ನಿಮ್ಮನ್ನು ಸ್ವತಃ ಮಾನಸಿಕ ತಜ್ಞರಲ್ಲಿ ಕರೆದೊಯ್ಯುವೆ- ಆಫ್ರಿದಿಗೆ ಗಂಭೀರ್ ತೀರುಗೇಟು

ಇತ್ತೀಚಿಗೆ ಬಿಡುಗಡೆಯಾದ ಶಾಹಿದ್ ಆಫ್ರಿದಿ ತಮ್ಮ ಆತ್ಮಚರಿತ್ರೆ ಗೇಮ್ ಚೆಂಜರ್ ನಲ್ಲಿ ಬರೆದಿರುವ ಹಲವು ವಿಷಯಗಳು ಈಗ ವಿವಾದಕ್ಕೆ ಕಾರಣವಾಗಿವೆ. 

Last Updated : May 4, 2019, 01:35 PM IST
ನಿಮ್ಮನ್ನು ಸ್ವತಃ ಮಾನಸಿಕ ತಜ್ಞರಲ್ಲಿ ಕರೆದೊಯ್ಯುವೆ- ಆಫ್ರಿದಿಗೆ ಗಂಭೀರ್ ತೀರುಗೇಟು title=
Photo courtesy: Twitter

ನವದೆಹಲಿ: ಇತ್ತೀಚಿಗೆ ಬಿಡುಗಡೆಯಾದ ಶಾಹಿದ್ ಆಫ್ರಿದಿ ತಮ್ಮ ಆತ್ಮಚರಿತ್ರೆ ಗೇಮ್ ಚೆಂಜರ್ ನಲ್ಲಿ ಬರೆದಿರುವ ಹಲವು ವಿಷಯಗಳು ಈಗ ವಿವಾದಕ್ಕೆ ಕಾರಣವಾಗಿವೆ. 

ಈ ಆತ್ಮಚರಿತ್ರೆಯಲ್ಲಿ ಆಫ್ರಿದಿ ಗೌತಮ್ ಗಂಭೀರ್ ಅವರ ಬಗ್ಗೆ "ಗಂಭೀರ್ ಒಂದು ರೀತಿಯಲ್ಲಿ ಡಾನ್ ಬ್ರಾಡ್ ಮನ್ ಮತ್ತು ಜೇಮ್ಸ್ ಬಾಂಡ್ ರೀತಿಯಲ್ಲಿ ವರ್ತಿಸುತ್ತಾರೆ. ಆದರೆ ಅವರು ಯಾವುದೇ ಉತ್ತಮ ಕ್ರಿಕೆಟ್ ದಾಖಲೆಗಳನ್ನು ಹೊಂದಿಲ್ಲ" ಎಂದು ಆಫ್ರಿದಿ ವ್ಯಂಗ್ಯವಾಡಿದ್ದಾರೆ. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಗೌತಮ್ ಗಂಭೀರ್ "ನೀವು ಹಾಸ್ಯಗಾರ ! ಹೇಗಾದರೂ, ನಾವು ಇನ್ನೂ ವೈದ್ಯಕೀಯ ಪ್ರವಾಸೋದ್ಯಮಕ್ಕೆ ಪಾಕಿಸ್ತಾನಿಗಳಿಗೆ ವೀಸಾಗಳನ್ನು ನೀಡುತ್ತಿದ್ದೇವೆ. ನಾನು ನಿಮ್ಮನ್ನು ವೈಯಕ್ತಿಕವಾಗಿ ಮನೋವೈದ್ಯರ ಬಳಿ ಕರೆದೊಯ್ಯುತ್ತೇನೆ." ಎಂದು ಟ್ವೀಟ್ ಮಾಡಿದ್ದಾರೆ.

ಕೆಲವು ವಿರೋಧಿಗಳು ವೈಯಕ್ತಿಕ, ಕೆಲವರು ವೃತ್ತಿಪರ, ಅದರಲ್ಲಿ ಮೊದಲನೆಯ ಕೂತೂಹಲಕರ ವ್ಯಕ್ತಿ ಗಂಭೀರ್. ಅವರ ಮನೋಭಾವವೇ ಸಮಸ್ಯೆಯಿಂದ ಕೂಡಿದೆ.ಅವರಿಗೆ ಯಾವುದೇ ವ್ಯಕ್ತಿತ್ವವಿಲ್ಲ. ಕ್ರಿಕೆಟ್ ನಲ್ಲಿ ಅವರಿಗೆ ಯಾವುದೇ ಅಂತಹ ಉತ್ತಮ ಗುಣವಿಲ್ಲ, ಯಾವುದೇ ಉತ್ತಮ ದಾಖಲೆಗಳಿಲ್ಲ ಬರಿ ಕೇವಲ ಅತಿರೇಕದ ಮನೋಭಾವವೊಂದೆ ಎಂದು ಆಫ್ರಿದಿ ಬರೆದುಕೊಂಡಿದ್ದಾರೆ. ಈ ಹಿಂದೆ ಮೈದಾನದಲ್ಲಿ ಗಂಭೀರ್ ಹಾಗೂ ಹಾಗೂ ಆಫ್ರಿದಿ ಎಂದಿಗೂ ಉತ್ತಮ ಸಂಬಂಧವನ್ನು ಹೊಂದಿಲ್ಲ, ಅದು ಈಗ ಆಫ್ರಿದಿಯವರ ಬರಹದಲ್ಲಿ ಕೂಡ ವ್ಯಕ್ತವಾಗಿದೆ.

Trending News