ನವದೆಹಲಿ: ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯವು ತುಂಬಾ ವಿಶೇಷವಾಗಿದೆ. ಆದ್ದರಿಂದ ಈ ವೇಳೆ ಕೆಲವು ಪ್ರಮುಖ ಕೆಲಸ ಮಾಡದಂತೆ ಸಲಹೆ ನೀಡಲಾಗಿದೆ. ಹಿಂದೂ ಧರ್ಮ, ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದಲ್ಲಿ ಬೆಳಗ್ಗೆ ಮತ್ತು ಸಂಜೆ ಸಮಯದ ಬಗ್ಗೆ ಕೆಲ ನಿಯಮಗಳ ಬಗ್ಗೆ ಉಲ್ಲೇಖಿಸಲಾಗಿದೆ. ಈ ನಿಯಮಗಳು ಬೆಳಗ್ಗೆ ಮತ್ತು ಸಂಜೆ ಮಾಡಬೇಕಾದ ಮತ್ತು ಮಾಡಬಾರದ ವಿಷಯಗಳ ಕುರಿತಾಗಿವೆ.
ಸಾಯಂಕಾಲದಲ್ಲಿ ಮಾಡಲು ನಿಷಿದ್ಧವೆಂದು ಹೇಳಲಾಗುವ ಇಂತಹ ವಿಷಯಗಳ ಬಗ್ಗೆ ಇಂದು ನಾವು ನಿಮಗೆ ತಿಳಿಸಲಿದ್ದೇವೆ. ಈ ಕೆಲಸಗಳನ್ನು ಸಂಜೆ ವೇಳೆ ಮಾಡಿದರೆ ಅನೇಕ ತೊಂದರೆಗಳು ಎದುರಾಗುತ್ತವೆ. ಇದನ್ನು ಪಾಲಿಸದ ಯಾವುದೇ ವ್ಯಕ್ತಿ ದರಿದ್ರನಾಗುತ್ತಾನೆ. ಅಲ್ಲದೆ ಪಾಪದಲ್ಲಿ ಪಾಲುಗಾರನಾಗಿ ಗೌರವ ಕಳೆದುಕೊಳ್ಳುತ್ತಾನೆಂದು ಹೇಳಲಾಗಿದೆ.
ಇದನ್ನೂ ಓದಿ: Zodiac Matches: ಈ ರಾಶಿಯ ಜನರು ಲೈಫ್ ಲಾಂಗ್ ಬೆಸ್ಟ್ ಫ್ರೆಂಡ್ಸ್ ಆಗಿರುತ್ತಾರೆ
ಯಾವುದೇ ಕಾರಣಕ್ಕೂ ಸಂಜೆ ಈ ಕೆಲಸ ಮಾಡಬೇಡಿ
- ಸೂರ್ಯಾಸ್ತದ ಸಮಯದಲ್ಲಿ ಕೆಲವು ಕೆಲಸಗಳನ್ನು ಮಾಡಲು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಆದ್ದರಿಂದ ಈ ಕೆಲಸಗಳನ್ನು ಆದಷ್ಟು ತಪ್ಪಿಸಬೇಕು.
- ಸೂರ್ಯಾಸ್ತದ ಸಮಯದಲ್ಲಿ ಯಾರೂ ಮಲಗಬಾರದು. ನೀವು ಅನಾರೋಗ್ಯ ಅಥವಾ ವಯಸ್ಸಾದವರಾಗಿದ್ದರೆ ಇದರಿಂದ ವಿನಾಯಿತಿ ತೆಗೆದುಕೊಳ್ಳಬಹುದು. ಇಲ್ಲದಿದ್ದರೆ ಆರೋಗ್ಯವಂತ ಜನರು ಸಂಜೆ ಮಲಗಬಾರದು. ಇದನ್ನು ಮಾಡುವುದರಿಂದ ತಾಯಿ ಲಕ್ಷ್ಮಿದೇವಿ ಕೋಪಗೊಳ್ಳುತ್ತಾಳಂತೆ.
- ಸೂರ್ಯಾಸ್ತದ ಸಮಯದಲ್ಲಿ ಆಹಾರ ಸೇವಿಸಬಾರದು. ಹೀಗೆ ಮಾಡುವುದರಿಂದ ಮುಂದಿನ ಜನ್ಮದಲ್ಲಿ ಪ್ರಾಣಿಯಾಗಿ ಹುಟ್ಟುತ್ತಾರಂತೆ.
- ಸಂಜೆ ಯಾರಿಗೂ ಹಾಲು, ಮೊಸರು, ಉಪ್ಪನ್ನು ದಾನ ಮಾಡಬಾರದಂತೆ. ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿರುವ ಲಕ್ಷ್ಮಿ ದೂರವಾಗುತ್ತಾಳಂತೆ.
- ಸಂಜೆ ವೇಳೆ ಯಾರಿಗೂ ಸಾಲ ನೀಡಬಾರದಂತೆ. ಒಂದು ವೇಳೆ ಈ ಸಮಯದಲ್ಲಿ ಸಾಲ ಕೊಟ್ಟರೆ ತಾಯಿ ಲಕ್ಷ್ಮಿದೇವಿ ಕೋಪಗೊಳ್ಳುತ್ತಾಳಂತೆ.
- ಸಂಜೆ ಅಧ್ಯಯನ ಮಾಡುವ ಬದಲು ಪ್ರಾರ್ಥನೆ ಮಾಡುವುದು ಉತ್ತಮ. ಹೀಗಾಗಿ ಈ ಸಮಯದಲ್ಲಿ ಮಂತ್ರ ಜಪ ಅಥವಾ ಆರತಿ ಮಾಡಲಾಗುತ್ತದೆ.
- ಪತಿ-ಪತ್ನಿ ಸಂಧ್ಯಾಕಾಲದಲ್ಲಿ ಎಂದಿಗೂ ಸಂಬಂಧವನ್ನು ಹೊಂದಬಾರದು. ಗರುಡ ಪುರಾಣದ ಪ್ರಕಾರ ಹೀಗೆ ಮಾಡುವುದು ಸಂಸ್ಕಾರಹೀನವಂತೆ.
- ಸಂಜೆ ಅಪ್ಪಿತಪ್ಪಿಯೂ ಗುಡಿಸುವುದು, ಒರೆಸುವುದು ಮಾಡಬಾರದು. ಹೀಗೆ ಮಾಡುವುದರಿಂದ ಹಣದ ನಷ್ಟ ಮತ್ತು ದುಂದುಗಾರಿಕೆ ಹೆಚ್ಚಾಗುತ್ತದಂತೆ.
ಇದನ್ನೂ ಓದಿ: ಈ ರಾಶಿಯವರು ತುಂಬಾ ತಮಾಷಿಗರು ಮತ್ತೆ ಅಷ್ಟೆ ಕೋಪಿಷ್ಟರು!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.