Vastu Tip: ನಿಮ್ಮ ಮನೆಯ ಮೇಲೆ ಸದಾ ತಾಯಿ ಲಕ್ಷ್ಮಿ ಕೃಪೆ ಇರಬೇಕು ಎಂದರೆ ಇಲ್ಲಿವೆ ಕೆಲ ಸಲಹೆಗಳು!

Vastu Tips On Auspicious Plants: ವಾಸ್ತು ಶಾಸ್ತ್ರದಲ್ಲಿ ಮನೆಯಲ್ಲಿ ಸುಖ-ಸಮೃದ್ಧಿಯನ್ನು ಹೆಚ್ಚಿಸುವ ಹಲವು ಸಸ್ಯಗಳ ಕುರಿತು ಉಲ್ಲೇಖಿಸಲಾಗಿದೆ. ಇವುಗಳನ್ನು ಮನೆಯಲ್ಲಿ ನೆಡುವುದರಿಂದ ಧನ-ಸಂಪತ್ತು ಕೂಡ ಹೆಚ್ಚಾಗುತ್ತದೆ. ತಾಯಿ ಲಕ್ಷ್ಮಿ ಹಾಗೂ ಶ್ರೀವಿಷ್ಣುವಿನ ಕೃಪಾಶಿರ್ವಾದವು ಕೂಡ ಲಭಿಸುತ್ತದೆ.   

Written by - Nitin Tabib | Last Updated : Apr 28, 2024, 11:18 PM IST
  • ಕುಂಡಲಿಯಲ್ಲಿರುವ ಗ್ರಹದೋಷಗಳಿಂದ ಮುಕ್ತಿ ಪಡೆಯಲು ವಾಸ್ತುಶಾಸ್ತ್ರದಲ್ಲಿ ಹಲವು ಸಸ್ಯಗಳ ಕುರಿತು ಉಲ್ಲೇಖಿಸಲಾಗಿದೆ.
  • ವ್ಯಕ್ತಿಯ ಜೀವನದಲ್ಲಿ ಶಾಂತತೆ ಮನೆಮಾಡುತ್ತದೆ ಮತ್ತು ಧನ-ಸಂಪತ್ತು ಮತ್ತು ಸುಖ ಸಮೃದ್ಧಿ ಪ್ರಾಪ್ತಿಯಾಗುತ್ತದೆ.
  • ಆದರೆ, ಈ ಸಸ್ಯಗಳನ್ನು ಸರಿಯಾದ ದಿಕ್ಕಿನಲ್ಲಿ ನೆಟ್ಟರೆ ಮಾತ್ರ ಅವುಗಳಿಂದ ಅಪಾರ ಲಾಭ ಸಿಗುತ್ತದೆ.
Vastu Tip: ನಿಮ್ಮ ಮನೆಯ ಮೇಲೆ ಸದಾ ತಾಯಿ ಲಕ್ಷ್ಮಿ ಕೃಪೆ ಇರಬೇಕು ಎಂದರೆ ಇಲ್ಲಿವೆ ಕೆಲ ಸಲಹೆಗಳು! title=

Vastu Tips On Auspicious Plants: ವಾಸ್ತು ಶಾಸ್ತ್ರದಲ್ಲಿ ಮನೆಯಲ್ಲಿ ಸುಖ-ಸಮೃದ್ಧಿಯನ್ನು ಹೆಚ್ಚಿಸುವ ಹಲವು ಸಸ್ಯಗಳ ಕುರಿತು ಉಲ್ಲೇಖಿಸಲಾಗಿದೆ. ಇವುಗಳನ್ನು ಮನೆಯಲ್ಲಿ ನೆಡುವುದರಿಂದ ಧನ-ಸಂಪತ್ತು ಕೂಡ ಹೆಚ್ಚಾಗುತ್ತದೆ. ತಾಯಿ ಲಕ್ಷ್ಮಿ ಹಾಗೂ ಶ್ರೀವಿಷ್ಣುವಿನ ಕೃಪಾಶಿರ್ವಾದವು ಕೂಡ ಲಭಿಸುತ್ತದೆ. ಈ ಸಸ್ಯಗಳಿಂದ ಮನೆಯಲ್ಲಿ ಧನಾತ್ಮಕ ಶಕ್ತಿಯ ಸಂಚಾರ ಹೆಚ್ಚಾಗುತ್ತದೆ. ಈ ಸಸ್ಯಗಳು ಕುಂಡಲಿಯಲ್ಲಿರುವ ಗ್ರಹದೋಷಗಳಿಂದ ಮುಕ್ತಿ ಪಡೆಯಲು ಕೂಡ ಈ ಸಸ್ಯಗಳನ್ನು ನೆಡಲು ಸಲಹೆ ನೀಡಲಾಗುತ್ತದೆ.
 
ಗ್ರಹದೋಷಗಳಿಂದ ಮುಕ್ತಿ ಸಿಗುತ್ತದೆ - ಕುಂಡಲಿಯಲ್ಲಿರುವ ಗ್ರಹದೋಷಗಳಿಂದ ಮುಕ್ತಿ ಪಡೆಯಲು ವಾಸ್ತುಶಾಸ್ತ್ರದಲ್ಲಿ ಹಲವು ಸಸ್ಯಗಳ ಕುರಿತು ಉಲ್ಲೇಖಿಸಲಾಗಿದೆ. ವ್ಯಕ್ತಿಯ ಜೀವನದಲ್ಲಿ ಶಾಂತತೆ ಮನೆಮಾಡುತ್ತದೆ ಮತ್ತು ಧನ-ಸಂಪತ್ತು ಮತ್ತು ಸುಖ ಸಮೃದ್ಧಿ ಪ್ರಾಪ್ತಿಯಾಗುತ್ತದೆ. ಆದರೆ, ಈ ಸಸ್ಯಗಳನ್ನು ಸರಿಯಾದ ದಿಕ್ಕಿನಲ್ಲಿ ನೆಟ್ಟರೆ ಮಾತ್ರ ಅವುಗಳಿಂದ ಅಪಾರ ಲಾಭ ಸಿಗುತ್ತದೆ. 

1. ಅರಿಶಿಣ ಗಿಡ- ವಾಸ್ತು ಶಾಸ್ತ್ರದಲ್ಲಿ ತುಳಸಿಯಂತೆಯೇ ಅರಿಶಿಣ ಗಿಡ ನೆಡುವ ಸಲಹೆಯನ್ನು ಕೂಡ ನೀಡಲಾಗುತ್ತದೆ. ಈ ಗಿಡ ಮನೆಯಲ್ಲಿ ನೆಡುವುದರಿಂದ ಮನೆಯಲ್ಲಿ ಸುಖ ಸಮೃದ್ಧಿ ನೆಲೆಸುತ್ತವೆ ಮತ್ತು ವ್ಯಕ್ತಿಯ ಆರೋಗ್ಯದ ಮೇಲೆ ಸಕಾರಾತ್ಮಕ ಪ್ರಭಾವ ಉಂಟಾಗುತ್ತವೆ. ವಿವಾಹದಲ್ಲಿ ಎದುರಾಗುತ್ತಿರುವ ಅಡೆತಡೆಗಳನ್ನು ಈ ಸಸ್ಯ ನಿವಾರಿಸುತ್ತದೆ. ನಿಯಮಿತ ರೂಪದಲ್ಲಿ ಅರಿಶಿಣ ಗಿಡಕ್ಕೆ ಪೂಜೆಯನ್ನು ಸಲ್ಲಿಸಲಾಗುತ್ತದೆ. ಈ ರೀತಿ ಮಾಡುವುದರಿಂದ ಜಾತಕದಲ್ಲಿ ಬೃಹಸ್ಪತಿಯ ಸ್ಥಾನಕ್ಕೆ ಬಲ ಸಿಗುತ್ತದೆ.

2. ಶಮಿ ವೃಕ್ಷ- ಶನಿದೇವರಿಗೆ ಶಮಿ ವೃಕ್ಷ ತುಂಬಾ ಇಷ್ಟ. ಶನಿದೇವರನ್ನು ಪ್ರಸನ್ನಗೊಳಿಸಲು ನಿಯಮಿತವಾಗಿ ಈ ಗಿಡಕ್ಕೆ ಪೂಜೆ ಸಲ್ಲಿಸಬೇಕು. ಮನೆಯಿಂದ ಹೊರಹೋಗುವಾಗ ಬಲಭಾಗದಿಂದ ಈ ಗಿಡದ ದರ್ಶನ ಮಾಡುವುದರಿಂದ ನಿಮ್ಮ ಇಡೀ ದಿನ ಉತ್ತಮ ರೀತಿಯಲ್ಲಿ ಕಳೆಯುತ್ತದೆ.

3. ದಾಸವಾಳದ ಗಿಡ - ವಾಸ್ತು ತಜ್ಞರ ಪ್ರಕಾರ ಮನೆಯಲ್ಲಿ ದಾಸವಾಳ ಗಿಡ ನೆಡುವುದರಿಂದ ವ್ಯಕ್ತಿಯ ಜಾತಕದಲ್ಲಿನ ಮಂಗಳದೋಷದಿಂದ ಮುಕ್ತಿ ಸಿಗುತ್ತದೆ. ಇದಲ್ಲದೆ ಜಾತಕದಲ್ಲಿ ಸೂರ್ಯನ ಸ್ಥಿತಿಗೆ ಬಲ ಸಿಗುತ್ತದೆ. ಜೀವನದಲ್ಲಿ ಬರುವ ಆರ್ಥಿಕ ಸಂಕಷ್ಟದಿಂದ ಪಾರಾಗಲು ಮನೆಯಲ್ಲಿ ದಾಸವಾಳ ಗಿಡ ನೆಡಲು ಸಲಹೆಯನ್ನು ನೀಡಲಾಗುತ್ತದೆ. 

ಇದನ್ನೂ ಓದಿ-ಗುರುವಿನ ರಾಶಿಯಲ್ಲಿ ನಾಲ್ಕು ದೊಡ್ಡ ಗ್ರಹಗಳ ಸಂತೆ, ಈ ಜನರಿಗೆ ಹಗಲು ರಾತ್ರಿ ಎನ್ನದೆ ಭಾರಿ ಸಿರಿಸಂಪತ್ತು ಸಿಗಲಿದೆ!

4. ದಾಳಿಂಬೆ ಗಿಡ - ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಈಶಾನ್ಯ ದಿಕ್ಕಿನಲ್ಲಿ ದಾಳಿಂಬೆ ಗಿಡ ನೆಡುವುದು ಶುಭ ಫಲದಾಯಿ ಸಾಬೀತುಪಡಿಸುತ್ತದೆ. ಈ ಗಿಡವನ್ನು ಮನೆಯಲ್ಲಿ ನೆಡುವುದರಿಂದ ಹಲವು ರೀತಿಯ ಗ್ರಹ ದೋಷಗಳಿಂದ ಮುಕ್ತಿ ಸಿಗುತ್ತದೆ. ಇದಲ್ಲದೆ ಜೇನು ತುಪ್ಪದಲ್ಲಿ ದಾಳಿಂಬೆಯ ಹೂವುಗಳನ್ನು ಅದ್ದಿ ಶಿವನಿಗೆ ಅರ್ಪಿಸಬೇಕು. ಇದರಿಂದ ಎಲ್ಲಾ ಸಂಕಷ್ಟಗಳಿಂದ ಮುಕ್ತಿ ಸಿಗುತ್ತದೆ.

ಇದನ್ನೂ ಓದಿ\-Malavya Rajyog In May: ಶೀಘ್ರದಲ್ಲೇ ವೃಷಭ ರಾಶಿಯಲ್ಲಿ ಮಾಲವ್ಯ ರಾಜಯೋಗ, ಈ ಜನರಿಗೆ ಲಭಿಸಲಿದೆ ಅಪಾರ ಧನ-ಸಂಪತ್ತು!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News