ವೆಸ್ಟ್ ಇಂಡೀಸ್ ಪ್ರವಾಸ: ಭಾರತ ತಂಡದ ಪಟ್ಟಿ ಪ್ರಕಟ, ಮನೀಶ್ ಪಾಂಡೆಗೆ ಸ್ಥಾನ

ಆಗಸ್ಟ್ 3 ರಿಂದ ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ ಟೆಸ್ಟ್, ಏಕದಿನ ಮತ್ತು ಟಿ 20 ಐ ಸರಣಿಯಲ್ಲಿ ವಿರಾಟ್ ಕೊಹ್ಲಿ ಭಾರತದ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಬಿಸಿಸಿಐ ಭಾನುವಾರ ಪ್ರಕಟಿಸಿದೆ. 

Last Updated : Jul 21, 2019, 04:19 PM IST
ವೆಸ್ಟ್ ಇಂಡೀಸ್ ಪ್ರವಾಸ: ಭಾರತ ತಂಡದ ಪಟ್ಟಿ ಪ್ರಕಟ, ಮನೀಶ್ ಪಾಂಡೆಗೆ ಸ್ಥಾನ  title=
file photo

ನವದೆಹಲಿ: ಆಗಸ್ಟ್ 3 ರಿಂದ ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ ಟೆಸ್ಟ್, ಏಕದಿನ ಮತ್ತು ಟಿ 20 ಐ ಸರಣಿಯಲ್ಲಿ ವಿರಾಟ್ ಕೊಹ್ಲಿ ಭಾರತದ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಬಿಸಿಸಿಐ ಭಾನುವಾರ ಪ್ರಕಟಿಸಿದೆ. 

ಎಂಎಸ್ ಧೋನಿ ಪ್ರವಾಸಕ್ಕೆ ಲಭ್ಯವಿಲ್ಲದ ನಂತರ ರಿಷಭ್ ಪಂತ್ ಅವರನ್ನು ಸೀಮಿತ ಓವರ್ ತಂಡಗಳಲ್ಲಿ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡಲಾಗಿದೆ.ಮನೀಶ್ ಪಾಂಡೆ, ಶ್ರೇಯಸ್ ಅಯ್ಯರ್ ಅವರು ಭಾರತ ಎ ಪರ ಅದ್ಭುತ ರನ್ ಗಳಿಸಿದ ನಂತರ ತಂಡಕ್ಕೆ ಸೇರಿಸಿಕೊಳ್ಳಲಾಗಿದ್ದು,  ಇನ್ನು ವಿಶ್ವಕಪ್ ಸಂದರ್ಭದಲ್ಲಿ ಗಾಯದಿಂದ ಬಳಲುತ್ತಿರುವ ಶಿಖರ್ ಧವನ್  ಈಗ ಏಕದಿನ ಮತ್ತು ಟಿ 20 ಐ ತಂಡಗಳಿಗೆ ಮರಳಿದ್ದಾರೆ.

ಟಿ 20 ತಂಡ: ವಿರಾಟ್ ಕೊಹ್ಲಿ (ನಾಯಕ ), ರೋಹಿತ್ ಶರ್ಮಾ (ಉಪನಾಯಕ ), ಶಿಖರ್ ಧವನ್, ಕೆಎಲ್ ರಾಹುಲ್, ಶ್ರೇಯಾಸ್ ಅಯ್ಯರ್, ಮನೀಶ್ ಪಾಂಡೆ, ರಿಷಭ್ ಪಂತ್ (ವಿಕೆಟ್ ಕೀಪರ್), ಕ್ರುನಾಲ್ ಪಾಂಡ್ಯ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ರಾಹುಲ್ ಚಹರ್, ಭುವ್ 20, ಖಲೀಲ್ ಅಹ್ಮದ್, ದೀಪಕ್ ಚಹರ್, ನವದೀಪ್ ಸೈನಿ.

ಏಕದಿನ ಕ್ರಿಕೆಟ್ ತಂಡ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ ), ಶಿಖರ್ ಧವನ್, ಕೆ.ಎಲ್ ರಾಹುಲ್ , ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್, ನವದೀಪ್ ಸೈನಿ,ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ,ರವಿಂದ್ರ ಜಡೇಜಾ, ಯಜುವೆಂದ್ರ ಚಹಾಲ್, ಕೇದಾರ್ ಜಾಧವ್, ಮೊಹಮ್ಮದ್ ಶಮಿ.

ಟೆಸ್ಟ್ ತಂಡ: ವಿರಾಟ್ ಕೊಹ್ಲಿ (ನಾಯಕ ), ಅಜಿಂಕ್ಯ ರಹಾನೆ (ಉಪನಾಯಕ ), ಮಾಯಾಂಕ್ ಅಗರ್ವಾಲ್, ಕೆಎಲ್ ರಾಹುಲ್, ಸಿ ಪೂಜಾರ, ಹನುಮಾ ವಿಹಾರಿ, ರೋಹಿತ್ ಶರ್ಮಾ, ರಿಷಭ್ ಪಂತ್ (ವಿಕೆಟ್ ಕೀಪರ್) ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್ ), ಆರ್ ಅಶ್ವಿನ್, ರವೀಂದ್ರ ಜಡೇಜಾ ಕುಲದೀಪ್ ಯಾದವ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಉಮೇಶ್ ಯಾದವ್

Trending News