ಧೋನಿ ಫ್ಯಾನ್ ಎಂದು ಯೂಟರ್ನ್ ಹೊಡೆದ ಯುವಿ ತಂದೆ

 ಇತ್ತೀಚಿಗೆ ಮಹೇಂದ್ರಸಿಂಗ್ ಅವರನ್ನು ಬಹಿರಂಗವಾಗಿ ತೆಗಳಿದ್ದ ಭಾರತದ ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್ ತಂದೆ ಈಗ ಯುಟರ್ನ್ ಹೊಡೆದು ತಾವು ಧೋನಿ ಫ್ಯಾನ್ ಎಂದು ಹೇಳಿಕೊಂಡಿದ್ದಾರೆ.

Last Updated : Jul 26, 2019, 01:38 PM IST
ಧೋನಿ ಫ್ಯಾನ್ ಎಂದು ಯೂಟರ್ನ್ ಹೊಡೆದ ಯುವಿ ತಂದೆ  title=

ನವದೆಹಲಿ:  ಇತ್ತೀಚಿಗೆ ಮಹೇಂದ್ರಸಿಂಗ್ ಅವರನ್ನು ಬಹಿರಂಗವಾಗಿ ತೆಗಳಿದ್ದ ಭಾರತದ ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್ ತಂದೆ ಈಗ ಯುಟರ್ನ್ ಹೊಡೆದು ತಾವು ಧೋನಿ ಫ್ಯಾನ್ ಎಂದು ಹೇಳಿಕೊಂಡಿದ್ದಾರೆ.

ಭಾರತ ತಂಡವು ವಿಶ್ವಕಪ್ ಸೆಮಿಫೈನಲ್ ನಲ್ಲಿ ಸೋಲನ್ನು ಅನುಭವಿಸಿದ ನಂತರ ವಾಗ್ದಾಳಿ ನಡೆಸಿದ್ದ ಯೋಗರಾಜ್ ಸಿಂಗ್,  2015 ಹಾಗೂ 2019 ರಲ್ಲಿ ಭಾರತ ವಿಶ್ವಕಪ್ ಸೋಲಲು ಧೋನಿ ಕಾರಣ ಎಂದು ವಾಗ್ದಾಳಿ ನಡೆಸಿದ್ದರು. ಯುವರಾಜ್ ಸಿಂಗ್ ವೀರೇಂದ್ರ ಸೆಹ್ವಾಗ್, ಹಾಗೂ ಗೌತಮ್ ಗಂಭೀರ್ ಅವರನ್ನು ತಂಡದಿಂದ ಹೊರಗೆ ಹಾಕಲು ಧೋನಿ ಕಾರಣ ಎಂದು ಹೇಳಿದ್ದರು.

ಇತ್ತೀಚಿಗೆ ಖಾಸಗಿ ಚಾನಲ್ ವೊಂದಕ್ಕೆ ಮಾತನಾಡಿ ಯುಟರ್ನ್ ಹೊಡೆದಿದ್ದಾರೆ. ನಾನೆಂದಿಗೂ ಆ ರೀತಿ ಹೇಳಿಲ್ಲ, ಸೋಲಿನ ಕಾರಣಕ್ಕಾಗಿ ಧೋನಿ ಮೇಲೆ ಎಂದಿಗೂ ಆರೋಪ ಮಾಡಿಲ್ಲ. ನೀವು ತಪ್ಪು ಪ್ರಶ್ನೆಯನ್ನು ತಪ್ಪಾದ ವ್ಯಕ್ತಿಗೆ ಕೇಳಿದಿದ್ದಿರಿ ಎಂದು ಅವರು ಹೇಳಿದರು. ಧೋನಿ ಇತ್ತೀಚಿಗೆ ಸೆಮಿಫೈನಲ್ ಪಂದ್ಯದ ಭಾರತ ಸೊಲನ್ನು ಅನುಭವಿಸುವ ಮೂಲಕ ಟೂರ್ನಿಯಿಂದ ಹೊರಕ್ಕೆ ಬಂದಿತ್ತು. ಟೂರ್ನಿಯುದ್ದಕ್ಕೂ ಪ್ರಬಲ ತಂಡ ಎಂದು ಬಿಂಬಿತವಾಗಿದ್ದ ಭಾರತ ತಂಡವು ಸೆಮಿಸ್ ಹಂತದಲ್ಲಿ ಹೀನಾಯ ಸೋಲನ್ನು ಅನುಭವಿಸಿತು.

ಈ ಹಿನ್ನಲೆಯಲ್ಲಿ ಧೋನಿ ನಿವೃತ್ತಿ ನೀಡುತ್ತಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು, ಆದರೆ ಧೋನಿ ಈಗ ಈ ಬಗ್ಗೆ ಯಾವುದೇ ಅಂತಿಮ ನಿರ್ಧಾರವನ್ನು ಇದುವರೆಗೆ ತೆಗೆದುಕೊಂಡಿಲ್ಲ .ಈಗ ಅವರು ಎರಡು ತಿಂಗಳ ಕಾಲ ಮಿಲಿಟರಿ ಸೇವೆ ತರಬೇತಿ ಕೇಂದ್ರದಲ್ಲಿ ನಿರತರಾಗಿದ್ದಾರೆ.

Trending News