ನಾನು ಟೀಂ ಇಂಡಿಯಾ ಕೋಚ್ ಆಗಬಾರದೆಂದು ದೊಡ್ಡ ಪ್ರಯತ್ನ ನಡೆದಿತ್ತು: ರವಿಶಾಸ್ತ್ರಿ

ನಿರ್ದಿಷ್ಟ ಜನರು ನನಗೆ ಕೆಲಸ ಸಿಗಬಾರದೆಂದು ಪ್ರಯತ್ನ ಪಟ್ಟಿದ್ದರು ಎಂಬುದನ್ನು ನಾನು ಹೇಳಲೇಬೇಕು ಎಂದು ರವಿಶಾಸ್ತ್ರಿ ಮಾಧ್ಯಮವೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.

Written by - Puttaraj K Alur | Last Updated : Dec 10, 2021, 05:55 PM IST
  • ಮುಖ್ಯ ಕೋಚ್ ಆಗಿದ್ದ ಅವಧಿ ನೆನಪಿಸಿಕೊಂಡು ಆಘಾತಕಾರಿ ಸಂಗತಿ ಬಹಿರಂಗಪಡಿಸಿದ ರವಿಶಾಸ್ತ್ರಿ
  • ನಾನು ಕೋಚ್ ಆಗುವುದು ಹಲವರಿಗೆ ಇಷ್ಟವಿರಲಿಲ್ಲವೆಂದು ಹೇಳಿದ ರವಿಶಾಸ್ತ್ರಿ
  • ಭರತ್ ಅರುಣ್‌ ರನ್ನು ಬೌಲಿಂಗ್ ಕೋಚ್ ಆಗಿ ನೇಮಿಸಲು ಕೆಲವರು ಬಯಸಿರಲಿಲ್ಲ
ನಾನು ಟೀಂ ಇಂಡಿಯಾ ಕೋಚ್ ಆಗಬಾರದೆಂದು ದೊಡ್ಡ ಪ್ರಯತ್ನ ನಡೆದಿತ್ತು: ರವಿಶಾಸ್ತ್ರಿ title=
'ಕೆಲವರು ಕೋಚ್ ಆಗಲು ಅವಕಾಶ ನೀಡಲಿಲ್ಲ’

ನವದೆಹಲಿ: ಟೀಂ ಇಂಡಿಯಾ ಸದ್ಯ ಪರಿವರ್ತನೆಯ ಹಂತದಲ್ಲಿದ್ದು, ವಿರಾಟ್ ಕೊಹ್ಲಿ ಬದಲಿಗೆ ರೋಹಿತ್ ಶರ್ಮಾಗೆ ಏಕದಿನ ಮತ್ತು ಟಿ-20 ತಂಡದ ನಾಯಕತ್ವ ವಹಿಸಲಾಗಿದೆ. ಇದೇ ವೇಳೆ ಐಸಿಸಿ ಟಿ-20 ವಿಶ್ವಕಪ್(ICC T20 World Cup 2021) ಬಳಿಕ ರವಿಶಾಸ್ತ್ರಿ ಅವರ ಕೋಚ್ ಹುದ್ದೆಯ ಅವಧಿ ಮುಕ್ತಾಯಗೊಂಡಿತ್ತು. ಇದೀಗ ಅವರ ಟೀಂ ಇಂಡಿಯಾದ ಮುಖ್ಯ ಕೋಚ್ ಹುದ್ದೆಯ ಸ್ಥಾನವನ್ನು ‘ಗೋಡೆ’ ಖ್ಯಾತಿಯ ಕನ್ನಡಿಗ ರಾಹುಲ್ ದ್ರಾವಿಡ್ ಯಶಸ್ವಿಯಾಗಿ ಮುನ್ನೆಡಿಸಿಕೊಂಡು ಹೋಗುತ್ತಿದ್ದಾರೆ.  

ಶಾಸ್ತ್ರಿ-ಕೊಹ್ಲಿ ಜೋಡಿ ಹಿಟ್ ಆಗಿತ್ತು

ರವಿಶಾಸ್ತ್ರಿ 2017ರಲ್ಲಿ ಟೀಂ ಇಂಡಿಯಾದ ಮುಖ್ಯ ಕೋಚ್ ಹುದ್ದೆಯ(Team India Head Coach) ಜವಾಬ್ದಾರಿಯನ್ನು ವಹಿಸಿಕೊಂಡರು. ರವಿಶಾಸ್ತ್ರಿ(Ravi Shastri) ಮತ್ತು ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಾರ ಯಶಸ್ಸನ್ನು ಸಾಧಿಸಿದ್ದರು. ಈ ಜೋಡಿಗೆ ಅನೇಕ ಯಶಸ್ಸು ಸಿಕ್ಕಿತ್ತು. ಆದರೆ ಒಂದೇ ಒಂದು ICC ಟ್ರೋಫಿಯನ್ನು ಗೆಲ್ಲಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ: #ShameOnBcci: ಕ್ಯಾಪ್ಟನ್ಸಿಯಿಂದ ಕೆಳಗಿಳಿಸಿ ಕೊಹ್ಲಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ BCCI.!

‘ಕೆಲವರು ಕೋಚ್ ಆಗಲು ಅವಕಾಶ ನೀಡಲಿಲ್ಲ’

ಮುಖ್ಯ ಕೋಚ್ ಆಗಿದ್ದ ಅವಧಿಯನ್ನು ನೆನಪಿಸಿಕೊಂಡಿರುವ ರವಿಶಾಸ್ತ್ರಿ(Ravi Shastri) ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ತಾನು ರಾಷ್ಟ್ರೀಯ ತಂಡದ ಕೋಚ್ ಅಭ್ಯರ್ಥಿ ಎಂದು ಘೋಷಿತವಾಗಿ ಕೋಚ್ ಹುದ್ದೆ ಅಲಂಕರಿಸುವಾಗ ಸಾಕಷ್ಟು ವಿರೋಧಿಸುವವರಿದ್ದರು. ಕೋಚ್ ಆಗುವುದಕ್ಕೆ ಕೆಲವು ಶಕ್ತಿಗಳು ವಿರೋಧ ವ್ಯಕ್ತಪಡಿಸಿದ್ದವು ಅಂತಾ ರವಿಶಾಸ್ತ್ರಿ ಹೇಳಿದ್ದಾರೆ.

Ravishastri-2.jpg

‘ನಾನು ಕೋಚ್ ಆಗುವುದು ಹಲವರಿಗೆ ಇಷ್ಟವಿರಲಿಲ್ಲ’

‘ನಾನು ಸಾಮಾನ್ಯವಾಗಿ ಜನರ ಕಡೆಗೆ ಯಾವುದೇ ಬೆರಳು ತೋರಿಸಲು ಇಷ್ಟಪಡುವುದಿಲ್ಲ. ಆದರೆ ನಿರ್ದಿಷ್ಟ ಜನರು ನನಗೆ ಕೆಲಸ ಸಿಗಬಾರದು ಎಂದು ಪ್ರಯತ್ನ ಪಟ್ಟಿದ್ದರು ಎಂಬುದನ್ನು ನಾನು ಹೇಳಲೇಬೇಕು’ ಎಂದು ರವಿಶಾಸ್ತ್ರಿ ಮಾಧ್ಯಮವೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಭರತ್ ಅರುಣ್ ನೇಮಕಕ್ಕೂ ವಿರೋಧವಿತ್ತಂತೆ!

‘ಭರತ್ ಅರುಣ್‌ ಅವರನ್ನು ಬೌಲಿಂಗ್ ಕೋಚ್ ಆಗಿ ನೇಮಿಸಲು ಆ ಜನರು ಬಯಸಿರಲಿಲ್ಲ. ಆದರೆ ಭರತ್ ಅರುಣ್ ಬೌಲಿಂಗ್ ತರಬೇತುದಾರರಾಗಿ ಮಾಡಿರುವ ಸಾಧನೆ ನೋಡಿದರೆ, ಭಾರತದಲ್ಲಿ ಹಿಂದೆಂದೂ ಈ ರೀತಿಯ ಕೋಚ್ ಅನ್ನು ಕಾಣಲು ಸಾಧ್ಯವಿಲ್ಲ’ ಎಂದು ರವಿಶಾಸ್ತ್ರಿ ಹೇಳಿದ್ದಾರೆ.

ಇದನ್ನೂ ಓದಿ: ಈ ಮೂವರು ಆಟಗಾರರಲ್ಲಿ ಒಬ್ಬರು ODI ತಂಡದ ಹೊಸ ಉಪನಾಯಕರಾಗಬಹುದು

ಕೋಚ್ ಹುದ್ದೆಗೆ ಗುಡ್ ಬೈ ಹೇಳಿದ ರವಿಶಾಸ್ತ್ರಿ

2017ರಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ(Virat Kohli) ಜೊತೆಗೆ ಜಗಳವಾಡಿದ ನಂತರ ಅನಿಲ್ ಕುಂಬ್ಳೆ ರಾಜೀನಾಮೆ ನೀಡಿದ್ದರು. ಈ ವೇಳೆ ಶಾಸ್ತ್ರಿ ಅವರು 2 ವರ್ಷಗಳ ಕಾಲ ಟೀಂ ಇಂಡಿಯಾ ಕೋಚ್ ಆದರು. ನಂತರ 2019ರಲ್ಲಿ ರವಿಶಾಸ್ತ್ರಿ ಅವರನ್ನ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಮರುನೇಮಕ ಮಾಡಲಾಗಿತ್ತು. ಟಿ-20 ವಿಶ್ವಕಪ್ ಬಳಿಕ ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದರು. ರವಿಶಾಸ್ತ್ರಿಯವರ ಕೋಚ್ ಸ್ಥಾನದ ಅವಧಿಯೂ ಮುಕ್ತಾಯವಾಗಿತ್ತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News