Money Tips: ಹಲವು ಬಾರಿ ಎಷ್ಟೇ ಕಷ್ಟ ಪಟ್ಟು ದುಡಿದು ಹಣ ಸಂಪಾದಿಸಿದರು ಕೂಡ ಕೈಯಲ್ಲಿ ಹಣ ಉಳಿಯುವುದಿಲ್ಲ. ಕೈತುಂಬಾ ಹಣ ಸಂಪಾದಿಸಿದರೂ ಕೂಡ ಸದಾ ಹಣದ ಕೊರತೆ ಕಾಡುತ್ತಿರುತ್ತದೆ. ದುಂದು ವೆಚ್ಚ, ಲೆಕ್ಕಾಚಾರ ಇಲ್ಲದೆ ಹಣ ವ್ಯಯಿಸುವುದು, ಬೇಜವಾಬ್ದಾರಿ ತನ ಸೇರಿದಂತೆ ಇದಕ್ಕೆ ಹಲವು ಕಾರಣಗಳಿರಬಹುದು. ಇದಲ್ಲದೆ ಕೆಲವು ವಾಸ್ತು ದೋಷಗಳೂ ಕೂಡ ಇದಕ್ಕೆ ಕಾರಣವಾಗಿರಬಹುದು. ನೀವೂ ಸಹ ಹಣದ ಬಿಕ್ಕಟ್ಟನ್ನು ಎದುರಿಸುತ್ತಿದ್ದರೆ, ಪರ್ಸ್‌ಗೆ ಸಂಬಂಧಿಸಿದ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ. ಪರ್ಸ್‌ನಲ್ಲಿ ಈ ವಸ್ತುಗಳಿದ್ದರೆ ಹಣದ ಬಿಕ್ಕಟ್ಟು ಎಂದಿಗೂ ಕೊನೆಗೊಳ್ಳುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಹರಿದ ಪರ್ಸ್ ಅನ್ನು ಎಂದಿಗೂ ಇಟ್ಟುಕೊಳ್ಳಬೇಡಿ. ಹೀಗೆ ಮಾಡುವುದರಿಂದ ಲಕ್ಷ್ಮಿಯು ಕೋಪಗೊಳ್ಳುತ್ತಾಳೆ. (ಎಲ್ಲಾ ಫೋಟೋಗಳು ಸಾಂದರ್ಭಿಕ ಫೋಟೋಗಳಷ್ಟೇ) ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಶಾರ್ಪ್ ಅಥವಾ ಚೂಪಾದ ವಸ್ತುಗಳು ಅಥವಾ ಲೋಹದ ವಸ್ತುಗಳನ್ನು ಎಂದಿಗೂ ಪರ್ಸ್‌ನಲ್ಲಿ ಇಡಬೇಡಿ. ಅದು ನಕಾರಾತ್ಮಕತೆಯನ್ನು ತರುತ್ತದೆ, ಮಾತ್ರವಲ್ಲ ಹಣದ ಬಿಕ್ಕಟ್ಟನ್ನು ಸೃಷ್ಟಿಸುತ್ತದೆ ಎನ್ನಲಾಗುವುದು.
ಅನೇಕ ಜನರು ತಮ್ಮ ಮೃತ ಸಂಬಂಧಿಕರ ಫೋಟೋಗಳನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳುತ್ತಾರೆ. ಹೀಗೆ ಮಾಡುವುದರ ಹಿಂದೆ ಅವರಿಗೆ ಭಾವನಾತ್ಮಕ ಬಾಂಧವ್ಯವಿರುತ್ತದೆ. ಆದರೆ ಸತ್ತವರ ಫೋಟೋವನ್ನು ಪರ್ಸ್‌ನಲ್ಲಿ ಇಡುವುದರಿಂದ ಲಕ್ಷ್ಮಿ ದೇವಿಗೆ ಕೋಪ ಬರುತ್ತದೆ. ಈ ಕಾರಣದಿಂದಾಗಿ, ಅಂತಹ ಜನರ ಬಳಿ ಯಾವಾಗಲೂ ಹಣದ ಕೊರತೆ ಇರುತ್ತದೆ ಎಂದೂ ಸಹ ಹೇಳಲಾಗುತ್ತದೆ.
ಅನೇಕ ಜನರು ತಮ್ಮ ಪರ್ಸ್‌ನಲ್ಲಿ ಹಳೆಯ ಬಿಲ್-ರಶೀದಿಗಳ ಬಂಡಲ್ ಅನ್ನು ಇಡುವ ಅಭ್ಯಾಸ ಹೊಂದಿರುತ್ತಾರೆ. ಅವರ ಈ ಅಭ್ಯಾಸವು ಹಣದ ನಷ್ಟಕ್ಕೆ ಕಾರಣವಾಗಬಹುದು. ಹಾಗಾಗಿ ಈ ವಸ್ತುಗಳನ್ನು ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳಬೇಡಿ.
ಅನೇಕ ಜನರು ಪರ್ಸ್‌ನಲ್ಲಿ ದೇವರ ಫೋಟೋವನ್ನು ಇಟ್ಟುಕೊಳ್ಳುತ್ತಾರೆ ಅಥವಾ ದೇವರ ಫೋಟೋ ಇರುವಂತಹ ಯಾವುದೇ ಕಾಗದವನ್ನು ಇಟ್ಟುಕೊಳ್ಳುತ್ತಾರೆ. ಅವರ ಈ ತಪ್ಪು ಅವರನ್ನು ಸಾಲದ ಹೊರೆಯಲ್ಲಿ ಸಿಲುಕಿಸುತ್ತಲೇ ಇರುತ್ತದೆ. ನೀವು ಸಾಲವನ್ನು ತಪ್ಪಿಸಲು ಬಯಸಿದರೆ, ಪರ್ಸ್‌ನಲ್ಲಿ ಎಂದೂ ಸಹ ದೇವರ ಫೋಟೋ ಇಡಬೇಡಿ.