ನವದೆಹಲಿ: ಇಂಗ್ಲೆಂಡ್ ತಂಡ ಬ್ಯಾಟ್ಸ್ ಮನ್ ಕೆವಿನ್ ಪೀಟರ್ಸನ್ ಶನಿವಾರದಂದು ಅಧಿಕೃತವಾಗಿ ಎಲ್ಲ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ಸಾಮಾಜಿಕ ಜಾಲತಾಣವಾದ Instagramನಲ್ಲಿ ತಮ್ಮ ಕ್ರಿಕೆಟ್ ವಿಧಾಯದ ಕುರಿತಾದ ಪೋಸ್ಟ್ ನಲ್ಲಿ ಈ ಸಂಗತಿಯನ್ನು ಧೃಡಪಡಿಸಿದ್ದಾರೆ.
"ನನಗೆ ಯಾರೋ ಒಬ್ಬರು ಟ್ವೀಟ್ ಮಾಡಿ ಕ್ರಿಕೆಟ್ ಕರಿಯರ್ ನಲ್ಲಿ ನಾನು 30 ಸಾವಿರಕ್ಕೂ ಅಧಿಕ ರನ್ ಗಳನ್ನು ಗಳಿಸಿದ್ದೇನೆ ಎಂದು ಹೇಳಲಾಗಿದೆ, ಅದರಲ್ಲಿ 152 ಅರ್ಧಶತಕಗಳು 68 ಶತಕಗಳು ಸೇರಿವೆ. ನಾಲ್ಕು ಆಶಿಸ್ ಟ್ರೋಪಿ, ಟಿ 20 ವಿಶ್ವಕಪ್ ಗೆಲುವು, ಭಾರತವನ್ನು ಅದರ ನೆಲದಲ್ಲಿಯೇ ಸೋಲಿಸಿದ್ದು, ಬಾಂಗ್ಲಾದೇಶದಿಂದ ಹೊರತುಪಡಿಸಿ ಟೆಸ್ಟ್ ಆಡುವ ಎಲ್ಲ ದೇಶಗಳ ವಿರುದ್ದ ಶತಕಗಳಿಸಿದ್ದು. ಈ ಎಲ್ಲವು ಕೂಡಾ ನನಗೆ ಸದಾ ಬೆಂಬಲ ನೀಡಿದ ನನ್ನ ಕುಟುಂಬಕ್ಕೆ ಸಮರ್ಪಿತ! ನಾನು ಇದರ ಬಗ್ಗೆ ಹೆಮ್ಮೆಪಡುತ್ತೇನೆ! ನಿಮ್ಮ ಎಲ್ಲ ಸುಂದರವಾದ ಸಂದೇಶಗಳಿಗೆ ಧನ್ಯವಾದಗಳು! ನಾನು ನಿಮ್ಮನ್ನು ರಂಜಸಿದ್ದಕ್ಕೆಗಾಗಿ ಸಂತಸಗೊಂಡಿದ್ದೇನೆ ! ನಾನು ಈ ಆಟವನ್ನು ಪ್ರೀತಿಸುತ್ತೇನೆ !" ಎಂದು ತಮ್ಮ Instagram ಖಾತೆಯಲ್ಲಿ ಬರೆದುಕೊಂಡಿದ್ದಾರೆ.
BOOTS UP!
Thank you! 😍— Kevin Pietersen (@KP24) March 16, 2018
Well done @KP24 on an fantastic career ... Not everyone’s Cup of Tea but you will do for me ... Best Batsman I had the pleasure to play with ... 1st England batsman that put fear into the Aussies .. #WellDone
— Michael Vaughan (@MichaelVaughan) March 16, 2018
ಪಿಟೆರ್ಸನ್ ರವರ ನಿರ್ಧಾರಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಸಹ ಆಟಗಾರ ಮೈಕಲ್ ವಾನ್ "ಧನ್ಯವಾದಗಳು ನಿಮ್ಮ ಅದ್ಬುತ ಕರಿಯರ್ ಗೆ" ಎಂದು ಪಿಟೆರ್ಸನ್ ರವರ ಕ್ರಿಕೆಟ್ ಕರಿಯರ್ ನ್ನು ಕೊಂಡಾಡಿದ್ದಾರೆ.