Babar Azam: ಪಾಕ್ ತಂಡದ ಟಿ20 ನಾಯಕ ಬಾಬರ್ ಅಜಮ್ ಇತ್ತೀಚೆಗೆ ಮಹತ್ವದ ಹೇಲಿಕೆ ನೀಡಿದ್ದಾರೆ. "ನಾನು ಎದುರಿಸಿದ ಅತ್ಯುತ್ತಮ ಬ್ಯಾಟ್ಸ್ಮನ್ ದಕ್ಷಿಣ ಆಫ್ರಿಕಾದ ಕ್ರಿಕೆಟ್ ದಂತಕಥೆ, ಎಬಿ ಡಿವಿಲಿಯರ್ಸ್" ಎಂದು ಹೇಳಿದ್ದಾರೆ. ಎಬಿ ಡಿವಿಲಿಯರ್ಸ್ ಅವರ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಬಾಬರ್ ಅಜಮ್ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಬಾಬರ್ ಅವರ ಹೇಳಿಕೆ ಕೇಳಿ ಎಬಿ ಡಿವಿಲಿಯರ್ಸ್ ಆಶ್ಚರ್ಯಚಕಿತರಾದರು.
ಹೀಗೆ ಸಂದರ್ಶನದಲ್ಲಿ ಮಾತನಾಡುತ್ತಾ ಬಾಬರ್ ಅಜಮ್ ಬೇರೆ ದೇಶದ ಆಟಗಾರರ ಹೆಸರು ತೆಗೆದುಕೊಳ್ಳು ನನಗೆ ಇಷ್ಟವಿಲ್ಲ ಆದರೆ ನೀವೆ ಬೆಸ್ಟ್ ಬ್ಯಾಟ್ಸ್ಮೆನ್ ಎಂದಿದ್ದಾರೆ. ಈ ವಿಡಿಯೋವನ್ನು ಎಬಿ ಡಿವಿಲಿಯರ್ಸ್ ತಮ್ಮ ಅಭಿಮಾನಿಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 2024ರ ಟಿ20 ವಿಶ್ವಕಪ್ಗೂ ಮುನ್ನ ಸಂದರ್ಶನ ನಡೆಸಲಾಗಿತ್ತು ಎಂದು ಎಬಿಡಿ ಈ ಪೋಸ್ಟ್ನ ಕೆಳಗೆ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: IPL 2025: ಮುಂಬೈ ಇಂಡಿಯನ್ಸ್ ತಂಡಕ್ಕೆ ಬಡಿದ ಸಿಡಿಲು..ರೋಹಿತ್ ಜೊತೆ ಸೇರಿ ತಂಡ ತೊರೆದ ಸ್ಟಾರ್ ಆಟಗಾರ..!
ಏಕದಿನ ವಿಶ್ವಕಪ್ ಮತ್ತು ಟಿ20 ವಿಶ್ವಕಪ್ ವೈಫಲ್ಯದಿಂದ ಬಾಬರ್ ಅಜಮ್ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಅವರನ್ನು ನಾಯಕತ್ವದ ಜವಾಬ್ದಾರಿಯಿಂದ ಕೆಳಗಿಳಿಸಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ. ಮತ್ತೊಂದೆಡೆ, ಪಿಸಿಬಿ ಪಾಕಿಸ್ತಾನದ ಅಗ್ರ ಆಟಗಾರರಿಗೆ ಫ್ರಾಂಚೈಸಿ ಟಿ 20 ಲೀಗ್ಗಳನ್ನು ಆಡಲು ಅನುಮತಿ ನೀಡುತ್ತಿಲ್ಲ. ಕೆನಡಾ ಟಿ20 ಲೀಗ್ ಆಡಲು ಸಿದ್ಧರಾಗಿರುವ ಬಾಬರ್ ಅಜಮ್, ರಿಜ್ವಾನ್ ಮತ್ತು ಇತರ ಆಟಗಾರರಿಗೆ ಪಿಸಿಬಿ ನಿರಾಕ್ಷೇಪಣಾ ಪತ್ರ ನೀಡಿಲ್ಲ.
ಪಾಕಿಸ್ತಾನ ತಂಡದ ಪ್ರಮುಖ ಆಟಗಾರರಿಗೆ ಎನ್ ಒಸಿ ನೀಡುವ ಯಾವುದೇ ಉದ್ದೇಶವಿಲ್ಲ ಎಂದು ಪಿಸಿಬಿ ಸ್ಪಷ್ಟಪಡಿಸಿದೆ. ಡಬ್ಲ್ಯುಟಿಸಿ 2025ರ ಅಂಗವಾಗಿ ಪಾಕಿಸ್ತಾನ 10 ಟೆಸ್ಟ್ ಪಂದ್ಯಗಳನ್ನು ಆಡಬೇಕಿದ್ದು, 2025ರ ಚಾಂಪಿಯನ್ಸ್ ಟ್ರೋಫಿಗೆ ಸಿದ್ಧವಾಗಬೇಕು ಎಂದು ಸ್ಪಷ್ಟಪಡಿಸಲಾಗಿದೆ. ತಮ್ಮ ಆಟಗಾರರ ಮೇಲೆ ಕೆಲಸದ ಹೊರೆ ತಪ್ಪಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪಿಸಿಬಿ ಸ್ಪಷ್ಟಪಡಿಸಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.