Longest Six of IPL 2023: ಐಪಿಎಲ್ 2023 ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 15 ನೇ ಪಂದ್ಯದಲ್ಲಿ, ಲಕ್ನೋ ನಾಯಕ ಕೆಎಲ್ ರಾಹುಲ್ ಟಾಸ್ ಗೆದ್ದು ಆರ್ಸಿಬಿಯನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಆರ್‌ಸಿಬಿ ಬ್ಯಾಟಿಂಗ್ ವೇಳೆ 38 ವರ್ಷದ ಬ್ಯಾಟ್ಸ್‌ಮನ್ ಗಗನಚುಂಬಿ ಸಿಕ್ಸರ್ ಬಾರಿಸಿ ಡಗೌಟ್‌ನಲ್ಲಿ ಕುಳಿತಿದ್ದ ವಿರಾಟ್ ಕೊಹ್ಲಿ ಕೂಡ ಅಚ್ಚರಿ ಮೂಡಿಸಿದ್ದರು. ಐಪಿಎಲ್ ಇತಿಹಾಸದಲ್ಲಿ ಅತಿ ಉದ್ದದ ಸಿಕ್ಸರ್‌ಗಳಲ್ಲಿ ಒಂದಾಗಿದೆ.
ಇದನ್ನೂ ಓದಿ: BCCI: ಬಿಸಿಸಿಐ ಮಹತ್ವದ ಘೋಷಣೆ: 2023-24ರ ಭಾರತೀಯ ಕ್ರಿಕೆಟ್ ವೇಳಾಪಟ್ಟಿ ಬಿಡುಗಡೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಮತ್ತು ಆರಂಭಿಕ ಬ್ಯಾಟ್ಸ್‌ಮನ್ ಫಾಫ್ ಡು ಪ್ಲೆಸಿಸ್ ಈ ಐಪಿಎಲ್ ಸೀಸನ್’ನಲ್ಲಿ ಅತಿ ಉದ್ದದ ಸಿಕ್ಸರ್ ಬಾರಿಸಿದ್ದಾರೆ. ರವಿ ಬಿಷ್ಣೋಯ್ ಎಸೆತದಲ್ಲಿ 115 ಮೀಟರ್ ಉದ್ದದ ಸಿಕ್ಸರ್ ಬಾರಿಸಿ ಚೆಂಡನ್ನು ಸ್ಟೇಡಿಯಂನಿಂದ ಹೊರಗೆಸೆದರು. ಅವರ ಈ ಶಾಟ್ ನೋಡಿ ಜೊತೆಯಾಗಿ ಬ್ಯಾಟಿಂಗ್ ಮಾಡುತ್ತಿದ್ದ ಗ್ಲೆನ್ ಮ್ಯಾಕ್ಸ್ ವೆಲ್ ಕೂಡ ದಂಗುಬಡಿದಿದ್ದರು. ಅಷ್ಟೇ ಅಲ್ಲ ಡಗೌಟ್’ನಲ್ಲಿ ಕುಳಿತಿದ್ದ ವಿರಾಟ್ ಕೊಹ್ಲಿಗೂ ಒಮ್ಮೆ ನಂಬಲಾಗಲಿಲ್ಲ. ಫಾಫ್ 79 ‘ ಅಜೇಯ ಇನ್ನಿಂಗ್ಸ್ ಆಡಿದರು. ಅವರ ಇನ್ನಿಂಗ್ಸ್’ನಲ್ಲಿ 5 ಬೌಂಡರಿ ಮತ್ತು 5 ಸಿಕ್ಸರ್‌ಗಳು ಸೇರಿದ್ದವು.
ಓಪನಿಂಗ್ ಗೆ ಬಂದ ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಅಮೋಘ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಆದರೆ, ವಿರಾಟ್ 61 ರನ್ ಗಳಿಸಿದ್ದಾಗ ಅಮಿತ್ ಮಿಶ್ರಾ ಎಸೆತದಲ್ಲಿ ಕ್ಯಾಚಿತ್ತು ಔಟಾದರು. ಆದರೆ ತಂಡದ ನಾಯಕ ಪ್ಲೆಸಿ ಇಲ್ಲಿಗೆ ನಿಲ್ಲಲಿಲ್ಲ. ವಿರಾಟ್ ಔಟಾದ ತಕ್ಷಣ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್’ಗೆ ಬಂದ ಗ್ಲೆನ್ ಮ್ಯಾಕ್ಸ್ ವೆಲ್, ಫಾಫ್ ಡು ಪ್ಲೆಸಿಸ್ ಜತೆಗೂಡಿ ಸಿಕ್ಸರ್’ಗಳ ಮಳೆಗರೆದರು. ಕೊನೆಯ ಕೆಲವು ಓವರ್’ಗಳಲ್ಲಿ ಒಂದರ ಹಿಂದೆ ಒಂದರಂತೆ ಸಿಕ್ಸರ್‌ಗಳನ್ನು ಬಾರಿಸಿದರು. ಮ್ಯಾಕ್ಸ್‌ವೆಲ್ 29 ಎಸೆತಗಳಲ್ಲಿ 59 ರನ್ ಗಳಿಸಿದರು. ಮ್ಯಾಕ್ಸ್‌ವೆಲ್ 3 ಬೌಂಡರಿ ಹಾಗೂ 6 ಭರ್ಜರಿ ಸಿಕ್ಸರ್‌ಗಳನ್ನು ಬಾರಿಸಿದರು.
ಇದನ್ನೂ ಓದಿ: ಆರ್ ಸಿ ಬಿ ಗೆ ಮುಳುವಾಗ್ತಾರಂತೆ ಕೆ.ಎಲ್.ರಾಹುಲ್! ...ಹೀಗ್ ಹೇಳಿದ್ದು ಯಾರು ಗೊತ್ತಾ?
ಕೊಹ್ಲಿಯ ಅದ್ಭುತ ಇನ್ನಿಂಗ್ಸ್:
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಕೊಹ್ಲಿ 44 ಎಸೆತಗಳಲ್ಲಿ 61 ರನ್ ಗಳಿಸಿದರು. ಈ ಬಾರಿಯ ಐಪಿಎಲ್’ನಲ್ಲಿ ಇದು ಅವರ ಎರಡನೇ ಅರ್ಧಶತಕವಾಗಿದೆ. ಈ ಇನ್ನಿಂಗ್ಸ್’ನಲ್ಲಿ ಕೊಹ್ಲಿ 4 ಬೌಂಡರಿ ಮತ್ತು 4 ಸಿಕ್ಸರ್’ಗಳನ್ನು ಬಾರಿಸಿದರು. ಆದರೆ, ಅಮಿತ್ ಮಿಶ್ರಾ ಎಸೆತದಲ್ಲಿ ಸ್ಟೊಯಿನಿಸ್‌ಗೆ ಕ್ಯಾಚಿತ್ತು ಔಟಾದರು. ಈ ಋತುವಿನ ಮೊದಲ ಪಂದ್ಯದಿಂದಲೂ ಕೊಹ್ಲಿ ಉತ್ತಮ ಫಾರ್ಮ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧದ ತಂಡದ ಮೊದಲ ಪಂದ್ಯದಲ್ಲಿ ಅವರು 82 ರನ್‌ಗಳ ಅಜೇಯ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.