ನವದೆಹಲಿ: ವಿಶ್ವದ ನಾಲ್ಕನೇ ಶ್ರೇಯಾಂಕದ ಆಟಗಾರ್ತಿ ಕರೋಲಿನಾ ಮರೀನ್ ಆಟದ ಮಧ್ಯದಲ್ಲಿ ಗಾಯಗೊಂಡು ನಿವೃತ್ತಿಯಾದ ಪರಿಣಾಮ ಸೈನಾ ನೆಹ್ವಾಲ್ ರನ್ನು ಇಂಡೋನೇಷ್ಯಾ ಮಾಸ್ಟರ್ಸ್ ನ ಚಾಂಪಿಯನ್ ಎಂದು ಘೋಷಣೆ ಮಾಡಲಾಯಿತು.
🏸🇮🇳 Congratulations to @NSaina on winning the women's singles title at the Indonesia Masters.
Hard luck, @CarolinaMarin ! Get well soon! 🤗🤗#saina #sainanehwal #carolinamarin #IndonesiaMastersSuper500 #IndonesiaMasters #IndonesiaMasters2019 #teamindia #Badminton #Sportwalk pic.twitter.com/qLB6b97h32
— Badminton Sportwalk 🏸 (@badmintonbySW) January 27, 2019
ಮರೀನ್ ಗಾಯಗೊಳ್ಳುವ ಮೊದಲು 10-4 ರ ಅಂತರದಿಂದ ಮುನ್ನಡೆಯನ್ನು ಸಾಧಿಸಿದ್ದರು.ಮೊದಲ ಸುತ್ತಿನಲ್ಲಿ ಮರೀನ್ ಅವರ ಒಡೆತಗಳಿಗೆ ಉತ್ತರಕೊಡುವಲ್ಲಿ ಸೈನಾ ಹಿಂದೆ ಬಿದ್ದಿದ್ದರು. ಸೆಮಿಫೈನಲ್ ಪಂದ್ಯದಲ್ಲಿ ಸೈನಾ ಅವರು ಚೀನಾದ ಆಟಗಾರ್ತಿ ಹೇ ಬಿಂಗ್ ಜಿಯಾವೋ ಅವರನ್ನು 18-21,21-12,21-18 ರ ಅಂತರದಲ್ಲಿ ಸೋಲಿಸಿ ಅಂತಿಮ ಘಟ್ಟ ತಲುಪಿದ್ದರು.
ಇದಕ್ಕೂ ಮುಂಚೆ ಸೈನಾ ನೆಹ್ವಾಲ್ ಮಲೇಶಿಯಾ ಮಾಸ್ಟರ್ಸ್ ಟೂರ್ನಿಯಲ್ಲಿ ಮರೀನ್ ವಿರುದ್ದ ಸೆಮಿಫೈನಲ್ ನಲ್ಲಿ ಸೋಲನ್ನು ಅನುಭವಿಸಿದ್ದರು.