ನವದೆಹಲಿ: ಕೊರೊನಾ ಪ್ರಕರಣಗಳ ಹೆಚ್ಚಳದಿಂದ ಮುಂಬೈನಲ್ಲಿ ಈಗಾಗಲೇ ಮಹಾರಾಷ್ಟ್ರ ಸರ್ಕಾರ ರಾತ್ರಿ ಕರ್ಪ್ಯೂವನ್ನು ವಿಧಿಸಿದೆ ಈ ಹಿನ್ನಲೆಯಲ್ಲಿ ಇದು ಐಪಿಎಲ್ ಮೇಲೆ ಪರಿಣಾಮ ಬೀರಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದ್ದವು.
ಇದರ ಬೆನ್ನಲ್ಲೇ ಈಗ ಮಹಾರಾಷ್ಟ್ರ ಸರ್ಕಾರ(Maharashtra) ಸರ್ಕಾರ ಐಪಿಎಲ್ ತಂಡಗಳಿಗೆ ರಾತ್ರಿ ಕರ್ಪ್ಯೂ ನಡೆವೆಯೂ ಕೂಡ ತಂಡಗಳಿಗೆ ಹೋಟೆಲ್ ಗಳಿಗೆ ಪ್ರಯಾಣಿಸುವ ಅವಕಾಶವನ್ನು ಮಾಡಿಕೊಟ್ಟಿದೆ.
ಇದನ್ನೂ ಓದಿ: ಕೊರೊನಾ ಪ್ರಕರಣ ಹೆಚ್ಚಳ: ಎಲ್ಲಾ ರಾಜ್ಯಗಳ ಸಿಎಂ ಜೊತೆ ಪ್ರಧಾನಿ ಎಪ್ರಿಲ್ 8 ಕ್ಕೆ ಸಭೆ
ಮುಂಬೈ ಮತ್ತು ಮಹಾರಾಷ್ಟ್ರದಲ್ಲಿ Coronavirus ಪ್ರಕರಣಗಳು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿರುವುದರಿಂದ ರಾಜ್ಯ ಸರ್ಕಾರ ಭಾನುವಾರ 'ಬ್ರೇಕ್ ದಿ ಚೈನ್' ಘೋಷಿಸಿದೆ, ಇದರ ಅಡಿಯಲ್ಲಿ ಸೆಕ್ಷನ್ 144 ಮತ್ತು ವಾರದ ದಿನಗಳಲ್ಲಿ ರಾತ್ರಿ 8 ರಿಂದ ಬೆಳಿಗ್ಗೆ 7 ರವರೆಗೆ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ.ಈ ಸಂಜೆಯಿಂದ ಮಾರ್ಗಸೂಚಿಗಳನ್ನು ಜಾರಿಗೆ ತರಲಾಗುವುದು ಎನ್ನಲಾಗಿದೆ.
ಇದನ್ನೂ ಓದಿ: "ಕೊರೊನಾ ತಡೆಗೆ ಮಿನಿ ಲಾಕ್ಡೌನ್, ತ್ವರಿತ ಪ್ರಕ್ರಿಯೆ ಅಗತ್ಯ"
ಇದರ ನಡುವೆಯೂ ರಾಜ್ಯ ಸರ್ಕಾರವು ಐಪಿಎಲ್ ತಂಡಗಳಿಗೆ ರಾತ್ರಿ 8 ಗಂಟೆ ಮೀರಿ ಅಭ್ಯಾಸ ಮಾಡಲು ಅವಕಾಶ ನೀಡಿದೆ, ಇದೆ ವೇಳೆ "ಬಯೋ-ಬಬಲ್ ಅನ್ನು ಕಟ್ಟುನಿಟ್ಟಾಗಿ ಅನುಸರಿಸುವುದು ಅಗತ್ಯವಾಗಿರುತ್ತದೆ. ಎಪ್ರಿಲ್ 9 ರಂದು ಟೂರ್ನಿಗೆ ಚೆನ್ನೈ ನಿಂದ ಚಾಲನೆ ನೀಡಲಾಗುತ್ತದೆ.
ಇದನ್ನೂ ಓದಿ - ಕೊರೊನಾ ಹೆಚ್ಚಳ ಹಿನ್ನಲೆಯಲ್ಲಿ ಈ ರಾಜ್ಯಗಳಿಗೆ ಭೇಟಿ ನೀಡಲಿದೆ ಕೇಂದ್ರದ ತಂಡ
ಮುಂಬೈ ಐಪಿಎಲ್ನ 10 ಪಂದ್ಯಗಳನ್ನು ವಾಂಖೆಡೆ ಕ್ರೀಡಾಂಗಣದಲ್ಲಿ ಆಯೋಜಿಸಲಿದ್ದು, ಅವುಗಳಲ್ಲಿ ಒಂಬತ್ತು ಪಂದ್ಯಗಳು ಸಂಜೆ 7.30 ಕ್ಕೆ ಪ್ರಾರಂಭವಾಗಲಿವೆ. ಏಪ್ರಿಲ್ 10 ರಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವೆ ವಾಂಖೆಡೆನಲ್ಲಿ ಮೊದಲ ಪಂದ್ಯ ನಡೆಯಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.