತ್ತಾಗಿ ದೊಡ್ಡ ಜಗಳವೇ ನಡೆದು ಹೋಗಿ ದೂರ ದೂರ ಆಗ್ತಾರೆ.. ಇಂತಹ ಸಾವಿರಾರು ಉದಾಹರಣೆಗಳು ನಮ್ಮಮುಂದೆ ಈಗ ಕಾಣಿಸುತ್ತಿವೆ.. ಇಷ್ಟೇಲ್ಲ ಆದಮೇಲೆ ಸಂಸಾರದಲ್ಲಿ ಒಟ್ಟಿಗೆ ಕೂಡಿ ಇರಲು ಹೇಗೆ ಸಾಧ್ಯ ಹೇಳಿ.. ಸಂಸಾರ ಹಾಳು ಮಾಡಿಕೊಂಡು ಹೊರಗೆ ಬಂದ್ರೆ ಇತ್ತ ನಮ್ಮ ಕುಟುಂಬದವರೇ ನಮ್ಮನ್ನ ನೋಡುವ ದೃಷ್ಟಿ ಬದಲಾಗಿಬಿಡುತ್ತೆ.. ಇನ್ನೂ ಸಂಸಾರ ಸರ್ವನಾಶಕ್ಕೆ ಕಾರಣವಾದ ಪ್ರೀತಿಸಿದವರ ಜೊತೆ ಹೋಗೋಣ ಅಂದ್ರೆ ಖಂಡಿತ ಮತ್ತೊಮ್ಮೆ ಮೋಸಕ್ಕೆ ದಾರಿ ಆಗಿರುತ್ತೆ.. ಮದುವೆ ಆಗು ಅಂದ್ರೆ ಖಂಡಿತವಾಗಿಯೂ ಇಲ್ಲ ಅನ್ನೋ ಉತ್ತರವೇ ಬರುತ್ತೆ...

ಇದನ್ನೂ ಓದಿ- Valentine Day 2025 Horoscope: ಪ್ರೇಮಿಗಳ ದಿನದಂದು ಈ ರಾಶಿಯವರಿಗೆ ಸಿಗಲಿದೆ ನಿಜವಾದ ಪ್ರೀತಿ, ಆತ್ಮ ಸಂಗಾತಿಯಿಂದ ಬದುಕು ಸ್ವರ್ಗ...!  

ಇಲ್ಲಿ ಯಾರ ಮನಸ್ಸು ನೋವು ಮಾಡುವ ಉದ್ದೇಶ ಇಲ್ಲ.. ಆದ್ರೆ ಶಾಲಾ ಕಾಲೇಜು ದಿನಗಳಲ್ಲಿ ಲವ್‌ ಆಗೋದು ತಪ್ಪಲ್ಲ.. ಲವ್‌ ಮಾಡಿದ್ದು ತಪ್ಪಲ್ಲ.. ಕೊನೆಗೆ ಅನಿವಾರ್ಯ ಕಾರಣಕ್ಕೆ ದೂರ ಆದ್ರೆ ಮತ್ತೆ ಒಂದಾಗುವ ತಪ್ಪು ಮಾಡಿ ಜೀವನನ್ನೇ ಹಾಳು ಮಾಡಿಕೊಳ್ಳಬೇಡಿ ಅಷ್ಟೇ.. ಇದು ಹೆಚ್ಚಾಗಿ ಯುವತಿಯರು ತಿಳಿದುಕೊಳ್ಳಬೇಕು.. ಹಾಗಂತ ಯುವಕರಿಗೆ ಪ್ಲ್ರಾಬ್ಲಂ ಇಲ್ವಾ ಅಂದುಕೊಳ್ಳಬೇಡಿ.. ಆದ್ರೆ ಯುವತಿಯರು ಹೀಗೆ ಮಾಡಿ ಸಂಸಾರ ಹಾಳು ಮಾಡಿಕೊಂಡಿದ್ದು ಸಾಕಷ್ಟು ಕಾಣಸಿಗುತ್ತಿದೆ... ನೀವಾಗಿ ಹಳೆ ಪ್ರೀತಿ ಅರಸಿ ಮತ್ತೆ ಹೋಗುವುದು.. ಅಥವಾ ಅವರೇ ಪದೇ ಪದೇ ಕಾಟ ಕೊಟ್ಟು ಮತ್ತೆ ಪ್ರೀತಿ ಮಾಡಲು ಪ್ರಚೋದನೆ ನೀಡುವುದು.. ಯಾವುದೇ ಆಗಿರಲಿ ನಿಮಗೊಂದು ಸಂಸಾರ ಅಂತ ಇದ್ದಾಗ ಅದರಲ್ಲಿ ಮುನ್ನಡೆಯುವುದನ್ನ ಕಲಿಯಿರಿ.. ನಿಮ್ಮ ಸಂಸಾರವನ್ನೇ ಹೇಗೆ ಸಂತೋಷವಾಗಿ ಇಟ್ಟುಕೊಳ್ಳಬೇಕು ಎಂಬುವುದು ಅರಿಯಿರಿ.. ಅದನ್ನ ಬಿಟ್ಟು ನಿಮ್ಮ ಒಂದು ಸಣ್ಣ ತಪ್ಪು ಹೆಜ್ಜೆ ದೊಡ್ಡ ಜೀವನವನ್ನೇ ಹಾಳು ಮಾಡಬಹುದು ಹುಷಾರ್..!

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News