ಪಾಕ್ ವಿರುದ್ಧ ಗೆದ್ದಾಯ್ತು… ಏಷ್ಯಾಕಪ್ ಫೈನಲ್ ಎಂಟ್ರಿಯಾಗ್ಬೇಕು ಅಂದ್ರೆ ಇನ್ನೆಷ್ಟು ಪಂದ್ಯ ಗೆಲ್ಲಬೇಕು ಭಾರತ?

Asia Cup 2023: ಸೋಮವಾರದ ಮೀಸಲು ದಿನದಂದು ಭಾರತ 228 ರನ್‌’ಗಳ ಬೃಹತ್ ಅಂತರದಿಂದ ಪಾಕಿಸ್ತಾನದ ವಿರುದ್ಧ ಭರ್ಜರಿ ಜಯ ಸಾಧಿಸಿತು. ಈ ಮೂಲಕ ಅಂಕಪಟ್ಟಿಯಲ್ಲಿ ಭಾರತ ಅಗ್ರಸ್ಥಾನಕ್ಕೇರಿದೆ,

Written by - Bhavishya Shetty | Last Updated : Sep 12, 2023, 10:16 AM IST
    • ಪಾಕಿಸ್ತಾನದ ವಿರುದ್ಧ ಭರ್ಜರಿ ಜಯ ಸಾಧಿಸಿದ ಭಾರತ
    • ಹೀಗಿರುವಾಗ ಭಾರತಕ್ಕೆ ಫೈನಲ್ ಪ್ರವೇಶಿಸಲು ಬೇಕಿರುವ ಅರ್ಹತೆಗಳೇನು?
    • ಇನ್ನೆಷ್ಟು ಪಂದ್ಯಗಳನ್ನು ಭಾರತ ಗೆಲ್ಲಬೇಕು? ಈ ಎಲ್ಲಾ ಅಂಶಗಳ ಬಗ್ಗೆ ಮುಂದೆ ತಿಳಿಯೋಣ.
ಪಾಕ್ ವಿರುದ್ಧ ಗೆದ್ದಾಯ್ತು… ಏಷ್ಯಾಕಪ್ ಫೈನಲ್ ಎಂಟ್ರಿಯಾಗ್ಬೇಕು ಅಂದ್ರೆ ಇನ್ನೆಷ್ಟು ಪಂದ್ಯ ಗೆಲ್ಲಬೇಕು ಭಾರತ? title=
Qualification Scenarios

Team India final Qualification Scenarios for Asia Cup 2023 Final: ಏಷ್ಯಾಕಪ್ 2023ರ ಟೂರ್ನಿಯ ಫೈನಲ್‌’ಗೆ ಚಾಲನೆ ಸಿಕ್ಕಿದೆ. ಭಾರತ, ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ಇದೀಗ ಏಷ್ಯಾ ಕಪ್ 2023 ರ ಫೈನಲ್‌ ಲಗ್ಗೆ ಇಡಲು ಕಾತುರದಿಂದ ಕಾಯುತ್ತಿದ್ದು, ಸೆಪ್ಟೆಂಬರ್ 17 ರಂದು  ಫೈನಲ್‌ ನಡೆಯಲಿದೆ.

ಇದನ್ನೂ ಓದಿ: 22 ಯಾರ್ಡ್ ಪಿಚ್’ನಲ್ಲಿ ರನ್ ಗಳಿಸಲು ಗಂಟೆಗೆ ಎಷ್ಟು ಕಿ.ಮೀ ವೇಗದಲ್ಲಿ ಓಡಿದ್ದಾರೆ ಕೊಹ್ಲಿ?

ಸೋಮವಾರದ ಮೀಸಲು ದಿನದಂದು ಭಾರತ 228 ರನ್‌’ಗಳ ಬೃಹತ್ ಅಂತರದಿಂದ ಪಾಕಿಸ್ತಾನದ ವಿರುದ್ಧ ಭರ್ಜರಿ ಜಯ ಸಾಧಿಸಿತು. ಈ ಮೂಲಕ ಅಂಕಪಟ್ಟಿಯಲ್ಲಿ ಭಾರತ ಅಗ್ರಸ್ಥಾನಕ್ಕೇರಿದೆ, ಜೊತೆಗೆ ಪಾಕಿಸ್ತಾನ ಮೂರನೇ ಸ್ಥಾನಕ್ಕೆ ಕುಸಿದಿದೆ. ಇದು ಸೆಪ್ಟೆಂಬರ್ 11 ರಂದು ಭಾರತ ಮತ್ತು ಪಾಕಿಸ್ತಾನ ಪಂದ್ಯದ ಫಲಿತಾಂಶದ ನಂತರ ನವೀಕರಿಸಲ್ಪಟ್ಟ ಪಾಯಿಂಟ್ ಟೇಬಲ್ ಆಗಿದೆ.

ಬಾಂಗ್ಲಾದೇಶವು ತನ್ನ ಎರಡೂ ಪಂದ್ಯಗಳಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧ ಸೋತಿದೆ. ಭಾರತದ ವಿರುದ್ಧ ಒಂದು ಪಂದ್ಯ ಮಾತ್ರ ಆಡಬೇಕಿದೆ. ಮತ್ತೊಂದೆಡೆ ಶ್ರೀಲಂಕಾ ಇನ್ನೂ ಭಾರತ ಮತ್ತು ಪಾಕಿಸ್ತಾನವನ್ನು ಎದುರಿಸಬೇಕಾಗಿದೆ. ಹೀಗಿರುವಾಗ ಭಾರತಕ್ಕೆ ಫೈನಲ್ ಪ್ರವೇಶಿಸಲು ಬೇಕಿರುವ ಅರ್ಹತೆಗಳೇನು? ಇನ್ನೆಷ್ಟು ಪಂದ್ಯಗಳನ್ನು ಭಾರತ ಗೆಲ್ಲಬೇಕು? ಈ ಎಲ್ಲಾ ಅಂಶಗಳ ಬಗ್ಗೆ ಮುಂದೆ ತಿಳಿಯೋಣ.

ಇದನ್ನೂ ಓದಿ: 11 ವರ್ಷ ಹಳೆಯ ದಾಖಲೆ ಮುರಿದು ಇತಿಹಾಸ ಬರೆದ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಜೋಡಿ!

ಏಷ್ಯಾ ಕಪ್ 2023 ಪಂದ್ಯಾವಳಿಯ ಫೈನಲ್ ತಲುಪಲು ಭಾರತ, ತಮ್ಮ ಉಳಿದಿರುವ ಎರಡು ಪಂದ್ಯಗಳಲ್ಲಿ ಒಂದನ್ನು ಗೆಲ್ಲಬೇಕು. ಹೀಗಾದರೆ ಫೈನಲ್‌’ನಲ್ಲಿ ಅವರ ಸ್ಥಾನವನ್ನು ಖಚಿತವಾಗುತ್ತದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News