ನವದೆಹಲಿ: ವೆಸ್ಟ್ಇಂಡೀಸ್ ಕ್ರಿಕೆಟಿಗ ಕ್ರಿಸ್ ಗೇಲ್ ಅವರು ಪಾಕಿಸ್ತಾನದ ಬ್ಯಾಟ್ಸ್ಮನ್ ಶಾಹಿದ್ ಅಫ್ರಿದಿ ಅವರ ಹೆಸರಿನಲ್ಲಿದ್ದ ಅತಿ ಸಿಕ್ಸರ್ ಗಳ ದಾಖಲೆಯನ್ನು ಸರಿಗಟ್ಟಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಏಕದಿನ ಪಂದ್ಯದಲ್ಲಿ ಐದು ಸಿಕ್ಸರ್ ಗಳನ್ನು ಬಾರಿಸುವುದರ ಮೂಲಕ ಗೇಲ್ ಈ ಸಾಧನೆ ಮಾಡಿದರು.
ಈಗ ಗೇಲ್ ಮತ್ತು ಅಫ್ರಿದಿ ಒಟ್ಟು 476 ಸಿಕ್ಸರ್ಗಳ ದಾಖಲೆಗಳನ್ನು ಹೊಂದಿದ್ದಾರೆ. ಆದರೆ ವಿಂಡೀಸ್ ಬ್ಯಾಟ್ಸ್ಮನ್ ಸಾಧನೆಯನ್ನು ಕೇವಲ 443 ಪಂದ್ಯಗಳಲ್ಲಿ ತಲುಪಿದರೆ,ಆಫ್ರಿದಿ ಅವರು 524 ಪಂದ್ಯಗಳಲ್ಲಿ ಸಾಧಿಸಿದ್ದಾರೆ.
ಗೇಲ್ ಈಗ ಏಕದಿನ ಅಂತಾರಾಷ್ಟ್ರೀಯ ಪಂದ್ಯದ 275 ಸಿಕ್ಸರ್ಗಳನ್ನು ಬಾರಿಸಿದ್ದಾರೆ. ಅಫ್ರಿದಿ 351 ಸಿಕ್ಸರ್ಗಳನ್ನು ಬಾರಿಸಿದ್ದಾರೆ. ಆದರೆ ಟೆಸ್ಟ್ ನಲ್ಲಿ ಗೇಲ್ 98 ಸಿಕ್ಸರ ಗಳಿಸಿ ಅಗ್ರಸ್ಥಾನದಲ್ಲಿದ್ದರೆ , ಅಫ್ರಿದಿ ಕೇವಲ 52 ಸಿಕ್ಸ್ಗಳನ್ನು ಹೊಡೆದಿದ್ದಾರೆ.
ಗೆಲ್ ಅವರು ಟ್ವೆಂಟಿ ಕ್ರಿಕೆಟ್ ನಲ್ಲಿ ವೇಗದ ಶತಕವನ್ನು ಹೊಡೆದ ದಾಖಲೆಯನ್ನು ಹೊಂದಿದ್ದಾರೆ. ಐಪಿಎಲ್ ನಲ್ಲಿ ಕೇವಲ 30 ಎಸೆತಗಳಲ್ಲಿ ಈ ಸಾಧನೆಯನ್ನು ಮಾಡಿದ್ದರು.