Asia Cup 2023: ಟೀಂ ಇಂಡಿಯಾಗೆ ಎಂಟ್ರಿ ನೀಡಿದ ಸ್ಪೋಟಕ ಆಟಗಾರ ! ಪಾಕ್ ತಂಡದಲ್ಲಿ ನಡುಕ!

India vs Pakistan Super-4 : ಇದೀಗ ಸೂಪರ್-4 ಪಂದ್ಯ ಸೆಪ್ಟೆಂಬರ್ 10ರಂದು ನಡೆಯಲಿದೆ. ಭಾರತೀಯ ಕಾಲಮಾನ ಮಧ್ಯಾಹ್ನ 3 ಗಂಟೆಗೆ ಈ ಪಂದ್ಯ ಆರಂಭವಾಗಲಿದೆ.

Written by - Ranjitha R K | Last Updated : Sep 8, 2023, 11:38 AM IST
  • ಸೆಪ್ಟೆಂಬರ್ 10 ರಂದು ಭಾರತ ಮತ್ತು ಪಾಕಿಸ್ತಾನ ಮಧ್ಯೆ ಹಣಾಹಣಿ
  • ವಿಶ್ವದಾದ್ಯಂತದ ಕ್ರಿಕೆಟ್ ಅಭಿಮಾನಿಗಳಲ್ಲಿ ಹೆಚ್ಚಿದ ಕಾತುರ
  • ಭಾರತ ತಂಡಕ್ಕೆ ಸ್ಪೋಟಕ ಆಟಗಾರನ ಎಂಟ್ರಿ
Asia Cup 2023: ಟೀಂ ಇಂಡಿಯಾಗೆ ಎಂಟ್ರಿ ನೀಡಿದ ಸ್ಪೋಟಕ ಆಟಗಾರ ! ಪಾಕ್ ತಂಡದಲ್ಲಿ ನಡುಕ! title=

India vs Pakistan Super-4 : ಭಾರತ ಮತ್ತು ಪಾಕಿಸ್ತಾನ ನಡುವೆ  ಯಾವಾಗ ಪಂದ್ಯ ನಡೆದರೂ ಅಭಿಮಾನಿಗಳ ಕಾತರ ಉತ್ಸಾಹ ಉತ್ತುಂಗದಲ್ಲಿರುತ್ತದೆ. ಮುಂಬರುವ ಭಾನುವಾರ ಅಂದರೆ ಸೆಪ್ಟೆಂಬರ್ 10 ರಂದು ಭಾರತ ಮತ್ತು ಪಾಕಿಸ್ತಾನ ತಂಡಗಳು ಏಷ್ಯಾಕಪ್-2023 ರ ಸೂಪರ್-4 ಸುತ್ತಿನಲ್ಲಿ ಮುಖಾಮುಖಿಯಾಗಲಿವೆ.   ಕ್ರಿಕೆಟ್ ಪ್ರೇಮಿಗಳು ಈ ಪಂದ್ಯಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.  ಗಾಯದ ಕಾರಣದಿಂದ ದೀರ್ಘಕಾಲದವರೆಗೆ ಹೊರಗುಳಿದಿದ್ದ ಆಟಗಾರ ತಂಡಕ್ಕೆ ಮರಳಿರುವುದು ಇದೀಗ ಟೀಂ ಇಂಡಿಯಾ ಬಲ ಹೆಚ್ಚಿಸಿದೆ. 

ಸೆಪ್ಟೆಂಬರ್ 10 ರಂದು ಪಂದ್ಯ : 
ಭಾರತ-ಪಾಕಿಸ್ತಾನದ ಈ ಪಂದ್ಯಕ್ಕಾಗಿ ಭಾರತ ಮತ್ತು ಪಾಕಿಸ್ತಾನ ಮಾತ್ರವಲ್ಲದೆ, ವಿಶ್ವದಾದ್ಯಂತದ ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಎರಡು ತಂಡಗಳ ನಡುವಿನ ಹಿಂದಿನ ಪಂದ್ಯ ಮಳೆಯಿಂದಾಗಿ ರದ್ದಾಗಿರುವುದು. ಇದೀಗ ಸೂಪರ್-4 ಪಂದ್ಯ ಸೆಪ್ಟೆಂಬರ್ 10ರಂದು ನಡೆಯಲಿದೆ. ಭಾರತೀಯ ಕಾಲಮಾನ ಮಧ್ಯಾಹ್ನ 3 ಗಂಟೆಗೆ ಈ ಪಂದ್ಯ ಆರಂಭವಾಗಲಿದೆ.

ಇದನ್ನೂ ಓದಿ : World Cup: ವಿದೇಶಿ ತಂಡದಲ್ಲಿ ವಿಶ್ವಕಪ್ ಆಡಲಿದ್ದಾರೆ ಭಾರತದ ಈ ಆಟಗಾರ

ಟೀಂ ಇಂಡಿಯಾಕ್ಕೆ ಸ್ಪೋಟಕ ಆಟಗಾರನ ಪುನರಾಗಮನ : 
ಈ ಮಧ್ಯೆ, ಬಲಿಷ್ಠ ಆಟಗಾರ ಟೀಂ ಇಂಡಿಯಾಕ್ಕೆ ಮರಳಿದ್ದಾರೆ. ಕೆಎಲ್ ರಾಹುಲ್ ತಂಡವನ್ನು ಸೇರಿಕೊಂಡಿದ್ದು, ಪಾಕಿಸ್ತಾನ ವಿರುದ್ಧದ ಸೂಪರ್-4 ಸುತ್ತಿನ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಶುಭ ಸುದ್ದಿಯಾಗಿದೆ. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಗಾಯದ ಸಮಸ್ಯೆಯಿಂದಾಗಿ   ದೀರ್ಘಕಾಲದವರೆಗೆ ತಂಡದಿಂದ ಹೊರಗುಳಿದಿದ್ದರು. 

ಪ್ಲೇಯಿಂಗ್ 11 ರಲ್ಲಿ ಆಡುವ ಅವಕಾಶ : 
ಇದೀಗ ರಾಹುಲ್  ಮತ್ತೆ ತಂಡಕ್ಕೆ ಮರಳಿದ ಬಳಿಕ ನಾಯಕ ರೋಹಿತ್ ಶರ್ಮಾ, ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹಾಗೂ ಟೀಮ್ ಮ್ಯಾನೇಜ್ ಮೆಂಟ್ ಮುಂದೆ ಮತ್ತೊಂದು ಸವಾಲು ಎದುರಾಗಿದೆ. ರಾಹುಲ್ ಪ್ಲೇಯಿಂಗ್-11 ರ ಭಾಗವಾದರೆ ಯಾವ ಆಟಗಾರನನ್ನು ಕೈಬಿಡುವುದು ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ. ಟಾಪ್-3 ಬ್ಯಾಟ್ಸ್‌ಮನ್‌ಗಳಾದ ಶುಭ್‌ಮನ್ ಗಿಲ್, ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ  ಆಡುವುದು ಖಚಿತ. ಇಂತಹ ಪರಿಸ್ಥಿತಿಯಲ್ಲಿ ಇಶಾನ್ ಕಿಶನ್ ಅವರ ಫಾರ್ಮ್ ಪರಿಗಣಿಸಿ ಅವಕಾಶ ನೀಡಿದರೆ ಶ್ರೇಯಸ್ ಅಯ್ಯರ್ ಸ್ಥಾನಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ರಾಹುಲ್ 5ನೇ ಕ್ರಮಾಂಕದಲ್ಲಿ ಇಳಿದರೆ ಇಶಾನ್ ಕಿಶನ್ ಹೊರಗುಳಿಯಬೇಕಾಗುತ್ತದೆ.

ಇದನ್ನೂ ಓದಿ : ರಿಲಯನ್ಸ್ ರಿಟೇಲ್ ನ 'ಪರ್ಫಾರ್ಮ್ಯಾಕ್ಸ್' ಭಾರತೀಯ ಫುಟ್ಬಾಲ್ ತಂಡಕ್ಕೆ ಅಧಿಕೃತ ಕಿಟ್ ಪ್ರಾಯೋಜಕ

ಓಪನರ್‌ನಿಂದ 5 ನೇ ಕ್ರಮಾಂಕದವರೆಗೆ ಫಿಟ್ : 
ಕೆಎಲ್ ರಾಹುಲ್ ಅವರ ವಿಶೇಷವೆಂದರೆ ಅವರು ಓಪನಿಂಗ್‌ನಿಂದ 5 ನೇ ಕ್ರಮಾಂಕದವರೆಗೆ ಯಾವುದೇ ಸ್ಥಳದಲ್ಲಿ ಬ್ಯಾಟಿಂಗ್ ಮಾಡಬಹುದಾಗಿದೆ. ಶ್ರೇಯಸ್ ಅಯ್ಯರ್ ಅವರನ್ನು ಪ್ಲೇಯಿಂಗ್-11 ರಿಂದ ಕೈಬಿಟ್ಟರೆ ರಾಹುಲ್ 4 ನೇ ಕ್ರಮಾಂಕದಲ್ಲಿ ಫೀಲ್ಡ್ ಗೆ ಇಳಿಯಬಹುದು. ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ರಾಹುಲ್ ಇದೀಗ ಮೊದಲ ಬಾರಿಗೆ ಮೈದಾನಕ್ಕಿಳಿಯುತ್ತಿದ್ದಾರೆ. ಈ ಕಾರಣದಿಂದಾಗಿ, 3-4 ಗಂಟೆಗಳ ಕಾಲ ವಿಕೆಟ್ ಕೀಪಿಂಗ್ ಮಾಡುವುದು ಕಷ್ಟಕರವಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಇಶಾನ್ ಕಿಶನ್ ಅವರನ್ನು ವಿಕೆಟ್ ಕೀಪರ್ ಆಗಿ ಕಣಕ್ಕೆ ಇಳಿಸಬಹುದು. ರಾಹುಲ್ ಮಾರ್ಚ್‌ನಲ್ಲಿ ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕಾಗಿ ಕೊನೆಯ ಪಂದ್ಯವನ್ನು ಆಡಿದ್ದರು. ಏಷ್ಯಾಕಪ್‌ನ ಮೊದಲ 2 ಪಂದ್ಯಗಳಲ್ಲಿ ರಾಹುಲ್ ಆಡಲು ಸಾಧ್ಯವಾಗಲಿಲ್ಲ. 

ರಾಹುಲ್ ಅಮೋಘ ಪ್ರದರ್ಶನ :  
31 ವರ್ಷದ ರಾಹುಲ್ ಇದುವರೆಗೆ 54 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, 45.13ರ ಸರಾಸರಿಯಲ್ಲಿ 1986 ರನ್ ಗಳಿಸಿದ್ದಾರೆ. ಇದಲ್ಲದೆ, ಅವರು 47 ಟೆಸ್ಟ್‌ಗಳಲ್ಲಿ 2642 ರನ್ ಮತ್ತು 72 ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 2265 ರನ್ ಬಾರಿಸಿದ್ದಾರೆ. ಎಲ್ಲಾ ಮೂರು ಸ್ವರೂಪಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶತಕಗಳನ್ನು ಗಳಿಸಿದ ಕೆಲವೇ ಆಟಗಾರರ ಪೈಕಿ ರಾಹುಲ್ ಕೂಡಾ ಒಬ್ಬರು. ರಾಹುಲ್ ಟೆಸ್ಟ್‌ನಲ್ಲಿ 7, ಏಕದಿನದಲ್ಲಿ 5 ಮತ್ತು ಟಿ20 ಅಂತರಾಷ್ಟ್ರೀಯ 2 ಶತಕಗಳನ್ನು ಗಳಿಸಿದ್ದಾರೆ. ಈ ಬಾರಿ ರಾಹುಲ್ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಂತರೆ ಪಾಕಿಸ್ತಾನದ ಬೌಲರ್‌ಗಳು ಸಂಕಷ್ಟಕ್ಕೆ ಸಿಲುಕಬಹುದು.

ಇದನ್ನೂ ಓದಿ : ಏಷ್ಯಾ ಕಪ್ ಸೂಪರ್ 4 ಪಾಯಿಂಟ್ ಟೇಬಲ್’ನಲ್ಲಿ ಈ ತಂಡವೇ ಅಗ್ರಸ್ಥಾನಿ: ಎಷ್ಟು ಅಂಕ? ಇಲ್ಲಿದೆ ಪಟ್ಟಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

Trending News