CCL 2023: ಬಂಗಾಳದ ಹುಲಿಗಳ ಸದೆಬಡಿದ ಕರ್ನಾಟಕ ಬುಲ್ಡೋಜರ್ಸ್: CCLನಲ್ಲಿ ಕಿಚ್ಚ ಪಡೆ ಶುಭಾರಂಭ

Karnataka Bulldozers vs Bengal Tigers: ಕರ್ನಾಟಕ ಬುಲ್ಡೋಜರ್ಸ್ ಬೆಂಗಾಲ್ ಟೈಗರ್ಸ್ ವಿರುದ್ಧ ಗೆಲುವಿನೊಂದಿಗೆ ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನ 2023 ರ ಋತುವನ್ನು ಪ್ರಾರಂಭಿಸಿದೆ. ಕರ್ನಾಟಕ ಬುಲ್ಡೋಜರ್ಸ್ ತಂಡ ಪಂದ್ಯವನ್ನು 8 ವಿಕೆಟ್‌ಗಳಿಂದ ಗೆದ್ದುಕೊಂಡಿದೆ. ಇದಕ್ಕೂ ಮೊದಲು ಕರ್ನಾಟಕ ಬುಲ್ಡೋಜರ್ಸ್ ವಿರುದ್ಧ ಬೆಂಗಾಲ್ ವಾರಿಯರ್ಸ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು.

Written by - Bhavishya Shetty | Last Updated : Feb 18, 2023, 08:26 PM IST
    • ಸೆಲೆಬ್ರಿಟಿ ಕ್ರಿಕೆಟ್ ಲೀಗ್ 2023 ಇಂದಿನಿಂದ ಪ್ರಾರಂಭ
    • ಬೆಂಗಾಲ್ ಟೈಗರ್ಸ್ ವಿರುದ್ಧ ಕರ್ನಾಟಕ ಬುಲ್ಡೋಜರ್ಸ್ ತಂಡವು ಗೆಲುವು ಸಾಧಿಸಿದೆ
    • ಕರ್ನಾಟಕ ಬುಲ್ಡೋಜರ್ಸ್ ತಂಡ ಪಂದ್ಯವನ್ನು 8 ವಿಕೆಟ್‌ಗಳಿಂದ ಗೆದ್ದುಕೊಂಡಿದೆ.
CCL 2023: ಬಂಗಾಳದ ಹುಲಿಗಳ ಸದೆಬಡಿದ ಕರ್ನಾಟಕ ಬುಲ್ಡೋಜರ್ಸ್: CCLನಲ್ಲಿ ಕಿಚ್ಚ ಪಡೆ ಶುಭಾರಂಭ title=
Karnataka Bulldozers

Celebrity Cricket League 2023: ಸೆಲೆಬ್ರಿಟಿ ಕ್ರಿಕೆಟ್ ಲೀಗ್ 2023 ಇಂದಿನಿಂದ ಪ್ರಾರಂಭವಾಗಿದ್ದು, ಕ್ರಿಕೆಟ್ ಪಿಚ್‌ನಲ್ಲಿ  ಬೆಂಗಾಲ್ ಟೈಗರ್ಸ್ ಗೆ ಮಣ್ಣುಮುಕ್ಕಿಸಿ ಪ್ರದೀಪ್ ಬೊಗಾದಿ ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡವು ಗೆಲುವು ಸಾಧಿಸಿದೆ.

ಕರ್ನಾಟಕ ಬುಲ್ಡೋಜರ್ಸ್ ಬೆಂಗಾಲ್ ಟೈಗರ್ಸ್ ವಿರುದ್ಧ ಗೆಲುವಿನೊಂದಿಗೆ ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನ 2023 ರ ಋತುವನ್ನು ಪ್ರಾರಂಭಿಸಿದೆ. ಕರ್ನಾಟಕ ಬುಲ್ಡೋಜರ್ಸ್ ತಂಡ ಪಂದ್ಯವನ್ನು 8 ವಿಕೆಟ್‌ಗಳಿಂದ ಗೆದ್ದುಕೊಂಡಿದೆ. ಇದಕ್ಕೂ ಮೊದಲು ಕರ್ನಾಟಕ ಬುಲ್ಡೋಜರ್ಸ್ ವಿರುದ್ಧ ಬೆಂಗಾಲ್ ವಾರಿಯರ್ಸ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು.

ಇದನ್ನೂ ಓದಿ: IND vs AUS: 2ನೇ ಟೆಸ್ಟ್ ಜೊತೆ ಅಂತ್ಯವಾಯಿತು ಟೀಂ ಇಂಡಿಯಾದ ಈ ಆಟಗಾರನ ವೃತ್ತಿ ಜೀವನ!

ಈ ಬಾರಿಯ ಸಿಸಿಎಲ್ ನಲ್ಲಿ ಹೊಸ ನಿಯಮಗಳನ್ನು ಜಾರಿಗ ತರಲಾಗಿದೆ. ಇದರ ಪ್ರಕಾರ, ಒಂದು ಇನ್ನಿಂಗ್ಸ್‌ನಲ್ಲಿ ಅಗ್ರ ಮೂರು ಬ್ಯಾಟ್ಸ್‌ಮನ್‌ಗಳು ಎರಡನೇ ಬಾರಿ ಅದೇ ಕ್ರಮಾಂಕದಲ್ಲಿ ಆಡುವಂತಿಲ್ಲ. ಪ್ರತಿ ಇನ್ನಿಂಗ್ಸ್ 50-ನಿಮಿಷದ ಅವಧಿಯನ್ನು ಮೀರಬಾರದು. ಪ್ರತಿಯೊಂದರ ನಡುವೆ ಗರಿಷ್ಠ ವಿರಾಮ 5 ನಿಮಿಷಗಳವರೆಗೆ ಇರುತ್ತದೆ.

ಝೀ ಎಂಟರ್‌ಟೈನ್‌ಮೆಂಟ್ ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನ ಪ್ರಸಾರ ಮತ್ತು ಸ್ಟ್ರೀಮಿಂಗ್ ಹಕ್ಕುಗಳನ್ನು ಹೊಂದಿದೆ.  Zee ಚಾನೆಲ್‌ಗಳು ಒಂಬತ್ತು ವಿಭಿನ್ನ ಭಾಷೆಗಳಲ್ಲಿ ಪಂದ್ಯಗಳನ್ನು ಪ್ರಸಾರ ಮಾಡಿದರೆ, Zee5 ಅದನ್ನು ಸ್ಟ್ರೀಮ್ ಮಾಡುತ್ತದೆ.

ಎರಡು ಬಾರಿ ಪ್ರಶಸ್ತಿ ಗೆದ್ದು ಹಲವು ಬಾರಿ ರನ್ನರ್ ಅಪ್ ಆಗಿ ಹೊರಹೊಮ್ಮಿರುವ ಕರ್ನಾಟಕ ಬುಲ್ಡೋಜರ್ಸ್ ಇಂದು ಶುಭಾರಂಭ ಮಾಡಿದ್ದು, ಮತ್ತೆ ಟ್ರೋಫಿ ಗೆಲ್ಲುವತ್ತ ಗಮನಹರಿಸಲಿದೆ. ಈ ಬಾರಿ ಕಿಚ್ಚ ಸುದೀಪ್ ಆಲ್ ರೌಂಡರ್ ಆಗಿ ತಂಡದಲ್ಲಿದ್ದರೂ ತಂಡವನ್ನು ಮುನ್ನಡೆಸುತ್ತಿಲ್ಲ. ಪ್ರದೀಪ್ ಬೋಗಾದಿ ನಾಯಕನಾಗಿದ್ದು, ಸಿಸಿಎಲ್ ಅನುಭವಿ ಜೆ ಕಾರ್ತಿಕ್ ಉಪನಾಯಕರಾಗಿದ್ದಾರೆ. ಸೆಂಚುರಿ ಸ್ಟಾರ್ ಶಿವರಾಜಕುಮಾರ್, ಗೋಲ್ಡನ್ ಸ್ಟಾರ್ ಗಣೇಶ್ ಇದ್ದಾರೆ. ಗಣೇಶ್ ಸಿಸಿಎಲ್ ನಲ್ಲಿ ಆಡುತ್ತಿರುವುದು ಇದೇ ಮೊದಲು.

ಬುಲ್ಡೋಜರ್ಸ್‌ನ ಮುಂದಿನ ಪಂದ್ಯವು ಫೆಬ್ರವರಿ 26 ರಂದು ಜೈಪುರದಲ್ಲಿ ಕೇರಳ ಸ್ಟ್ರೈಕರ್ಸ್ ವಿರುದ್ಧ ನಡೆಯಲಿದೆ. ತಂಡದ ಬಹುತೇಕ ಸದಸ್ಯರು ಫೆಬ್ರವರಿ 24 ಮತ್ತು 25 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಕನ್ನಡ ಚಲನಚಿತ್ರ ಕಪ್‌ನ ಭಾಗವಾಗಿರುವ ಕಾರಣ, ಅಲ್ಲಿ ಅವರು ಎರಡು ದಿನಗಳ T10 ಕ್ರಿಕೆಟ್ ಅನ್ನು ಆಡಲಿದ್ದಾರೆ. ಆ ನಂತರ ಜೈಪುರಕ್ಕೆ ತೆರಳುತ್ತಾರೆ.

ಇದನ್ನೂ ಓದಿ: WPL 2023: ಆರ್​ಸಿಬಿ ಕ್ಯಾಪ್ಟನ್ ಆಗಿ ಸ್ಮೃತಿ ಮಂಧಾನಾ ಆಯ್ಕೆ!

ಈ ವರ್ಷ ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನಲ್ಲಿ ಭಾರತದ ಎಂಟು ವಿವಿಧ ಪ್ರದೇಶಗಳ ಎಂಟು ತಂಡಗಳು ಭಾಗವಹಿಸಲಿವೆ. ಜೈಪುರ, ಹೈದರಾಬಾದ್, ರಾಯ್‌ಪುರ, ಜೋಧ್‌ಪುರ, ಬೆಂಗಳೂರು ಮತ್ತು ತಿರುವನಂತಪುರಂ ಸೇರಿದಂತೆ ದೇಶದ ಆರು ದೊಡ್ಡ ನಗರಗಳಲ್ಲಿ ನಡೆಯಲಿವೆ 19 ಪಂದ್ಯಗಳು ನಡೆಯಲಿವೆ. ಸೆಲೆಬ್ರಿಟಿ ಕ್ರಿಕೆಟ್ ಲೀಗ್ 2023 ಎಂಟು ತಂಡಗಳು ಇಲ್ಲಿವೆ. ಕರ್ನಾಟಕ ಬುಲ್ಡೋಜರ್ಸ್, ತೆಲುಗು ವಾರಿಯರ್, ಭೋಜ್‌ಪುರಿ ದಬಾಂಗ್ಸ್, ಬೆಂಗಾಲ್ ಟೈಗರ್ಸ್, ಚೆನ್ನೈ ರೈನೋಸ್, ಕೇರಳ ಸ್ಟ್ರೈಕರ್ಸ್, ಮುಂಬೈ ಹೀರೋಸ್ ಮತ್ತು ಪಂಜಾಬ್ ಡಿ ಶೇರ್,

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News