ನಿತ್ಯ ಬೆಳಗ್ಗೆ ಎದ್ದು ನೀವು ನೋಡುವ ಈ ಸಂಗತಿಗಳು ನಿಮ್ಮ ಜೀವನವನ್ನೇ ಬದಲಾಯಿಸುತ್ತವೆ ಗೊತ್ತಾ?

Garuda Purana Lessons: ಜೀವನದಲ್ಲಿನ ಕೆಲ ಸಂಗತಿಗಳು ಎಷ್ಟೊಂದು ಶುಭ ಹಾಗೂ ಪವಿತ್ರವಾಗಿವೆ ಎಂದರೆ, ಕೇವಲ ಅವುಗಳ ದರ್ಶನ ಮಾತ್ರದಿಂದ ಮನುಷ್ಯ ಪುಣ್ಯ ಪಡೆದು ಪುನೀತನಾಗುತ್ತಾನೆ ಎನ್ನಲಾಗುತ್ತದೆ.ಗರುಡ ಪುರಾಣದಲ್ಲಿ ಇಂತಹ 7 ಸಂಗತಿಗಳ ಕುರಿತು ಉಲ್ಲೇಖಿಸಲಾಗಿದೆ.  

Written by - Nitin Tabib | Last Updated : Aug 31, 2023, 10:21 PM IST
  • ಈ ಕಾರ್ಯಗಳು ಮಾಡುವುದರಿಂದ ವ್ಯಕ್ತಿಯ ಪ್ರಸ್ತುತ ಜೀವನವೂ ಸಂತೋಷದಿಂದ ಕೂಡಿರುತ್ತದೆ ಮತ್ತು ಪುಣ್ಯಪ್ರಾಪ್ತಿಯಾಗುತ್ತದೆ.
  • ಇಂದು ನಾವು ಗರುಡ ಪುರಾಣದಲ್ಲಿ ಉಲ್ಲೇಖಿಸಲಾದ 7 ಸಂಗತಿಗಳ ಬಗ್ಗೆ ಮಾಹಿತಿ ನೀಡಲಿದ್ದು, ಅವುಗಳ ದರ್ಶನ ಮಾತ್ರದಿಂದ ವ್ಯಕ್ತಿಗೆ ಪುಣ್ಯ ಪ್ರಾಪ್ತಿಯಾಗುತ್ತದೆ.
  • ಅಷ್ಟೇ ಅಲ್ಲ, ಅವುಗಳನ್ನು ನೋಡುವುದರಿಂದ ಮಾತ್ರ ವ್ಯಕ್ತಿಯೊಬ್ಬರ ಜೀವನದಲ್ಲಿ, ಶುಭ ಫಲಗಳು ಬರಲಾರಂಭಿಸುತ್ತವೆ.
ನಿತ್ಯ ಬೆಳಗ್ಗೆ ಎದ್ದು ನೀವು ನೋಡುವ ಈ ಸಂಗತಿಗಳು ನಿಮ್ಮ ಜೀವನವನ್ನೇ ಬದಲಾಯಿಸುತ್ತವೆ ಗೊತ್ತಾ? title=

ಬೆಂಗಳೂರು: 18 ಮಹಾಪುರಾಣಗಳಲ್ಲಿ ಗರುಡ ಪುರಾಣ ಕೂಡ ಒಂದು ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಉಲ್ಲೇಖಿಸಲಾಗಿರುವ ವಿಷಯಗಳು ಕೇವಲ ಸಾವು ಮತ್ತು ಅದರ ನಂತರದ ಆತ್ಮದ ಪ್ರಯಾಣದ ಬಗ್ಗೆ ಮಾತ್ರ ಹೇಳುವುದಿಲ್ಲ. ಜೀವನವನ್ನು ಸುಧಾರಿಸುವ ಮಾರ್ಗಗಳನ್ನು ಸಹ ಅದರಲ್ಲಿ ಹೇಳಲಾಗಿದೆ ಮತ್ತು ಅಂತಹ ಕೆಲವು ಕಾರ್ಯಗಳ ಬಗ್ಗೆ ಕೂಡ ಉಲ್ಲೇಖಿಸಲಾಗಿದೆ, ಈ ಕಾರ್ಯಗಳು ಮಾಡುವುದರಿಂದ ವ್ಯಕ್ತಿಯ ಪ್ರಸ್ತುತ ಜೀವನವೂ ಸಂತೋಷದಿಂದ ಕೂಡಿರುತ್ತದೆ  ಮತ್ತು ಪುಣ್ಯಪ್ರಾಪ್ತಿಯಾಗುತ್ತದೆ. ಇಂದು ನಾವು ಗರುಡ ಪುರಾಣದಲ್ಲಿ ಉಲ್ಲೇಖಿಸಲಾದ 7 ಸಂಗತಿಗಳ ಬಗ್ಗೆ ಮಾಹಿತಿ ನೀಡಲಿದ್ದು, ಅವುಗಳ ದರ್ಶನ ಮಾತ್ರದಿಂದ ವ್ಯಕ್ತಿಗೆ ಪುಣ್ಯ ಪ್ರಾಪ್ತಿಯಾಗುತ್ತದೆ. ಅಷ್ಟೇ ಅಲ್ಲ, ಅವುಗಳನ್ನು ನೋಡುವುದರಿಂದ ಮಾತ್ರ ವ್ಯಕ್ತಿಯೊಬ್ಬರ ಜೀವನದಲ್ಲಿ, ಶುಭ ಫಲಗಳು ಬರಲಾರಂಭಿಸುತ್ತವೆ. 

ಈ ಸಂಗತಿಗಳನ್ನು ಅತ್ಯಂತ ಪವಿತ್ರ ಎಂದು ಭಾವಿಸಲಾಗುತ್ತದೆ
ಹಸುವಿನ ಹಾಲು -
'ಗೋವು ವಿಶ್ವಕ್ಕೆ ತಾಯಿ' ಎನ್ನಲಾಗುತ್ತದೆ. ಹಸುವನ್ನು ಹಿಂದೂ ಧರ್ಮದಲ್ಲಿ ಪೂಜ್ಯನೀಯ ಎಂದು ಪರಿಗಣಿಸಲಾಗಿದೆ. ಹಸುವಿನ ಹಾಲನ್ನು ಅಮೃತದಂತೆ ಪರಿಗಣಿಸಲಾಗುತ್ತದೆ. ಹಸುವಿನ ಹಾಲಿನ ದರ್ಶನ ಮಾತ್ರದಿಂದ ವ್ಯಕ್ತಿಗೆ ಹೆಚ್ಚಿನ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ.

ಗೋಧೂಳಿ- ಹಸು ತನ್ನ ಕಾಲುಗಳಿಂದ ನೆಲವನ್ನು ಗೀಚಿದಾಗ ಅದರಿಂದ ಏಳುವ ಧೂಳನ್ನು ಗೋಧೂಳಿ ಎಂದು ಕರೆಯಲಾಗುತ್ತದೆ. ಹಸು ಈ ರೀತಿ ಕಾಲು ಕೆರೆಯುವುದನ್ನು ನೋಡುವುದು ಅತ್ಯಂತ ಶುಭಕರ ಎಂದು ಭಾವಿಸಲಾಗುತ್ತದೆ. ಯಾವುದೇ ಒಂದು ಶುಭಕಾರ್ಯಕ್ಕೆ ಹೋಗುವಾಗ, ಈ ರೀತಿಯ ದೃಶ್ಯ ಕಣ್ಣಿಗೆ  ಬಿದ್ದರೆ, ಕೆಲಸದಲ್ಲಿ ಯಶಸ್ಸು ಪ್ರಾಪ್ತಿಯಾಗುತ್ತದೆ.

ಗೌಶಾಲೆ- ಗೋಶಾಲೆಯನ್ನು ಕಟ್ಟುವುದು, ಗೋವುಗಳ ಸೇವೆ ಮಾಡುವುದು, ಗೋಶಾಲೆಗಾಗಿ ದಾನ ಮಾಡುವುದು ಅತ್ಯಂತ ಶುಭ ಕಾರ್ಯಗಳೆಂದು ಎಂದು ಪರಿಗಣಿಸಲಾಗಿದೆ, ಆದರೆ ಗೋಶಾಲೆಯನ್ನು ನೋಡುವುದು ತುಂಬಾ ಒಳ್ಳೆಯದು. ಗೋಶಾಲೆಯನ್ನು ನೋಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ.

ಗೊರಸು - ಗೋವಿನ ಪಾದಗಳಿಗೆ ತೀರ್ಥಕ್ಷೇತ್ರದ ಸ್ಥಾನಮಾನ ನೀಡಲಾಗಿದೆ. ಇದೇ ಕಾರಣದಿಂದ ಹಸುವಿನ ಪಾದಗಳನ್ನು ಸ್ಪರ್ಶಿಸಲಾಗುತ್ತದೆ. ಹಸುವಿನ ಗೊರಸುಗಳ ದರ್ಶನ ಮಾತ್ರದಿಂದ ಪುಣ್ಯ ಪ್ರಾಪ್ತಿಯಾಗುತ್ತದೆ.

ಗೋಮೂತ್ರ- ಗೋಮೂತ್ರವನ್ನು ಹಲವು ಆಯುರ್ವೇದ ಔಷಧಿಗಳಲ್ಲಿ ಬಳಸಲಾಗುತ್ತದೆ. ಗರುಡ ಪುರಾಣದಲ್ಲಿ ಇದನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ ಮತ್ತು ಗೋಮೂತ್ರದ ದರ್ಶನ ಮಾತ್ರದಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗಿದೆ.

ಸಗಣಿ- ಹಸುವಿನ ಸಗಣಿಯನ್ನು ಸಹ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ, ಹಿಂದೂ ಧರ್ಮಶಾಸ್ತ್ರಗಳಲ್ಲಿ ಪೂಜೆ ಮತ್ತು ಶುಭ ಕಾರ್ಯದ ಸ್ಥಳವನ್ನು ಶುದ್ಧೀಕರಿಸಲು ಹಸುವಿನ ಸಗಣಿಯನ್ನು ಬಳಸಲಾಗುತ್ತದೆ. ಮನೆಯ ಬಾಗಿಲಿನ ಮುಂದೆ ಗೋವಿನ ಸಗಣಿ ಇಟ್ಟರೆ ಅದು ಸಂತೋಷ ಮತ್ತು ಸಮೃದ್ಧಿಯ ಸಂಕೇತ ಎಂದು ಹೇಳಲಾಗುತ್ತದೆ. ಇನ್ನೊಂದೆಡೆ ಗೋವಿನ ಸಗಣಿಯನ್ನು ನೋಡುವುದರಿಂದಲೂ ಕೂಡ ಸಾಕಷ್ಟು ಪುಣ್ಯ ಸಿಗುತ್ತದೆ ಎಂದು ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ-ಶೀಘ್ರದಲ್ಲಿಯೇ ಗ್ರಹಗಳ ರಾಜ ಆದಿತ್ಯನ ನಕ್ಷತ್ರ ಪರಿವರ್ತನೆ, ಲಕ್ಷ್ಮಿ ನಾರಾಯಣನ ಕೃಪೆಯಿಂದ ಈ ಜನರ ಜೀವನದಲ್ಲಿ ಹಣವೋ ಹಣ ಹರಿದು ಬರಲಿದೆ!

ಬೇಸಾಯ- ಆಹಾರ ವ್ಯಕ್ತಿಯ ಜೀವನಕ್ಕೆ ಆಧಾರವಾಗಿದೆ ಮತ್ತು ಪ್ರಪಂಚದ ಬಹುತೇಕ ಜನರು ಇದಕ್ಕಾಗಿ ರೈತರು ಬೆಳೆದ ಬೆಳೆಯನ್ನು ಅವಲಂಭಿಸಿದ್ದಾರೆ. ಗದ್ದೆಯಲ್ಲಿ ಬೆಳೆದು ನಿಂತ ಬೆಳೆಗಳನ್ನು ನೋಡುವುದರಿಂದಲೂ ಕೂಡ ಪುಣ್ಯ ಪ್ರಾಪ್ತಿಯಾಗುತ್ತದೆ ಮತ್ತು ಮನಸ್ಸಿಗೆ ಶಾಂತಿ ಸಿಗುತ್ತದೆ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ.

ಇದನ್ನೂ ಓದಿ-ವಿಪರೀತ ರಾಜಯೋಗ ನಿರ್ಮಾಣ, ಗ್ರಹಗಳ ರಾಜಕುಮಾರನ ಕೃಪೆಯಿಂದ, ಈ ಜನರ ಭಾಗ್ಯದಲ್ಲಿ ಭಾರಿ ಬದಲಾವಣೆ-ಧನಲಾಭ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News