Orange For Weight Loss: ಇತ್ತೀಚಿನ ದಿನಗಳಲ್ಲಿ ಅಧಿಕ ತೂಕ ಹೊಂದಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅನೇಕ ಜನರು ತೂಕ ಇಳಿಸಿಕೊಳ್ಳಲು ಹಲವಾರು ವಿಧಾನಗಳನ್ನು ಪ್ರಯತ್ನಿಸುತ್ತಾರೆ.ಆದರೆ, ಕೆಲವೊಬ್ಬರು ಎಷ್ಟೇ ಪ್ರಯತ್ನಿಸಿದರೂ ಕೂಡ ತೂಕ ಕಡಿಮೆಯಾಗುವುದೆ ಇಲ್ಲ. ಆದರೆ ಕೆಲವು ಹಣ್ಣುಗಳ ಸೇವನೆಯಿಂದ ತೂಕವನ್ನು ಕಳೆದುಕೊಳ್ಳುವುದು ಸುಲಭ.
Orange For Weight Loss: ಇತ್ತೀಚಿನ ದಿನಗಳಲ್ಲಿ ಅಧಿಕ ತೂಕ ಹೊಂದಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅನೇಕ ಜನರು ತೂಕ ಇಳಿಸಿಕೊಳ್ಳಲು ಹಲವಾರು ವಿಧಾನಗಳನ್ನು ಪ್ರಯತ್ನಿಸುತ್ತಾರೆ.ಆದರೆ, ಕೆಲವೊಬ್ಬರು ಎಷ್ಟೇ ಪ್ರಯತ್ನಿಸಿದರೂ ಕೂಡ ತೂಕ ಕಡಿಮೆಯಾಗುವುದೆ ಇಲ್ಲ. ಆದರೆ ಕೆಲವು ಹಣ್ಣುಗಳ ಸೇವನೆಯಿಂದ ತೂಕವನ್ನು ಕಳೆದುಕೊಳ್ಳುವುದು ಸುಲಭ.
ಅಂತಹ ಹಣ್ಣುಗಳಲ್ಲಿ ಕಿತ್ತಳೆ ಹಣ್ಣು ಕೂಡ ಒಂದು. ಕಿತ್ತಳೆ ಹಣ್ಣು ತೂಕವನ್ನು ಕಡಿಮೆ ಮಾಡಲು ಪರಿಣಾಮಕಾರಿ. ಹಾಗಾದರೆ ಕಿತ್ತಳೆ ಹಣ್ಣು ನಮಗೆ ಹೇಗೆ ಉಪಯುಕ್ತ ಎಂದು ತಿಳಿಯಲು ಮುಂದೆ ಓದಿ....
ಕಿತ್ತಳೆ ಹಣ್ಣಿನ ಸೇವನೆ ಬಿಪಿಯನ್ನು ನಿಯಂತ್ರಣದಲ್ಲಿಡುತ್ತದೆ, ಇದು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು.ಇದು ಅಧಿಕ ತೂಕವನ್ನು ಕಡಿಮೆ ಮಾಡುವುದು ಮಾತ್ರವಲ್ಲದೆ ಅನೇಕ ರೋಗಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ.
ಅದರಲ್ಲೂ ಕಿತ್ತಳೆ ಹಣ್ಣಿನ ಸೇವನೆ ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಅಧಿಕ ರಕ್ತದೊತ್ತಡ ಇರುವವರು ಈ ಹಣ್ಣನ್ನು ತಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಲು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.
ಕಿತ್ತಲೆ ಹಣ್ಣಿನಲ್ಲಿ ರೋಗನಿರೋಧಕ ಶಕ್ತಿ ಹೇರಳವಾಗಿದೆ. ವಾಸ್ತವವಾಗಿ ಕಿತ್ತಳೆ ಹಣ್ಣನ್ನು ಸೂಪರ್ ಫುಡ್ ಎಂದೂ ಕರೆಯುತ್ತಾರೆ. ಈ ಕಿತ್ತಳೆ ಹಣ್ಣಿನಲ್ಲಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹ ಸಹಾಯ ಮಾಡುತ್ತದೆ.
ದುರ್ಬಲ ಮೂಳೆಗಳು, ಅಕಾಲಿಕ ಮೂಳೆ ನೋವು ಮುಂತಾದ ಸಮಸ್ಯೆ ಇರುವವರು ನಿಯಮಿತವಾಗಿ ಕಿತ್ತಳೆ ತಿನ್ನುವುದನ್ನು ರೂಢಿಸಿಕೊಳ್ಳಿ. ಇದು ನಿಮ್ಮ ದೇಹವನ್ನು ಫಿಟ್ ಆಗಿ ಇಡುವುದಷ್ಟೆ ಅಲ್ಲದೆ ಮೂಳೆಗಳನ್ನು ಸಹ ಬಲ ಪಡಿಸುವಲ್ಲಿ ಸಹಾಯ ಮಾಡುತ್ತದೆ.
ಕಿತ್ತಳೆ ಹಣ್ಣುಗಳು ಕ್ಯಾನ್ಸರ್ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ. ನಮಗೆ ಕ್ಯಾನ್ಸರ್ ಬರಬಹುದು ಎಂದು ಭಾವಿಸುವವರು ಇದನ್ನು ಪ್ರತಿದಿನ ತಿನ್ನಬೇಕು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಕಿತ್ತಳೆ ಹಣ್ಣಿನಲ್ಲಿ ಉತ್ಕರ್ಷಣ ನಿರೋಧಕ ಗುಣಗಳು ಹೇರಳವಾಗಿವೆ. ಇವು ಅನೇಕ ರೋಗಗಳಿಂದ ನಮ್ಮನ್ನು ರಕ್ಷಿಸುತ್ತವೆ. ಇದರಲ್ಲಿರುವ ಬೀಟಾ ಕ್ಯಾರೋಟಿನ್ ಆಸ್ಕೋರ್ಬಿಕ್ ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ.
ಕಿತ್ತಳೆ ಹಣ್ಣನ್ನು ಆಗಾಗ್ಗೆ ಸೇವಿಸುವುದರಿಂದ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ತ್ವರಿತವಾಗಿ ಕಡಿಮೆ ಮಾಡಬಹುದು. ಇದಲ್ಲದೆ, ಇದರಲ್ಲಿರುವ ವಿಟಮಿನ್ ಬಿ 6 ಹಿಮೋಗ್ಲೋಬಿನ್ ಉತ್ಪಾದನೆಗೆ ಸಹಾಯ ಮಾಡುತ್ತದೆ.
ಈ ಹಣ್ಣು ಕಿವಿಯ ಸೋಂಕು ಮತ್ತು ನೆಗಡಿಯಂತಹ ಸಮಸ್ಯೆಗಳನ್ನು ಸಹ ಕಡಿಮೆ ಮಾಡುತ್ತದೆ. ಇದಲ್ಲದೆ, ಇದು ಚರ್ಮದ ಆರೋಗ್ಯವನ್ನು ಸಹ ರಕ್ಷಿಸುತ್ತದೆ. ಇವುಗಳಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ನಿಮ್ಮನ್ನು ಸದಾ ಯಂಗ್ ಆಗಿ ಕಾಣುವಂತೆ ಮಾಡುತ್ತದೆ.
ಕಿತ್ತಳೆ ಕಣ್ಣಿನ ಆರೋಗ್ಯಕ್ಕೂ ಒಳ್ಳೆಯದು. ಅವುಗಳಲ್ಲಿರುವ ವಿಟಮಿನ್ ಎ ದೃಷ್ಟಿ ಸುಧಾರಿಸುತ್ತದೆ. ಇದಲ್ಲದೆ, ಇದು ವಯಸ್ಸಿಗೆ ಸಂಬಂಧಿಸಿದ ಕಣ್ಣಿನ ಸಮಸ್ಯೆಗಳಿಂದ ರಕ್ಷಿಸುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯೂ ಸಾಮಾನ್ಯ ಜ್ನಾನ ಹಾಗೂ ಮೂಲಗಳ ಮಾಹಿತಿಯನ್ನು ಆಧರಿಸಿದೆ, ZEE KANNADA NEWS ಇದನ್ನು ಖಚಿತ ಪಡಿಸುವುದಿಲ್ಲ.