ಭಾರತ vs ಇಂಗ್ಲೆಂಡ್ 4ನೇ ಟೆಸ್ಟ್: ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ ಪಂದ್ಯದಲ್ಲಿ ಪದಾರ್ಪಣೆ ಮಾಡಿದ ಭಾರತದ ವೇಗದ ಬೌಲರ್ ಆಕಾಶ್ ದೀಪ್ ಅವರು ಅಗ್ರಕ್ರಮಾಂಕದ ೩ ವಿಕೆಟ್‌ಗಳನ್ನು ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ. ತಮ್ಮ ಪದಾರ್ಪಣೆ ಪಂದ್ಯದ ಈ ಯಶಸ್ಸನ್ನು ಅವರು ದಿವಂಗತ ತಂದೆ ಮತ್ತು ಸಹೋದರನಿಗೆ ಅರ್ಪಿಸಿದ್ದಾರೆ. ʼಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ತಮ್ಮ ತಂದೆಯ ಕನಸನ್ನು ನನಸು ಮಾಡಿದ್ದೇನೆ, ಅದಕ್ಕಾಗಿ ನನಗೆ ತುಂಬಾ ಖುಷಿಯಾಗಿದೆʼ ಎಂದು ಅವರು ಸಂತಸ ಹಂಚಿಕೊಂಡಿದ್ದಾರೆ. ಅಂದಹಾಗೆ ೨೦೧೫ರಲ್ಲಿ ಪಾರ್ಶ್ವವಾಯುವಿಗೆ ತುತ್ತಾಗಿ ಆಕಾಶ್ ದೀಪ್ ಅವರ ತಂದೆ ನಿಧನರಾದರು. ಇದಾದ ೬ ತಿಂಗಳೊಳಗೆ ತಮ್ಮ ಅಣ್ಣನನ್ನು ಸಹ ಆಕಾಶ್ ದೀಪ್ ಕಳೆದುಕೊಂಡರು.
9 ವರ್ಷಗಳ ಹಿಂದೆ ತಂದೆಯ ಸಾವು
ಇಂಗ್ಲೆಂಡ್ ವಿರುದ್ಧದ ೪ನೇ ಟೆಸ್ಟ್‌ನ ಮೊದಲ ದಿನದಾಟದ ಅಂತ್ಯದ ನಂತರ ಮಾತನಾಡಿದ ಆಕಾಶ್ ದೀಪ್, ʼಒಂದು ವರ್ಷದೊಳಗೆ ನನ್ನ ತಂದೆ ಮತ್ತು ಅಣ್ಣನನ್ನು ಕಳೆದುಕೊಂಡ ನಂತರ ನಾನು ಏನನ್ನಾದರೂ ಮಾಡಬೇಕೆಂದು ಬಯಸಿದ್ದೆ. ಹೀಗಾಗಿ ನಾನು ಕ್ರಿಕೆಟ್ ಆಡಲು ಪ್ರಾರಂಭಿಸಿದೆ. ನನಗೆ ಕಳೆದುಕೊಳ್ಳಲು ಏನೂ ಇರಲಿಲ್ಲ, ಗಳಿಸಲು ಮಾತ್ರ ಅವಕಾಶವಿತ್ತುʼ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: IND vs ENG 4th Test: ರಾಂಚಿಯಲ್ಲಿ ಹೊಸ ಇತಿಹಾಸ ನಿರ್ಮಿಸಿದ ಅಶ್ವಿನ್.. ಈ ದಾಖಲೆ ಮಾಡಿದ ಮೊದಲ ಭಾರತೀಯ ಬೌಲರ್!
ತಂದೆಗೆ ʼಯಶಸ್ಸುʼ ಅರ್ಪಿಸಿದ ಆಕಾಶ್ ದೀಪ್
Say hello to #TeamIndia newest Test debutant - Akash Deep 👋
A moment to cherish for him as he receives his Test cap from Head Coach Rahul Dravid 👏 👏
Follow the match ▶️ https://t.co/FUbQ3Mhpq9 #INDvENG | @IDFCFIRSTBank pic.twitter.com/P8A0L5RpPM
— BCCI (@BCCI) February 23, 2024
ಇಂಗ್ಲೆಂಡ್ ತಂಡದ ಅರ್ಧದಷ್ಟು ಮಂದಿ ಊಟದ ವೇಳೆಗೆ 112 ರನ್‌ಗಳಿಗೆ ಪೆವಿಲಿಯನ್‌ಗೆ ಸೇರಿದ್ದರು. ಈ ಯಶಸ್ಸನ್ನು ನನ್ನ ತಂದೆಗೆ ಅರ್ಪಿಸುತ್ತೇನೆ ಎಂದು ಆಕಾಶ್ ದೀಪ್ ಹೇಳಿದ್ದಾರೆ. ಏಕೆಂದರೆ ತಮ್ಮ ಮಗ ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬುದು ಅವರ ಕನಸಾಗಿತ್ತು. ಅವರು ಬದುಕಿದ್ದಾಗ ನಾನೇನೂ ಮಾಡಲು ಸಾಧ್ಯವಾಗಲಿಲ್ಲ, ಹೀಗಾಗಿ ನನ್ನ ತಂದೆಗಾಗಿ ಈ ಯಶಸ್ಸನ್ನು ಅರ್ಪಿಸಲು ಬಯಸುತ್ತೇನೆ. ಪ್ರತಿಯೊಬ್ಬ ಕ್ರಿಕೆಟಿಗನಿಗೆ ಒಂದೇ ಒಂದು ಕನಸು ಇರುತ್ತದೆ, ಟೆಸ್ಟ್‌ನಲ್ಲಿ ಭಾರತಕ್ಕಾಗಿ ಆಡಬೇಕು. ಇದು ಸಹ ನನ್ನ ಏಕೈಕ ಕನಸಾಗಿತ್ತುʼ ಅಂತಾ ಆಕಾಶ್ ದೀಪ್ ಹೇಳಿಕೊಂಡಿದ್ದಾರೆ.
ಮೊಹಮ್ಮದ್ ಶಮಿ & ಕಗಿಸೊ ರಬಾಡ ಅನುಸರಣೆ
ಆಕಾಶ್ ದೀಪ್, ʼನಾನು ದೊಡ್ಡವನಾಗಿದ್ದಾಗ ನನಗೆ ಕ್ರಿಕೆಟ್ ಬಗ್ಗೆ ಏನೂ ತಿಳಿದಿರಲಿಲ್ಲ. 2007ರ ನಂತರ ಟೆನಿಸ್, ಕ್ರಿಕೆಟ್ ಆಡುತ್ತಿದ್ದ ನನಗೆ 2016ರ ನಂತರವೇ ಕ್ರಿಕೆಟ್ ಬಗ್ಗೆ ಗೊತ್ತಾಯಿತು. ಅಂದಿನಿಂದ ನಾನು ಮೊಹಮ್ಮದ್ ಶಮಿ ಭಾಯ್ ಮತ್ತು ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ ಅವರನ್ನು ಅನುಸರಿಸುತ್ತಿದ್ದೇನೆ. ನಾನು ಬಿಹಾರದ ನನ್ನ ಹಳ್ಳಿಗೆ ಸಮೀಪವಿರುವ ಸ್ಥಳದಲ್ಲಿ ಮತ್ತು ನಾನು ಆಡುವ ಬಂಗಾಳ ತಂಡದಲ್ಲಿ ನನ್ನ ಟೆಸ್ಟ್ ಚೊಚ್ಚಲ ಕ್ಯಾಪ್ ಪಡೆದಿದ್ದೇನೆ. ಬಂಗಾಳ ನನಗೆ ಬೆಂಬಲ ನೀಡಿದೆ. ನನ್ನ ಈ ಪ್ರಯಾಣದಲ್ಲಿ ನನ್ನ ಕುಟುಂಬದ ಪಾತ್ರ ದೊಡ್ಡದುʼ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Sanchin Tendulkar : ಫ್ಯಾಮಿಲಿ ಜೊತೆ ಕಾಶ್ಮೀರ ಟ್ರಿಪ್ ನಲ್ಲಿ ಕ್ರಿಕೆಟ್ ದಿಗ್ಗಜ : ಫೋಟೋಸ್ ಇಲ್ಲಿವೆ ನೋಡಿ
ಕುಟುಂಬಕ್ಕೆ ಭಾವನಾತ್ಮಕ ಕ್ಷಣ
ʼನನ್ನ ಕುಟುಂಬವೂ ಇಲ್ಲೇ ಇದೆ. ಸಂದೇಹವಿಲ್ಲ, ಇದೊಂದು ಭಾವನಾತ್ಮಕ ಕ್ಷಣವಾದರೂ ತಂಡಕ್ಕೆ ಹೇಗೆ ಕೊಡುಗೆ ನೀಡಬೇಕು ಎಂಬುದೇ ನನ್ನ ಮನಸ್ಸಿನಲ್ಲಿ ಓಡುತ್ತಿತ್ತುʼ ಎಂದು ಹೇಳಿಕೊಂಡಿದ್ದಾರೆ. ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಂದ ಟೆಸ್ಟ್ ಕ್ಯಾಪ್ ಸ್ವೀಕರಿಸಿದ ಆಕಾಶ್ ದೀಪ್ ಖುಷಿಯಾಗಿದ್ದರು. ಲೆಜೆಂಡರಿ ಕ್ರಿಕೆಟರ್ ದ್ರಾವಿಡ್ ಅವರು ನನ್ನ ಬಗ್ಗೆ ವಿಚಾರಿಸಿದ್ದರು. ಇದರಿಂದ ನಾನು ತುಂಬಾ ಭಾವುಕನಾದೆ. ಇದು ಇಂಗ್ಲೆಂಡ್ ವಿರುದ್ಧ ಯಶಸ್ಸು ಗಳಿಸಲು ಸಾಧ್ಯವಾಯಿತು ಎಂದು ಆಕಾಶ್ ದೀಪ್ ಹೇಳಿಕೊಂಡಿದ್ದಾರೆ.
ಜಸ್ಪ್ರೀತ್ ಬುಮ್ರಾ ಸಲಹೆ
ಭಾರತದ ಅಗ್ರ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೇಗೆ ಬೌಲಿಂಗ್ ಮಾಡಬೇಕೆಂದು ಸಲಹೆ ನೀಡಿದ್ದಾರೆ ಎಂದು ಆಕಾಶ್ ದೀಪ್ ಹೇಳಿದ್ದಾರೆ. ಬ್ಯಾಟರ್‌ಗಳಿಗೆ ಹೇಗೆ ಬೌಲಿಂಗ್ ಮಾಡಬೇಕು ಅಂತಾ ಬುಮ್ರಾ ಭಾಯ್ ನನಗೆ ಉತ್ತಮ ಸಲಹೆ ನೀಡಿದ್ದರು. ಇದು ನನ್ನ ಮನಸ್ಸಿನಲ್ಲಿತ್ತು ಮತ್ತು ಸರಿಯಾದ ಲೈನ್ ಮತ್ತು ಲೆಂಗ್ತ್‌ನೊಂದಿಗೆ ಬೌಲಿಂಗ್ ಮಾಡುವ ತಂತ್ರವನ್ನು ಬಳಸಿ ಉತ್ತಮವಾಗಿ ಬೌಲಿಂಗ್ ಮಾಡಲು ಸಾಧ್ಯವಾಯಿತು ಅಂತಾ ಹೇಳಿಕೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.