ನವದೆಹಲಿ: ಐಪಿಎಲ್(IPL 2022) ಚುಟುಕು ಪಂದ್ಯಾವಳಿಯನ್ನು ದೇಶದಲ್ಲಿ ಹಬ್ಬದಂತೆ ಆಚರಿಸಲಾಗುತ್ತದೆ. ಭಾರತದಲ್ಲಿ ಕ್ರಿಕೆಟ್ ಅನ್ನು ಧರ್ಮವೆಂದು ಪರಿಗಣಿಸಲಾಗಿದೆ. ಇದಕ್ಕಾಗಿಯೇ ಎಲ್ಲಾ ಅಭಿಮಾನಿಗಳು 2022ರ ಐಪಿಎಲ್ ಟೂರ್ನಿಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಮಾರ್ಚ್ 26ರಿಂದ 15ನೇ ಆವೃತ್ತಿಯ ಐಪಿಎಲ್ ಟೂರ್ನಿ ಪ್ರಾರಂಭವಾಗುತ್ತಿದೆ. ಎಲ್ಲಾ ಫ್ರಾಂಚೈಸಿಗಳು ತಮ್ಮ ತಂತ್ರಕ್ಕೆ ಅನುಗುಣವಾಗಿ ತಂಡಗಳನ್ನು ಸಿದ್ಧಪಡಿಸಿವೆ. ಐಪಿಎಲ್ ಮೆಗಾ ಹರಾಜಿನಲ್ಲಿ ಹಲವು ಆಟಗಾರರಿಗೆ ಲಾಟರಿ ಹೊಡೆದಿದೆ.
ಈ ಋತುವಿನಲ್ಲಿ ಅನೇಕ ಸ್ಟಾರ್ ಆಟಗಾರರನ್ನು ಫ್ರಾಂಚೈಸಿಗಳು ಖರೀದಿಸಲು ಮನಸ್ಸು ಮಾಡಿಲ್ಲ. ಮೆಗಾ ಹರಾಜಿನ ಬಳಿಕ 3 ಐಪಿಎಲ್(IPL Team) ತಂಡಗಳು ಪ್ರಶಸ್ತಿ ಗೆಲ್ಲುವ ಫೆವರಿಟ್ ಎನಿಸಿಕೊಂಡಿವೆ. ಈ ತಂಡಗಳಲ್ಲಿ ಅತ್ಯುತ್ತಮ ಆರಂಭಿಕ ಆಟಗಾರರಿದ್ದಾರೆ. ಈ ಆಟಗಾರರ ಹೆಸರುಗಳು ಎದುರಾಳಿ ತಂಡಗಳಲ್ಲಿ ಭಯ ಹುಟ್ಟಿಸಿದೆ.
ಇದನ್ನೂ ಓದಿ: IPL 2022: ದೆಹಲಿ ಕ್ಯಾಪಿಟಲ್ಸ್ ಬಸ್ ಮೇಲೆ ದಾಳಿ! ದಾಳಿಕೋರರನ್ನು ಬಂಧಿಸಿದ ಪೊಲೀಸರು
1. ಡೆಲ್ಲಿ ಓಪನರ್ ಆಗಿ ಆಸೀಸ್ ಆಟಗಾರ
2022ರ ಐಪಿಎಲ್ ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆಸ್ಟ್ರೇಲಿಯಾದ ಬಲಿಷ್ಠ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರನ್ನು ಖರೀದಿಸಿದೆ. ವಾರ್ನರ್(David Warner)ಯಾವಾಗಲೂ ಆಕ್ರಮಣಕಾರಿ ಇನ್ನಿಂಗ್ಸ್ಗೆ ಹೆಸರುವಾಸಿಯಾಗಿದ್ದಾರೆ. ಬ್ಯಾಟಿಂಗ್ ಲಯದಲ್ಲಿದ್ದಾಗ ವಾರ್ನರ್ ಯಾವುದೇ ಬೌಲರ್ ಇರಲಿ ದಂಡಿಸದೆ ಬಿಡುವುದಿಲ್ಲ. ಇವರು ಐಪಿಎಲ್ನಲ್ಲಿ ಸಾಕಷ್ಟು ರನ್ ಗಳಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಈಗಾಗಲೇ ಪೃಥ್ವಿ ಶಾ ರೂಪದಲ್ಲಿ ಪ್ರಬಲ ಆರಂಭಿಕರನ್ನು ಹೊಂದಿದೆ. ಶಾ ತುಂಬಾ ಅಪಾಯಕಾರಿ ಬ್ಯಾಟಿಂಗ್ ಗೆ ಹೆಸರುವಾಸಿಯಾಗಿದ್ದಾರೆ. ಹೀಗಾಗಿ ಶಾ ಜೊತೆಗೆ ಡೇವಿಡ್ ವಾರ್ನರ್ ಡೆಲ್ಲಿ ಪರ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ಕಳೆದ ಋತುವಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇ ಆಫ್ಗೆ ಪ್ರವೇಶಿಸಿತ್ತು.
2. ಲಕ್ನೋಗೆ ಸಿಕ್ಕಿದೆ ಸೂಪರ್ ಸ್ಟಾರ್ ಆರಂಭಿಕ ಜೋಡಿ
ಈ ಬಾರಿಯ ಐಪಿಎಲ್ ಟೂರ್ನಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡವು ಹೊಸದಾಗಿ ಸೇರಿಕೊಂಡಿದೆ. ಐಪಿಎಲ್ ಮೆಗಾ ಹರಾಜಿನಲ್ಲಿ ಲಕ್ನೋ ಫ್ರಾಂಚೈಸಿ ಕೆಲವು ಅತ್ಯುತ್ತಮ ಆಟಗಾರರನ್ನು ಖರೀದಿಸಿದೆ. ಲಕ್ನೋ ತನ್ನ ಪಾಳೆಯದಲ್ಲಿ ದಕ್ಷಿಣ ಆಫ್ರಿಕಾದ ಸ್ಟಾರ್ ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್(Quinton De Kock) ಹೊಂದಿದೆ. ಲಕ್ನೋ ತನ್ನ ತಂಡದ ನಾಯಕನ್ನಾಗಿ ಕನ್ನಡಿಗ ಕೆ.ಎಲ್.ರಾಹುಲ್(KL Rahul) ರನ್ನು ಖರೀಸಿದೆ. ಹೀಗಾಗಿ ಡಿ ಕಾಕ್ ಜೊತೆಗೆ ಕೆ.ಎಲ್.ರಾಹುಲ್ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ಲಕ್ನೋ ಚೊಚ್ಚಲ ಐಪಿಎಲ್ ಟ್ರೋಫಿ ಮೇಲೆ ಕಣ್ಣಿಟ್ಟಿದ್ದು, ಭರವಸೆಯ ಯುವ ಆಟಗಾರರನ್ನು ಹೊಂದಿದೆ.
ಇದನ್ನೂ ಓದಿ: Kohli Mumbai House : ₹34 ಕೋಟಿ ಮೌಲ್ಯದ ಕೊಹ್ಲಿ - ಅನುಷ್ಕಾ ಮುಂಬೈನ ಅದ್ದೂರಿ ಮನೆ ಹೇಗಿದೆ ನೋಡಿ
3. 5ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಬಲಿಷ್ಠ CSK
ಕಳೆದ ಋತುವಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಮತ್ತೊಮ್ಮೆ ಐಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು. ಚೆನ್ನೈ ಪ್ರಶಸ್ತಿ ಗೆಲ್ಲುವಲ್ಲಿ ಫಾಫ್ ಡು ಪ್ಲೆಸಿಸ್ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಡು ಪ್ಲೆಸಿಸ್ ರನ್ನು RCB ತಂಡವು ಖರೀದಿಸಿದ್ದು ನಾಯಕನ ಜವಾಬ್ದಾರಿ ನೀಡಿದೆ. ಅವರ ಸ್ಥಾನಕ್ಕೆ ಚೆನ್ನೈ ನ್ಯೂಜಿಲೆಂಡ್ನ ಡೆವೊನ್ ಕಾನ್ವೆ(Devon Conway) ಅವರನ್ನು ಸೇರಿಸಿಕೊಂಡಿದೆ.
ಸ್ಫೋಟಕ ಆಟಗಾರ ಋತುರಾಜ್ ಗಾಯಕ್ವಾಡ್(Ruturaj Gaikwad) ಅವರೊಂದಿಗೆ ಡೆವೊನ್ ಕಾನ್ವೆ ಅವರು ಆರಂಭಿಕರಾಗಿ ಕಣಕ್ಕಳಿಯಲಿದ್ದಾರೆ ಎಂದು ಹೇಳಲಾಗಿದೆ. ಋತುರಾಜ್ ಕಳೆದ ಋತುವಿನಲ್ಲಿ ಸಿಎಸ್ಕೆ ಪರ ಅತಿಹೆಚ್ಚು ರನ್ ಗಳಿಸಿ ಆರೆಂಜ್ ಕ್ಯಾಪ್ ಗೆದ್ದಿದ್ದರು. ಈಗಾಗಲೇ 4 ಐಪಿಎಲ್ ಪ್ರಶಸ್ತಿ ಗೆದ್ದಿರುವ ಸಿಎಸ್ಕೆ ತಂಡ 5ನೇ ಟ್ರೋಫಿ ಗೆಲ್ಲುವ ನಿರೀಕ್ಷೆಯಲ್ಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.