WhatsApp New Features - ಸಾಮಾಜಿಕ ಮಾಧ್ಯಮ ವೇದಿಕೆ WhatsApp ವಿಶ್ವಾದ್ಯಂತ ಬಳಕೆಯಾಗುವ ಅತ್ಯಂತ ಜನಪ್ರೀಯ ವೇದಿಕೆಯಾಗಿದೆ. ಚಾಟಿಂಗ್ ಜೊತೆಗೆ, ಈ ಅಪ್ಲಿಕೇಶನ್ ಮುಂದೆಯೂ ಕೂಡ ಅನೇಕ ಆಸಕ್ತಿದಾಯಕ ವೈಶಿಷ್ಟ್ಯಗಳನ್ನು (WhatsApp Notifications) ನೀಡುತ್ತಿದೆ.
WhatsApp New Features - ಸಾಮಾಜಿಕ ಮಾಧ್ಯಮ ವೇದಿಕೆ WhatsApp ವಿಶ್ವಾದ್ಯಂತ ಬಳಕೆಯಾಗುವ ಅತ್ಯಂತ ಜನಪ್ರೀಯ ವೇದಿಕೆಯಾಗಿದೆ. ಚಾಟಿಂಗ್ ಜೊತೆಗೆ, ಈ ಅಪ್ಲಿಕೇಶನ್ ಮುಂದೆಯೂ ಕೂಡ ಅನೇಕ ಆಸಕ್ತಿದಾಯಕ ವೈಶಿಷ್ಟ್ಯಗಳನ್ನು (WhatsApp Notifications) ನೀಡುತ್ತಿದೆ ಮತ್ತು ಪ್ರತಿ ನವೀಕರಣದೊಂದಿಗೆ, WhatsApp ಬಳಕೆದಾರರಿಗೆ (WhatsApp New Updates) ಈ ಹೊಸ ವೈಶಿಷ್ಟ್ಯಗಳನ್ನು ಸೇರಿಸುತ್ತದೆ. ಇತ್ತೀಚೆಗಷ್ಟೇ ವಾಟ್ಸ್ ಆಪ್ ಮತ್ತೆರಡು ವೈಶಿಷ್ಟ್ಯಗಳನ್ನು (WhatsApp Updates) ಜಾರಿಗೆ ತರಲಿದೆ ಎನ್ನಲಾಗಿದೆ. ಹಾಗಾದರೆ ಬನ್ನಿ ಈ ವೈಶಿಷ್ಟ್ಯಗಳ ಕುರಿತು ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳೋಣ.
ಇದನ್ನೂ ಓದಿ-ಫಿಲಂ ಚೇಂಬರ್ ನಲ್ಲಿ ಇಂದು ಮಹತ್ವದ ಸಭೆ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
1. ವಾಟ್ಸ್ ಆಪ್ ಮೇಲೆ ಹೊಸ ವೈಶಿಷ್ಟ್ಯ - ವರದಿಗಳ ಪ್ರಕಾರ ವಾಟ್ಸ್ ಆಪ್ ಶೀಘ್ರದಲ್ಲಿಯೇ ವಾಟ್ಸ್ ಆಪ್ ಎರಡು ಹೊಸ ವೈಶಿಷ್ಟ್ಯಗಳನ್ನು ಬಿಡುಗಡೆಗೊಳಿಸಲಿದೆ. ಈ ಹೊಸ ವೈಶಿಷ್ಟ್ಯ ಗಳು ಚಾಟಿಂಗ್ ಗೆ ಸಂಬಂಧಿಸಿವೆ.
2. ನೋಟಿಫಿಕೇಶನ್ ನಲ್ಲಿ ಬದಲಾವಣೆ - ಈ ಹೊಸ ವೈಶಿಷ್ಟ್ಯಗಳು ವಾಟ್ಸ್ ಆಪ್ ನೋಟಿಫಿಕೇಶನ್ ನಲ್ಲಿ ಬದಲಾವಣೆ ತರಲಿವೆ. ಮೊದಲ ವೈಶಿಷ್ಟ್ಯ ವೈಯಕ್ತಿಕ ಚಾಟ್ ನೋಟಿಫಿಕೆಶನ್ ಗೆ ಸಂಬಂಧಿಸಿದೆ ಹಾಗೂ ಎರಡನೇ ವೈಶಿಷ್ಟ್ಯ ಗ್ರೂಪ್ ಚಾಟ್ ನೋಟಿಫಿಕೆಶನ್ ಗೆ ಸಂಬಂಧಿಸಿದೆ.
3. ಗ್ರೂಪ್ ಚಾಟ್ ನ ಈ ಮಾಹಿತಿ ನೋಟಿಫಿಕೆಶನ್ ನಲ್ಲಿ ಬರಲಿದೆ - ಒಂದು ವೇಳೆ ಗ್ರೂಪ್ ಚಾಟ್ ನಲ್ಲಿ ಯಾರೊಬ್ಬರು ನಿಮ್ಮ ಹೆಸರನ್ನು ಉಲ್ಲೇಖಿಸಿದರೆ, ಅದರ ಮಾಹಿತಿ ನಿಮಗೆ ನೋಟಿಫಿಕೆಶನ್ ನಲ್ಲಿ ಸಿಗಲಿದೆ. ಇದಕ್ಕಾಗಿ ನೀವು ವಾಟ್ಸ್ ಆಪ್ ತೆರೆಯುವ ಅವಶ್ಯಕತೆ ಇಲ್ಲ.
4. ಲಾಕ್ ಸ್ಕ್ರೀನ್ ಮೇಲೆಯೇ ಕಾಣಿಸಲಿದೆ ವಾಟ್ಸ್ ಅಪ್ DP - ಒಂದು ವೇಳೆ ನಿಮಗೆ ವಾಟ್ಸ್ ಆಪ್ ಮೇಲೆ ಯಾವುದೇ ವ್ಯಕ್ತಿ ಸಂದೇಶ ಕಳುಹಿಸಿದರೆ, ಎರಡನೇ ವೈಶಿಷ್ಟ್ಯದ ಅಡಿ ಆ ವ್ಯಕ್ತಿಯ DP ಸಹಿತ ನಿಮಗೆ ನೋಟಿಫಿಕೇಶನ್ ನಲ್ಲಿ ಸಂದೇಶ ಕಾಣಿಸಿಕೊಳ್ಳಲಿದೆ.
5. ಯಾರಿಗೆ ಈ ವೈಶಿಷ್ಟ್ಯಗಳು ಮೊದಲಿಗೆ ಸಿಗಲಿವೆ - ಈಗಾಗಲೇ ಈ ಎರಡೂ ವೈಶಿಷ್ಟ್ಯಗಳನ್ನು ವಾಟ್ಸ್ ಆಪ್ ಬೀಟಾ ಬಳಕೆದಾರರಿಗೆ ನೀಡಲಾಗಿದೆ. ಹೀಗಾಗಿ ಪ್ರಸ್ತುತ iOS ಅಂದರೆ iPhone ಬಳಕೆದಾರರಿಗೆ ಈ ವೈಶಿಷ್ಟ್ಯಗಳನ್ನು ಜಾರಿಮಾಡಲಾಗುತ್ತಿದೆ.