Commonwealth Games 2022 : ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಗೇಮ್ಸ್ 2022ರಲ್ಲಿ ಭಾರತೀಯ ಆಟಗಾರರ ಅದ್ಭುತ ಪ್ರದರ್ಶನ ಮುಂದುವರೆದಿದೆ. ಪುರುಷರ 109 ಕೆಜಿ ತೂಕ ವೇಟ್ಲಿಫ್ಟಿಂಗ್ ವಿಭಾಗದಲ್ಲಿ ಭಾರತದ ವೇಟ್ಲಿಫ್ಟರ್ ಲವ್ಪ್ರೀತ್ ಸಿಂಗ್ ಕಂಚಿನ ಪದಕ ಗೆದ್ದು ಬಿಗಿದ್ದಾರೆ.
ಸ್ನ್ಯಾಚ್ ಮತ್ತು ಕ್ಲೀನ್ ಮತ್ತು ಜರ್ಕ್ನ ಪ್ರತಿಯೊಂದು ಪ್ರಯತ್ನದಲ್ಲೂ ಭಾರ ಎತ್ತುವಲ್ಲಿ ಯಶಸ್ವಿಯಾದ ಲವ್ಪ್ರೀತ್ ಅವರ ಪ್ರದರ್ಶನವು ಅದ್ಭುತವಾಗಿತ್ತು. ಮೊದಲ ಸ್ನ್ಯಾಚ್ನಲ್ಲಿ ಅಮೃತ್ಸರ್ ಮೂಲದ ಲವ್ಪ್ರೀತ್ ಸಿಂಗ್ ಅನಾಯಾಸವಾಗಿ 157 ಕೆಜಿ ವೇಟ್ಲಿಫ್ಟ್ ಮಾಡಿದರು. ಇನ್ನು ಎರಡನೇ ಸ್ನ್ಯಾಚ್ನಲ್ಲಿ 4 ಕೆಜಿ ಹೆಚ್ಚಿಗೆ ಅಂದರೆ 161 ಭಾರ ಎತ್ತುವಲ್ಲಿ ಯಶಸ್ವಿಯಾದರು. ಇನ್ನು ಮೂರನೇ ಹಾಗೂ ಕೊನೆಯ ಪ್ರಯತ್ನದಲ್ಲಿ ಲವ್ಪ್ರೀತ್ ಸಿಂಗ್ 163 ಕೆಜಿ ಭಾರ ಎತ್ತುವ ಮೂಲಕ ಸ್ನ್ಯಾಚ್ ಸ್ಪರ್ಧೆ ಮುಕ್ತಾಯದ ವೇಳೆಗೆ ಜಂಟಿ ಎರಡನೇ ಸ್ಥಾನ ಪಡೆದರು. ಕೆನಡಾದ ಪಿರ್ರೆ ಬೆಸೆಟ್ಟೆ ಕೂಡಾ 163 ಕೆಜಿ ವೇಟ್ಲಿಫ್ಟ್ ಮಾಡುವ ಮೂಲಕ ಲವ್ಪ್ರೀತ್ ಸಿಂಗ್ ಜತೆ ಜಂಟಿ ಎರಡನೇ ಸ್ಥಾನ ಹಂಚಿಕೊಂಡರು. ಸಮೊಹದ ಜಾಕ್ ಒಪ್ಲಾಂಜ್ 164 ಕೆಜಿ ಭಾರ ಎತ್ತುವ ಮೂಲಕ ಅಗ್ರಸ್ಥಾನ ಕಾಯ್ದಕೊಂಡರು.
Team 🇮🇳 wins its 9th 🏋🏻♀️ medal through Lovepreet Singh’s 🥉 in the Men’s 109 KG Category at @birminghamcg22 ! #EkIndiaTeamIndia #B2022 pic.twitter.com/PXijZhHIrK
— Team India (@WeAreTeamIndia) August 3, 2022
ಇದನ್ನೂ ಓದಿ : Commonwealth Games 2022: ವೇಟ್ಲಿಫ್ಟಿಂಗ್ನಲ್ಲಿ ವಿಕಾಸ್ ಠಾಕೂರ್ ಗೆ ಬೆಳ್ಳಿ
ಇನ್ನು ಕ್ಲೀನ್ ಅಂಡ್ ಜರ್ಕ್ ವಿಭಾಗದಲ್ಲಿ ಲವ್ಪ್ರೀತ್ ಸಿಂಗ್ ಮೊದಲ ಪ್ರಯತ್ನದಲ್ಲಿ ಸುಲಭವಾಗಿ 185 ಕೆಜಿ ಭಾರ ಎತ್ತುವ ಮೂಲಕ ಉತ್ತಮ ಆರಂಭವನ್ನು ಪಡೆದರು. ಇನ್ನು ಎರಡನೇ ಕ್ಲೀನ್ ಅಂಡ್ ಜರ್ಕ್ ಸ್ಪರ್ಧೆಯಲ್ಲಿ 189 ಕೆಜಿ ಭಾರ ಎತ್ತಿದರು. ಇನ್ನು ಮೂರನೇ ಹಾಗೂ ಕೊನೆಯ ಪ್ರಯತ್ನದಲ್ಲಿ 192 ಕೆಜಿ ಭಾರ ಎತ್ತುವ ಮೂಲಕ ಲವ್ಪ್ರೀತ್ ಸಿಂಗ್ ಪದಕ ಗೆದ್ದು ಬೀಗಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.