ನವದೆಹಲಿ: ಆಗಸ್ಟ್ 18 ರಿಂದ ಭಾರತ-ಜಿಂಬಾಬ್ವೆ ನಡುವೆ ಏಕದಿನ ಸರಣಿ ಶುರುವಾಗಲಿದೆ. 3 ಪಂದ್ಯಗಳ ಏಕದಿನ ಸರಣಿ ಆರಂಭಕ್ಕೂ ಮುನ್ನವೇ ಗಾಯಗೊಂಡಿರುವ ವಾಷಿಂಗ್ಟನ್ ಸುಂದರ್ ತಂಡದಿಂದ ಹೊರಬಿದ್ದಿದ್ದಾರೆ. ಸುಂದರ್ ಬದಲಿಗೆ ಯುವ ಆಲ್ರೌಂಡರ್, ಆರ್ಸಿಬಿ ಆಟಗಾರ ಶಹಬಾಜ್ ಅಹ್ಮದ್ಗೆ ಅವಕಾಶ ನೀಡಲಾಗಿದೆ.
ಈ ಬಗ್ಗೆ ಮಂಗಳವಾರ ಟ್ವೀಟ್ ಮೂಲಕ ಬಿಸಿಸಿಐ ಮಾಹಿತಿ ಹಂಚಿಕೊಂಡಿದೆ. ವಾಷಿಂಗ್ಟನ್ ಸುಂದರ್ ಭುಜದ ಗಾಯದ ಕಾರಣ ತಂಡದಿಂದ ಹೊರಗುಳಿಯಲಿದ್ದಾರೆ. ಇವರ ಬದಲಿಗೆ ಯುವ ಆಟಗಾರನಿಗೆ ಆಯ್ಕೆ ಸಮಿತಿ ಮಣೆಹಾಕಿದ್ದು, ಆರ್ಸಿಬಿ ಪರ ಆಡುತ್ತಿರುವ ಬಂಗಾಳ ಮೂಲದ ಶಹಬಾಜ್ಗೆ ಆಡುವ ಅದೃಷ್ಟ ದೊರೆತಿದೆ.
ಇದನ್ನೂ ಓದಿ: ಎದುರಾಳಿಗೆ ಈ ಆಟಗಾರನ ಕಂಡರೆ ಭಯ: ಜಿಂಬಾಬ್ವೆ ಪ್ರವಾಸಕ್ಕೆ ಸಿದ್ಧನಾದ ಸೂಪರ್ ಪ್ಲೇಯರ್!
ಈಗಾಗಲೇ ಟೀಂ ಇಂಡಿಯಾ ಜಿಂಬಾಬ್ವೆ ತಲುಪಿದೆ. ಕೆಎಲ್ ರಾಹುಲ್ ನಾಯತ್ವದ ಭಾರತೀಯ ತಂಡ ಏಕದಿನ ಸರಣಿ ಆಡಲು ಸಂಪೂರ್ಣ ಸಜ್ಜಾಗಿದೆ. ಶಹಬಾಜ್ ಅಹ್ಮದ್ ಪ್ರಥಮ ದರ್ಜೆ ಮತ್ತು ಲೀಸ್ಟ್ A ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಕಳೆದ ಐಪಿಎಲ್ ಋತುವಿನಲ್ಲಿ ಆರ್ಸಿಬಿ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರಿದ್ದರು. ಬೆಂಗಳೂರು ಪರ 29 ಪಂದ್ಯಗಳನ್ನಾಡಿರುವ ಶಹಬಾಜ್ 13 ವಿಕೆಟ್ ಪಡೆದುಕೊಂಡಿದ್ದಾರೆ. ವಿಶೇಷವೆಂದರೆ 27 ವರ್ಷದ ಶಹಬಾಜ್ ಇದೇ ಮೊದಲ ಬಾರಿಗೆ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಾರೆ.
UPDATE - Shahbaz Ahmed replaces injured Washington Sundar for Zimbabwe series.
More details here - https://t.co/Iw3yuLeBYy #ZIMvIND
— BCCI (@BCCI) August 16, 2022
IND vs ZIM ಏಕದಿನ ಸರಣಿಯ ವೇಳಾಪಟ್ಟಿ:
ಭಾರತ-ಜಿಂಬಾಬ್ವೆ ನಡುವಿನ ಮೊದಲ ಏಕದಿನ ಪಂದ್ಯ ಆಗಸ್ಟ್ 18ರಂದು, 2ನೇ ಪಂದ್ಯ ಆಗಸ್ಟ್ 20ರಂದು ಮತ್ತು 3ನೇ ಏಕದಿನ ಪಂದ್ಯ ಆಗಸ್ಟ್ 22 ರಂದು ನಡೆಯಲಿದೆ. ಈ ಎಲ್ಲಾ ಪಂದ್ಯಗಳು ಹರಾರೆ ಸ್ಪೋರ್ಟ್ ಕ್ಲಬ್ ಮೈದಾನದಲ್ಲಿ ನಡೆಯಲಿವೆ.
ಇದನ್ನೂ ಓದಿ: Asia Cup: ಏಷ್ಯಾಕಪ್ ಆಡಲು ಈ ಇಬ್ಬರು ಆಟಗಾರರ ನಡುವೆ ಪೈಪೋಟಿ: ಯಾರಾಗ್ತಾರೆ ಇನ್?
ಜಿಂಬಾಬ್ವೆ ಪ್ರವಾಸಕ್ಕೆ ಟೀಂ ಇಂಡಿಯಾ ತಂಡ
ಕೆ.ಎಲ್.ರಾಹುಲ್ (ನಾಯಕ), ಶಿಖರ್ ಧವನ್ (ಉಪನಾಯಕ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ದೀಪಕ್ ಚಹಾರ್ ಮತ್ತು ಶಹಬಾಜ್ ಅಹ್ಮದ್.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.