ದಂತ ಚಿಕಿತ್ಸೆಗಾಗಿ ತೆರಳಿದ್ದ ಸ್ಯಾಂಡಲ್ವುಡ್ ನಟಿ ಸ್ವಾತಿ ಸತೀಶ್ ಅವರ ಮುಖವನ್ನೇ ವಿರೂಪಗೊಳಿಸಿದ ಘಟನೆಯೊಂದು ನೆಡೆದಿದೆ.
ಬೆಂಗಳೂರು: ಬೊಜ್ಜು ಕರಗಿಸುವ ಶಸ್ತ್ರ ಚಿಕಿತ್ಸೆ ವೇಳೆ ಕಿರುತೆರೆ ನಟಿ ಚೇತನಾ ರಾಜ್ (21) ಅನುಮಾನಾಸ್ಪದವಾಗಿ ಮೃತಪಟ್ಟದ್ದು ದೇಶದಾದ್ಯಂತ ಸಖತ್ ಸುದ್ದಿಯಾಗಿತ್ತು. ಈ ನಡುವೆ ದಂತ ಚಿಕಿತ್ಸೆಗೆಂದು ಹೋದ ನಟಿಯ ಮುಖವನ್ನೇ ವೈದ್ಯರು ವಿರೂಪಗೊಳಿಸಿರುವ ಘಟನೆ ನಡೆದಿದೆ. ಸ್ಯಾಂಡಲ್ವುಡ್ ನಟಿ ಸ್ವಾತಿ ಪಾಲಿಗೆ ಈಗ ದಂತ ವೈದ್ಯೆರೇ ವಿಲನ್ ಆಗಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ವೈದ್ಯರ ನಿರ್ಲಕ್ಷ್ಯದಿಂದ ಸ್ಯಾಂಡಲ್ವುಡ್ ನಟಿಯ ಮುಖವೇ ವಿರೂಪವಾಗಿದೆ. ಎಫ್ಐಆರ್, 6 ಟು 6 ಸೇರಿದಂತೆ ಹಲವು ಸಿನಿಮಾದಲ್ಲಿ ಸ್ವಾತಿ ನಟಿಸಿದ್ದರು. ಹಲ್ಲಿನ ಚಿಕಿತ್ಸೆಗಾಗಿ ಓರಿಕ್ಸ್ ಡೆಂಟಲ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ನಟಿ ಹೋಗಿದ್ದರು. ಚಿಕಿತ್ಸೆ ಪಡೆದ ಬಳಿಕ ಮುಖದಲ್ಲಿ ಊತ ಕಾಣಿಸಿಕೊಂಡು ವಿರೂಪವಾಗಿದೆ.
ಮುಖ ವಿರೂಪಗೊಂಡ ಬಳಿಕ ಮನೆಯಿಂದ ಹೊರಬರಲಾರದೆ ನಟಿ ಸ್ವಾತಿ ತೊಂದರೆ ಅನುಭವಿಸುತ್ತಿದ್ದಾರೆ. ರೂಟ್ ಕ್ಯಾನಲ್ಗೆಂದು ಸ್ವಾತಿ ದಂತ ವೈದ್ಯರ ಬಳಿ ಹೋಗಿದ್ದರು. ಫೈ ಸ್ಟಾರ್ ರಿವ್ಯೂ ನೋಡಿ ಆಸ್ಪತ್ರೆಗೆ ಹೋಗಿದ್ದ ನಟಿಗೆ ಶಾಕ್ ಆಗಿದ್ದು, ಈಗ ಸ್ಟಾರ್ ಆಗೋ ಭಾಗ್ಯವನ್ನೇ ಕಸಿದುಕೊಂಡಂತಾಗಿದೆ.
ಚಿಕಿತ್ಸೆ ಪಡೆದ ಬಳಿಕ ನಟಿಯ ಮುಖದಲ್ಲಿ ಭಾರೀ ಬದಲಾವಣೆಯಾಗಿದೆ. ಕೇವಲ 2 ದಿನದಲ್ಲಿ ಊತ ಕಮ್ಮಿಯಾಗುತ್ತೆ ಅಂತಾ ವೈದ್ಯರು ನಟಿಗೆ ಹೇಳಿದ್ದರಂತೆ. ಆದರೆ, 20 ದಿನ ಕಳೆದರೂ ನಟಿಯ ಮುಖ ಮೊದಲಿನಂತಾಗಿಲ್ಲ. ಹೀಗಾಗಿ ಒರಿಜಿನಲ್ ಫೇಸ್ಗಾಗಿ ನಟಿ ಹೋರಾಟ ನಡೆಸುತ್ತಿದ್ದಾರೆ. ತುಂಬಾ ನೋವಿನಲ್ಲಿರುವ ನಟಿ ಇದೀಗ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರಂತೆ.
ದಂತ ವೈದ್ಯೆಯ ಎಡವಟ್ಟಿನಿಂದ ಈಗ ನಟಿ ಸ್ವಾತಿ ಅವಕಾಶ ಕಳೆದುಕೊಂಡಿದ್ದಾರೆ. ಸದ್ಯ ಕೆಲಸವಿಲ್ಲದೇ, ಸಿನಿಮಾದಲ್ಲೂ ನಟಿಸಲಾಗದೇ ಅವರು ಕಂಗಾಲಾಗಿದ್ದಾರೆ. ಸದ್ಯ ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರಂತೆ.
ದಂತದ ಗೊಂಬೆಯಂತಿರುವ ನಟಿ ಸ್ವಾತಿಯವರ ಮುಖವನ್ನು ವಿರೂಪಗೊಳಿಸಿದ ವೈದ್ಯರ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಹಲ್ಲು ನೋವು ಎಂದು ರೂಟ್ ಕೆನಾಲ್ ಚಿಕಿತ್ಸೆಗಾಗಿ ತೆರಳಿದ್ದ ನಟಿ ಸ್ವಾತಿ ಮುಖವನ್ನು ವಿರೂಪಗೊಳಿಸುರವ ವೈದ್ಯರು ಮತ್ತು ಆಸ್ಪತ್ರೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.