Onion and coconut oil: ಅತೀ ಸಣ್ಣ ವಯಸ್ಸಿನಲ್ಲಿಯೇ ಕೂದಲು ಬಿಳಿಯಾಗುವುದು ಹಾಗೂ ಕೂದಲು ಉದುರುವುದು ಸಾಮಾನ್ಯವಾಗಿ ತಲೆನೋವು ಉಂಟು ಮಾಡುತ್ತದೆ. ಹಲವರು ಈ ಸಮಸ್ಯೆಯಿಂದ ಭಾದಿತರಾಗಿದ್ದಾರೆ. ಈ ಟಿಪ್ಸ್ ಬಳಸಿ ನಿಮ್ಮ ಕೂದಲಿನ ಸಮಸ್ಯೆಗಳಿಗೆ ಗುಡ್ ಬೈ ಹೇಳಬಹುದು.
ಅತೀ ಸಣ್ಣ ವಯಸ್ಸಿನಲ್ಲಿಯೇ ಕೂದಲು ಬಿಳಿಯಾಗುವುದು ಹಾಗೂ ಕೂದಲು ಉದುರುವುದು ಸಾಮಾನ್ಯವಾಗಿ ತಲೆನೋವು ಉಂಟು ಮಾಡುತ್ತದೆ. ಹಲವರು ಈ ಸಮಸ್ಯೆಯಿಂದ ಭಾದಿತರಾಗಿದ್ದಾರೆ. ಈ ಟಿಪ್ಸ್ ಬಳಸಿ ನಿಮ್ಮ ಕೂದಲಿನ ಸಮಸ್ಯೆಗಳಿಗೆ ಗುಡ್ ಬೈ ಹೇಳಬಹುದು.
ಚಿಕ್ಕ ವಯಸ್ಸಿನಲ್ಲಿ ಬಿಳಿ ಕೂದಲು ಕೂಡ ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅತೀ ಸಣ್ಣ ವಯಸ್ಸಿನಲ್ಲಿಯೇ ಕೂದಲು ಬಿಳಿಯಾಗುವುದು ಸಾರ್ವಜನಿಕ ಸ್ಥಳಗಳಲ್ಲಿ ನಮ್ಮನ್ನು ಮುಜುಗರಕ್ಕೀಡಾಗುವಂತೆ ಮಾಡುತ್ತದೆ. ಅಷ್ಟೆ ಅಲ್ಲ ಸಹಪಾಠಿಗಳು ಅಪಹಾಸ್ಯ ಮಾಡುವಂತಾಗುತ್ತದೆ.
ಕೂದಲನ್ನು ಕಪ್ಪು ಮಾಡಲು ವಿವಿಧ ವಿಧಾನಗಳನ್ನು ಬಳಸಲಾಗುತ್ತದೆ. ಆದಾಗ್ಯೂ, ಕೆಲವು ಮನೆಮದ್ದುಗಳನ್ನು ಅನುಸರಿಸುವ ಮೂಲಕ ನೀವು ನೈಸರ್ಗಿಕವಾಗಿ ಬಿಳಿ ಕೂದಲನ್ನು ತೊಡೆದುಹಾಕಬಹುದು. ಅಷ್ಟೆ ಅಲ್ಲದೆ ಈ ಮೂಲಕ ನಿಮ್ಮ ಕೂದಲನ್ನು ದಟ್ಟವಾಗಿ ಬೆಲೆಯುವಂತೆ ಮಾಡಬಹುದು.
ನಿಮ್ಮ ಕೂದಲನ್ನು ನೃಸರ್ಗಿಕವಾಗಿ ಕಪ್ಪಾಗಿಸಲು ನೀವು ಅನೇಕ ಮನೆ ಮದ್ದುಗಳನ್ನು ಬಳಸಬಹುದು. ಆದರೆ, ತೆಂಗಿಣ ಎಣ್ಣೆ ಹಾಗೂ ಇರುಳ್ಳಿ ರಸ ನಿಮ್ಮ ಕೂದಲನ್ನು ಕಪ್ಪಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಷ್ಟೆ ಅಲ್ಲ ನಿಮ್ಮ ಕೂದಲಿನ ಬೆಳವಣಿಗೆಯಲ್ಲೂ ಇದು ಸಹಾಯ ಮಾಡುತ್ತದೆ.
ಈರುಳ್ಳಿ ರಸ ಮತ್ತು ತೆಂಗಿನ ಎಣ್ಣೆಯನ್ನು ಒಟ್ಟಿಗೆ ಹಚ್ಚುವುದು ತುಂಬಾ ಪ್ರಯೋಜನಕಾರಿ. ಇದನ್ನು ಹಚ್ಚುವುದರಿಂದ ಕೂದಲಿಗೆ ಸಾಕಷ್ಟು ಪೋಷಣೆ ದೊರೆಯುತ್ತದೆ. ಅದರಿಂದ ಕೂದಲಿನ ಬೆಳವಣಿಗೆ ಕೂಡ ಹೆಚ್ಚಾಗುತ್ತದೆ.
ಈರುಳ್ಳಿ ರಸ ಮತ್ತು ಕೊಬ್ಬರಿ ಎಣ್ಣೆಯನ್ನು ಒಟ್ಟಿಗೆ ಹಚ್ಚುವುದರಿಂದ ಬೂದು ಕೂದಲು ಬೇಗನೆ ನಿವಾರಣೆಯಾಗುತ್ತದೆ. ಇದರಿಂದ ಕೂದಲು ಬೇಗನೆ ಕಡು ಗಪ್ಪಾಗುವುದಷ್ಟೆ ಅಲ್ಲದೆ ನಿಮ್ಮ ಕೂದಲನ್ನು ದಪ್ಪವಾಗಿ ಬೆಲೆಯುವಂತೆ ಮಾಡುತ್ತದೆ.
ನಿಮ್ಮ ಕೂದಲು ತೆಳ್ಳಗೆ ಮತ್ತು ದುರ್ಬಲವಾಗಿದ್ದರೆ ನೀವು ತೆಂಗಿನ ಎಣ್ಣೆ ಮತ್ತು ಈರುಳ್ಳಿ ರಸದ ಮಿಶ್ರಣವನ್ನು ತಲೆಗೆ ಹಚ್ಚಿ, ಇದು ಕೂದಲನ್ನು ಬಲವಾಗಿ ಮಾಡುವುದಷ್ಟೆ ಅಲ್ಲದೆ ಇದು ಕೂದಲನ್ನು ದಪ್ಪ ಹಾಗೂ ಉದ್ದವಾಗಿ ಬೆಳೆಯುವಂತೆ ಮಾಡುತ್ತದೆ.
ತೆಂಗಿನೆಣ್ಣೆ ಮತ್ತು ಈರುಳ್ಳಿ ರಸವನ್ನು ಕೂದಲಿಗೆ ಹಚ್ಚುವುದರಿಂದ ತಲೆಹೊಟ್ಟು ಕೂಡ ನಿವಾರಣೆಯಾಗುತ್ತದೆ. ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ನಿಮ್ಮ ಕೂದಲಿನ ಸಮಸ್ಯೆಗಲಿಗೆ ಇದು ಬೆಸ್ಟ್ ಮದ್ದು ಎಂದೆ ಹೇಳಬಹುದು.