Massive Tariff Hikes: Jio, Airtel ಮತ್ತು Vi ಕಂಪನಿಗಳು ಇತ್ತೀಚಿಗೆ 84 ದಿನಗಳ ವ್ಯಾಲಿಡಿಟಿ ಹೊಂದಿದ್ದ 719 ರೂ.ಗಳ ರಿಚಾರ್ಜ್ ಪ್ಲ್ಯಾನ್ ಬಿಡುಗಡೆ ಮಾಡಿದ್ದವು. ಈ ರಿಚಾರ್ಜ್ ಮಾಡಿಸಿಕೊಂಡಲ್ಲಿ ಹಲವು ಪ್ರಯೋಜನಗಳಿದ್ದವು, ಈಗ ಈ ರಿಚಾರ್ಜ್ ಪ್ಲ್ಯಾನ್‌ಗಳ ಬೆಲೆ ಏರಿಕೆಯಾಗಲಿವೆ.
Massive Tariff Hikes: ಭಾರತದ ಟೆಲಿಕಾಂ ಕಂಪನಿಗಳು ತಮ್ಮ ರಿಚಾರ್ಜ್ ಪ್ಲ್ಯಾನ್‌ಗಳ ಬೆಲೆಯನ್ನು ಏರಿಸಲು ನಿರ್ಧರಿಸಿವೆ. ಈ ಬಾರಿ ರಿಚಾರ್ಜ್ ಪ್ಲ್ಯಾನ್‌ಗಳು ಮತ್ತಷ್ಟು ದುಬಾರಿ ಆಗಲಿದ್ದು, ಗ್ರಾಹರಕ ಜೇಬಿಗೆ ಕತ್ತರಿ ಬೀಳಲಿದೆ. ಟೆಲಿಕಾಂ ಕಂಪನಿಗಳು ತಮ್ಮ ಗ್ರಾಹಕರನ್ನು ಖುಷಿಪಡಿಸಲು ಹೆಚ್ಚು ದಿನಗಳ ವ್ಯಾಲಿಡಿಟಿ ಇರುವ ರಿಚಾರ್ಜ್ ಪ್ಲ್ಯಾನ್‌ಗಳನ್ನು ಪರಿಚಯಿಸಿದ್ದವು. ಈ ಪ್ಲ್ಯಾನ್‌ಗಳ ಜೊತೆಗೆ ಹಲವು ಕಂಪನಿಗಳು ವಿವಿಧ OTTಗಳಿಗೆ ಉಚಿತ Access ನೀಡಿದ್ದವು. ಆದರೆ ಇದೀಗ ರಿಚಾರ್ಜ್ ಮೊತ್ತದಲ್ಲಿ ಏರಿಕೆ ಆಗಲಿದ್ದು, ಕ್ಯೋಟಿಂತರ ಗ್ರಾಹಕರಿಗೆ ಮತ್ತಷ್ಟು ಹೊರೆ ಬೀಳಿಲಿದೆ. Jio, Airtel ಮತ್ತು Vi ಕಂಪನಿಗಳು ಇತ್ತೀಚಿಗೆ 84 ದಿನಗಳ ವ್ಯಾಲಿಡಿಟಿ ಹೊಂದಿದ್ದ 719 ರೂ.ಗಳ ರಿಚಾರ್ಜ್ ಪ್ಲ್ಯಾನ್ ಬಿಡುಗಡೆ ಮಾಡಿದ್ದವು. ಈ ರಿಚಾರ್ಜ್ ಮಾಡಿಸಿಕೊಂಡಲ್ಲಿ ಹಲವು ಪ್ರಯೋಜನಗಳಿದ್ದವು, ಈಗ ಈ ರಿಚಾರ್ಜ್ ಪ್ಲ್ಯಾನ್‌ಗಳ ಬೆಲೆ ಏರಿಕೆಯಾಗಲಿವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಜಿಯೋ & ಏರ್‌ಟೆಲ್‌ನ ರೀಚಾರ್ಜ್ ಯೋಜನೆಗಳು ಜುಲೈ 3ರಿಂದ ದುಬಾರಿಯಾಗಲಿವೆ. ಈ ದಿನಾಂಕದಿಂದ ರಿಚಾರ್ಜ್ ಮಾಡಿಸಿಕೊಂಡರೆ ನಿಮಗೆ 140 ರೂ. ಹೆಚ್ಚು ಹೊರೆ ಬೀಳಲಿದೆ. ರೀಚಾರ್ಜ್ ಯೋಜನೆಗಳ ಹೊಸ ಪಟ್ಟಿಯಲ್ಲಿ 719 ರೂ. ಯೋಜನೆ ಪ್ಲ್ಯಾನ್ ಮೇಲೆ 140 ರೂ. ಹೆಚ್ಚುವರಿ ಪಾವತಿಸಬೇಕು. ಬಳಕೆದಾರರು ಈ ರಿಚಾರ್ಜ್ ಯೋಜನೆಗೆ 859 ರೂ. ಖರ್ಚು ಮಾಡಬೇಕಾಗುತ್ತದೆ. 84 ದಿನಗಳ ವ್ಯಾಲಿಡಿಟಿಯ ಈ ಯೋಜನೆಯ ಲಾಭ ಬೇಕಾದ್ರೆ ನೀವು ಈಗಲೇ 719 ರೂ. ಪಾವತಿಸಬೇಕು. ಜುಲೈ 3ರ ನಂತರ ಈ ರಿಚಾರ್ಜ್ ಪ್ಲ್ಯಾನ್ ದುಬಾರಿಯಾಗಲಿದೆ. ಆದರೆ Vi ಬಳಕೆದಾರರಿಗೆ ಜುಲೈ 4ರವರೆಗೆ ಅವಕಾಶವಿರುತ್ತದೆ.
Jioನಂತೆ ಏರ್‌ಟೆಲ್ ತನ್ನ ಗ್ರಾಹಕರಿಗೆ 84 ದಿನಗಳವರೆಗೆ 719 ರೂ.ಗೆ ಅನಿಯಮಿತ ಕರೆ ಮತ್ತು 100 SMS ಸೌಲಭ್ಯವನ್ನು ಒದಗಿಸುತ್ತದೆ. ಏರ್‌ಟೆಲ್‌ನ 719 ರೂ.ನ ಯೋಜನೆಯು ದಿನಕ್ಕೆ 1.5GB ಡೇಟಾದೊಂದಿಗೆ ಬರುತ್ತದೆ.
ಜಿಯೋದ 719 ರೂ. ರಿಚಾರ್ಜ್ ಪ್ಲ್ಯಾನ್ ಎಲ್ಲರ ಆಯ್ಕೆಯ ಪ್ಲ್ಯಾನ್ ಆಗಿದೆ. ಈ ರಿಚಾರ್ಜ್ ಪ್ಲ್ಯಾನ್ ಇನ್ನೆರಡು ದಿನಗಳಲ್ಲಿ ರಿಚಾರ್ಜ್ ಮಾಡಿಸಿಕೊಂಡಲ್ಲಿ ನೀವು 140 ರೂ. ಉಳಿಸಬಹುದು. ಇದದರೊಂದಿಗೆ ಪ್ರತಿದಿನ 2GB ಡೇಟಾ, ಅನಿಯಮಿತ ಕರೆ ಮತ್ತು SMS ಸೌಲಭ್ಯ ಪಡೆಯಬಹುದು. ಇದರೊಂದಿಗೆ ಅನಿಯಮಿತ 5G ಡೇಟಾ ಮತ್ತು Jio ಅಪ್ಲಿಕೇಶನ್‌ಗಳ ಪ್ರಯೋಜನ ಸಹ ನೀಡಲಾಗುತ್ತಿದೆ. ಏರಟೆಲ್ ಗ್ರಾಹಕರು ಇಷ್ಟೇ ರಿಚಾರ್ಜ್ ಮಾಡಿಸಿಕೊಂಡಲ್ಲಿ ಪ್ರತಿದಿನ ಕೇವಲ 1.5GB ಡೇಟಾ ಸಿಗುತ್ತದೆ.
Vodafone Idea 719 ರೂ.ಗೆ 1.5GB ಡೇಟಾ, ಅನಿಯಮಿತ ಕರೆ ಮತ್ತು ದಿನಕ್ಕೆ 100 SMS ಒದಗಿಸುತ್ತದೆ. ಇದಲ್ಲದೆ ಅನಿಯಮಿತ ಡೇಟಾ, ವಾರಾಂತ್ಯದ ಡೇಟಾ ರೋಲ್‌ಓವರ್‌ನ ಪ್ರಯೋಜನ ಪಡೆಯಬಹುದು. ಮಧ್ಯರಾತ್ರಿ 12ರಿಂದ ಬೆಳಗ್ಗೆ 6ರವರೆಗೆ ಉಚಿತ ಡೇಟಾ ಸಹ ನೀಡಲಾಗುತ್ತದೆ. ನೀವು ರಾತ್ರಿ 12 ಗಂಟೆಯ ನಂತರ ಹೆಚ್ಚು ಇಂಟರ್ನೆಟ್ ಬಳಸುವ ಗ್ರಾಹಕರಾಗಿದ್ದರೆ ಯೋಜನೆ ನಿಮಗೆ ಉತ್ತಮ ಆಯ್ಕೆಯಾಗಿದೆ.