U-19 Women's T20 World Cup: ಭಾರತದ ಟ್ರೋಫಿ ವಿಜೇತ ನಾಯಕಿ ಶಫಾಲಿ ವರ್ಮಾ, ಅವರ ಆರಂಭಿಕ ಜೊತೆಗಾರ್ತಿ ಶ್ವೇತಾ ಸೆಹ್ರಾವತ್ ಮತ್ತು ಲೆಗ್ ಸ್ಪಿನ್ನರ್ ಪಾರ್ಶವಿ ಚೋಪ್ರಾ ಅವರನ್ನು ಐಸಿಸಿ ಅಂಡರ್-19 ಮಹಿಳಾ ಟಿ 20 ವಿಶ್ವಕಪ್ ತಂಡದಲ್ಲಿ ಸೇರಿಸಲಾಗಿದೆ. ಪಂದ್ಯಾವಳಿಯುದ್ದಕ್ಕೂ ಬ್ಯಾಟ್ ಮತ್ತು ಅತ್ಯುತ್ತಮ ತಂತ್ರಗಾರಿಕೆ ಪ್ರಯೋಗಿಸಿದ ಕಾರಣ ಶಫಾಲಿ ಅವರಿಗೆ ಅಗ್ರಸ್ಥಾನವನ್ನು ನೀಡಲಾಗಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್ ವಿರುದ್ಧ, ಶಫಾಲಿ ವರ್ಮಾ 34 ಎಸೆತಗಳಲ್ಲಿ 12 ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳಿಂದ 78 ರನ್‌ಗಳ ಅಬ್ಬರದ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. 172 ರನ್‌ಗಳೊಂದಿಗೆ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಮೂರನೇ ಆಟಗಾರ್ತಿಯಾಗಿ ಹೊರಹೊಮ್ಮಿದ್ದಾರೆ. ಇನ್ನು ಬೌಲಿಂಗ್ ನಲ್ಲಿ ಶೆಫಾಲಿ ಏಳು ಪಂದ್ಯಗಳಲ್ಲಿ ಕೇವಲ 5.04 ಎಕಾನಮಿ ದರದಲ್ಲಿ 4 ವಿಕೆಟ್ ಪಡೆದರು.
ಇದನ್ನೂ ಓದಿ: ವಿಶ್ವಕಪ್ ಗೆದ್ದು ಇತಿಹಾಸ ಸೃಷ್ಟಿಸಿದ ಮಹಿಳಾ ತಂಡಕ್ಕೆ ಮತ್ತೊಂದು ಬಂಪರ್ ಘೋಷಣೆ ಮಾಡಿದ BCCI
ಇನ್ನು ಶ್ವೇತಾ, ಪಂದ್ಯಾವಳಿಯಲ್ಲಿ ಸ್ಟಾರ್ ಆಟಗಾರ್ತಿಯಾಗಿದ್ದರು, ಭಾರತವು ಮೊದಲ ಅಂಡರ್-19 ಮಹಿಳಾ ಟಿ 20 ವಿಶ್ವಕಪ್‌ನಲ್ಲಿ ವಿಜೇತರಾಗಿ ಹೊರಹೊಮ್ಮಿದೆ. ಮಹಿಳಾ ಕ್ರಿಕೆಟ್‌ನಲ್ಲಿ ದೇಶದ ಮೊದಲ ಟ್ರೋಫಿಯನ್ನು ಮನೆಗೆ ತಂದಿದೆ. ಭಾರತದ ಉಪನಾಯಕಿ ಶ್ವೇತಾ ದಕ್ಷಿಣ ಆಫ್ರಿಕಾ ವಿರುದ್ಧ ಔಟಾಗದೆ 92 ರನ್ ಗಳಿಸುವುದರೊಂದಿಗೆ ಪಂದ್ಯಾವಳಿಯನ್ನು ಪ್ರಾರಂಭಿಸಿದ್ದರು.
ಇದರ ಜೊತೆಗೆ ಎರಡು ಅರ್ಧ ಶತಕಗಳನ್ನು ಬಾರಿಸಿದ್ದರು. ಅವಗಳೆಂದರೆ, ಯುಎಇ ವಿರುದ್ಧ 74 ಮತ್ತು ನ್ಯೂಜಿಲೆಂಡ್ ವಿರುದ್ಧ ಔಟಾಗದೆ 61. ಮತ್ತು 99 ರ ಸರಾಸರಿಯಲ್ಲಿ ಮತ್ತು 139.43 ರ ಸ್ಟ್ರೈಕ್ ರೇಟ್‌ನಲ್ಲಿ 297 ರನ್‌ಗಳೊಂದಿಗೆ ಪಂದ್ಯಾವಳಿಯ ಅಗ್ರ ರನ್-ಸ್ಕೋರರ್ ಆಗಿ ಕೊನೆಗೊಂಡರು.
ಪಾರ್ಶ್ವಿ ಚೋಪ್ರಾ ಅವರು ಪಂದ್ಯಾವಳಿಯಲ್ಲಿ ನಿಧಾನಗತಿಯ ಆರಂಭವನ್ನು ಮಾಡಿದ್ದರೂ ಸಹ, ಭಾರತದ ಮೊದಲ ಮೂರು ಪಂದ್ಯಗಳಲ್ಲಿ ಕೇವಲ ಎರಡು ವಿಕೆಟ್‌ಗಳನ್ನು ಪಡೆದರು. ಆದರೆ ಪಂದ್ಯಾವಳಿಯ ಕೊನೆಯಲ್ಲಿ ಆರು ಪಂದ್ಯಗಳಲ್ಲಿ 11 ವಿಕೆಟ್‌ಗಳೊಂದಿಗೆ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ್ತಿಯಾಗಿ ಗುರುತಿಸಿಕೊಂಡರು.
ಅಂತಿಮ ಸೂಪರ್ ಸಿಕ್ಸ್ ಪಂದ್ಯದಲ್ಲಿ, ಪಾರ್ಶವಿ ಶ್ರೀಲಂಕಾಕ್ಕೆ ಅಪಾಯಕಾರಿ ಬೌಲರ್ ಎಂದು ಸಾಬೀತುಪಡಿಸಿದರು. 5ರನ್ ಗೆ 4 ಕಬಳಿಸಿದ್ದರು. ಇನ್ನೊಂದೆಡೆ ನ್ಯೂಜಿಲೆಂಡ್ ವಿರುದ್ಧದ ಸೆಮಿ-ಫೈನಲ್ ಗೆಲುವಿನಲ್ಲಿ 20 ರನ್ ನೀಡಿ 3 ವಿಕೆಟ್ ಉರುಳಿಸಿದರೆ, ಫೈನಲ್‌ನಲ್ಲಿ 13 ರನ್ ಗೆ 2 ವಿಕೆಟ್ ಪಡೆದಿದ್ದಾರೆ. ಇದರಲ್ಲಿ ಇಂಗ್ಲೆಂಡ್‌ನ ಅಗ್ರ ಸ್ಕೋರರ್ ರಯಾನ್ ಮೆಕ್‌ಡೊನಾಲ್ಡ್-ಗೇ ವಿಕೆಟ್ ಸಹ ಇವರೇ ಕಬಳಿಸಿದ್ದರು.
ಇದನ್ನೂ ಓದಿ: Health Tips: ಪಪ್ಪಾಯಿಯನ್ನು ಈ ರೀತಿ ತಿನ್ನಿ, ಹೊಟ್ಟೆಯ ಕೊಬ್ಬು ಒಂದು ವಾರದಲ್ಲಿ 100% ಕಡಿಮೆಯಾಗುತ್ತದೆ!
ಐಸಿಸಿ ಅಂಡರ್-19 ಮಹಿಳಾ ಟಿ20 ವಿಶ್ವ ಟೂರ್ನಿಯ ತಂಡ:
ಶ್ವೇತಾ ಸೆಹ್ರಾವತ್ (ಭಾರತ), ಗ್ರೇಸ್ ಸ್ಕ್ರಿವೆನ್ಸ್ (ಇಂಗ್ಲೆಂಡ್, ನಾಯಕಿ), ಶಫಾಲಿ ವರ್ಮಾ (ಭಾರತ), ಜಾರ್ಜಿಯಾ ಪ್ಲಿಮ್ಮರ್ (ನ್ಯೂಜಿಲೆಂಡ್), ದೇವ್ಮಿ ವಿಹಂಗಾ (ಶ್ರೀಲಂಕಾ), ಶೋರ್ನಾ ಅಕ್ಟರ್ (ಬಾಂಗ್ಲಾದೇಶ ), ಕರಾಬೊ ಮೆಸೊ (ದಕ್ಷಿಣ ಆಫ್ರಿಕಾ), ಪಾರ್ಶವಿ ಚೋಪ್ರಾ (ಭಾರತ), ಹನ್ನಾ ಬೇಕರ್ (ಇಂಗ್ಲೆಂಡ್), ಎಲ್ಲೀ ಆಂಡರ್ಸನ್ (ಇಂಗ್ಲೆಂಡ್), ಮ್ಯಾಗಿ ಕ್ಲಾರ್ಕ್ (ಆಸ್ಟ್ರೇಲಿಯಾ).
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.