ಮುಂದಿನ ಏಳು ದಿನ ಈ ರಾಶಿಯವರು ಇಟ್ಟ ಹೆಜ್ಜೆಯೆಲ್ಲಾ ಯಶಸ್ಸಿನದ್ದೇ ! ಹಣಕ್ಕೂ ಇರುವುದಿಲ್ಲ ಕೊರತೆ

ಈ ವಾರದ ಆರಂಭದಲ್ಲಿಯೇ, ಸಂಪತ್ತು ಮತ್ತು ಐಷಾರಾಮಿಗಳನ್ನು ನೀಡುವ ಶುಕ್ರನ ಸಂಕ್ರಮಣವಾಗಲಿದೆ. ಕೆಲವು ರಾಶಿಯವರಿಗೆ ಇದು  ತುಂಬಾ ಮಂಗಳಕರವಾಗಿರುತ್ತದೆ. 

Written by - Ranjitha R K | Last Updated : May 29, 2023, 04:49 PM IST
  • ಈ ರಾಶಿಯವರ ಜೀವನದಲ್ಲಿ ಸುವರ್ಣ ದಿನಗಳು ಪ್ರಾರಂಭ
  • ಈ ವಾರದ ಅದೃಷ್ಟದ ರಾಶಿಚಕ್ರ ಚಿಹ್ನೆಗಳು
  • ಇಟ್ಟ ಹೆಜ್ಜೆಯಲೆಲ್ಲಾ ಗೆಲುವು ಖಂಡಿತಾ
ಮುಂದಿನ ಏಳು ದಿನ ಈ ರಾಶಿಯವರು ಇಟ್ಟ ಹೆಜ್ಜೆಯೆಲ್ಲಾ ಯಶಸ್ಸಿನದ್ದೇ ! ಹಣಕ್ಕೂ ಇರುವುದಿಲ್ಲ ಕೊರತೆ  title=

ಬೆಂಗಳೂರು : ಇಂದಿನಿಂದ ಕೆಲವು ರಾಶಿಯವರ ಜೀವನದಲ್ಲಿ ಸುವರ್ಣ ದಿನಗಳು ಪ್ರಾರಂಭವಾಗಲಿವೆ. ನಾಳೆ, ಅಂದರೆ ಮೇ 30 ರಂದು, ನಡೆಯಲಿರುವ ಶುಕ್ರನ ಸಂಕ್ರಮಣವು ಈ ಜನರಿಗೆ ಸಂಪತ್ತು ಮತ್ತು ಸಮೃದ್ಧಿಯನ್ನು ನೀಡುತ್ತದೆ. ಹಾಗಿದ್ದರೆ ಯಾವ ರಾಶಿಯವರಿಗೆ  ಈ ಇಡೀ ವಾರ ಶುಭವಾಗಿರಲಿದೆ ನೋಡೋಣ.  

ಈ ವಾರದ ಅದೃಷ್ಟದ ರಾಶಿಚಕ್ರ ಚಿಹ್ನೆಗಳು  :
ಮೇಷ ರಾಶಿ - ಈ ವಾರ ನೀವು ಅನೇಕ ಮೂಲಗಳಿಂದ ಹಣವನ್ನು ಪಡೆಯುತ್ತೀರಿ. ನಿಮ್ಮ ಆದಾಯವೂ ಹೆಚ್ಚಾಗುತ್ತದೆ. ಸಾಲ ನೀಡಿ ಕೈ ಸೇರದೇ ಉಳಿದಿರುವ ಹಣ ಮರಳಿ ಸಿಗುವ ಸಾಧ್ಯತೆ ಇದೆ. ವೃತ್ತಿ ಜೀವನಕ್ಕೂ ಉತ್ತಮ ಸಮಯ. ಉದ್ಯೋಗದಲ್ಲಿ ಬದಲಾವಣೆ ಆಗಬಹುದು. 

ಇದನ್ನೂ ಓದಿ ಇನ್ನು 18 ದಿನಗಳಲ್ಲಿ ಈ ರಾಶಿಯವರ ಜೀವನದಲ್ಲಿ ಮಹಾ ಬದಲಾವಣೆ ! ಧನ ರಾಶಿಯಲ್ಲಿಯೇ ಮಿಂದೇಳುವರು ಇವರು

ವೃಷಭ ರಾಶಿ - ಉದ್ಯೋಗದಲ್ಲಿ ಅಧಿಕಾರಿಗಳ ಬೆಂಬಲ ಸಿಗಲಿದೆ. ಬಡ್ತಿ ಸಿಗಬಹುದು. ವೇತನ ಹೆಚ್ಚಳವಾಗುವ ಸಾಧ್ಯತೆಗಳಿವೆ. ಹೊಸ ಉದ್ಯೋಗ ಸಿಗಬಹುದು. ಆಮದು-ರಫ್ತಿಗೆ ಸಂಬಂಧಿಸಿದ ಜನರು ಹೆಚ್ಚು ಪ್ರಯೋಜನ ಪಡೆಯುತ್ತಾರೆ. ಕುಟುಂಬದಲ್ಲಿ ಸಂತಸದ ವಾತಾವರಣ ಇರುತ್ತದೆ.  ದುಬಾರಿ ಉಡುಗೊರೆಗಳನ್ನು ಪಡೆಯಬಹುದು. 

ತುಲಾ ರಾಶಿ - ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಎಚ್ಚರವಿರಲಿ. ಲಾಭ ಇರುತ್ತದೆ. ಆದಾಯ ಚೆನ್ನಾಗಿರಲಿದೆ. ವ್ಯಾಪಾರ ವಿಸ್ತರಣೆಯಾಗಲಿದೆ. ಸ್ನೇಹಿತರ ಸಹಾಯದಿಂದ ಲಾಭವಾಗಲಿದೆ.  ಉದ್ಯೋಗದಲ್ಲಿ ಬದಲಾವಣೆ ಆಗಬಹುದು. 

ಇದನ್ನೂ ಓದಿ : Nirjala Ekadashi 2023: ನಿರ್ಜಲ ಏಕಾದಶಿಯಂದು ಈ ಸಣ್ಣ ಕೆಲಸ ಮಾಡಿದ್ರೆ ಹಣ ಸುರಿಮಳೆ!

ವೃಶ್ಚಿಕ ರಾಶಿ - ಉದ್ಯೋಗದಲ್ಲಿ ಬದಲಾವಣೆ ಆಗಬಹುದು. ನಿಮ್ಮ ಬುದ್ಧಿವಂತಿಕೆಯ ಆಧಾರದ ಮೇಲೆ ನಿಮಗೆ ಲಾಭವಾಗುವುದು. ಯಾವುದೇ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಸಾಧ್ಯತೆ ಇರುತ್ತದೆ. ತಾಯಿಯ  ಬೆಂಬಲ  ನಿಮ್ಮ ಜೊತೆ ಇರಲಿದೆ. 

ಧನು ರಾಶಿ - ಇಡೀ ವಾರ ಆತ್ಮವಿಶ್ವಾಸದಿಂದ ಕೂಡಿರುವಿರಿ. ಉದ್ಯೋಗದಲ್ಲಿ ಬದಲಾವಣೆ ಆಗಬಹುದು. ಕಠಿಣ ಪರಿಶ್ರಮವಿದ್ದರೆ ಲಾಭವೂ ಅಧಿಕವಾಗಿರುವುದು.  ಆಸ್ತಿ ಸಂಬಂಧಿತ ವಿಷಯಗಳಲ್ಲಿ ಲಾಭವಾಗುವುದು. 

ಇದನ್ನೂ ಓದಿ Friday Remedies: ತಾಯಿ ಲಕ್ಷ್ಮಿ ಕೃಪೆಗೆ ಪಾತ್ರರಾಗಲು ಇಂದೇ ಈ ಕೆಲಸ ಮಾಡಿ

ಮೀನ ರಾಶಿ - ಆತ್ಮವಿಶ್ವಾಸ ಹೆಚ್ಚುತ್ತದೆ.  ಸಂಸಾರದಲ್ಲಿ ಸುಖ, ಸೌಕರ್ಯ  ಹೆಚ್ಚಾಗುವುದರಿಂದ ನೆಮ್ಮದಿ ಇರುತ್ತದೆ. ಕೆಲಸದ ಕ್ಷೇತ್ರದಲ್ಲಿ ಬದಲಾವಣೆಯಾಗಬಹುದು. ಹಣಕಾಸಿನ ಪ್ರಯೋಜನವಾಗುವುದು. 

 

 ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News