ನವದೆಹಲಿ: ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2020 ರ 39 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಯನ್ನು ಎಂಟು ವಿಕೆಟ್ಗಳಿಂದ ಸೋಲಿಸಿತು.
#RCB are now ranked second in the Points Table after Match 39 of #Dream11IPL. pic.twitter.com/NjcahaOVZf
— IndianPremierLeague (@IPL) October 21, 2020
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಕೋಲ್ಕತ್ತಾ ತಂಡವು 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 84 ರನ್ ಗಳ ಗುರಿಯನ್ನು ನೀಡಿತು. ನಾಯಕ ಮೋರ್ಗನ್ ಗಳಿಸಿದ 30 ರನ್ ಕೋಲ್ಕತ್ತಾ ಪರವಾಗಿ ಗರಿಷ್ಟ ವ್ಯಯಕ್ತಿಕ ಮೊತ್ತವಾಗಿತ್ತು.
IPL 2020: ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಮೊಹಮ್ಮದ್ ಸಿರಾಜ್...!
That's a BIG WIN for #RCB here in Abu Dhabi as they beat #KKR by 8 wickets.#Dream11IPL pic.twitter.com/qgNXRFpzYE
— IndianPremierLeague (@IPL) October 21, 2020
ಬೆಂಗಳೂರಿನ ಪರವಾಗಿ ಮಾರಕ ಬೌಲಿಂಗ್ ದಾಳಿ ನಡೆದಿದ ಸಿರಾಜ್ ಮೊಹಮ್ಮದ್ (4-2-8-3) ಐಪಿಎಲ್ ಇತಿಹಾಸದಲ್ಲಿ ಸತತವಾಗಿ ಎರಡು ಓವರ್ ಗಳನ್ನು ಮೇಡನ್ ಮಾಡುವ ಮೂಲಕ ನೂತನ ದಾಖಲೆಯನ್ನು ಬರೆದರು.ಇನ್ನೊಂದೆಡೆಗೆ ಚಹಾಲ್ (4-0-15-2) ಕೂಡ ಮಾರಕ ದಾಳಿ ನಡೆಸಿ ಕೊಲ್ಕತ್ತಾದ ಬ್ಯಾಟಿಂಗ್ ಬೆನ್ನೆಲುಬು ಮುರಿದರು.
ಯುನಿವರ್ಸ್ ಬಾಸ್ ರನ್ನು ಔಟ್ ಮಾಡುವ ಮೊದಲು ಅವರ ಕಾಲುಗಳನ್ನು ಕಟ್ಟಿ ಹಾಕಬೇಕು- ಆರ್.ಅಶ್ವಿನ್
Dear @KKRiders....#PlayBold #IPL2020 #WeAreChallengers #Dream11IPL #KKRvRCB pic.twitter.com/AacL1JxSuO
— Royal Challengers Bangalore (@RCBTweets) October 21, 2020
85 ರನ್ ಗಳ ಸಾಧಾರಣ ಗೆಲುವಿನ ಗುರಿಯನ್ನು ಬೆನ್ನತ್ತಿದ ಬೆಂಗಳೂರು ತಂಡವು13.3 ಓವರ್ ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 85 ರನ್ ಗಳಿಸಿ ಜಯ ಸಾಧಿಸಿತು.