ರಣಜಿ ಸೆಮಿಫೈನಲ್: ದೇವದತ್ತ ಪಡಿಕಲ್ ಅರ್ಧಶತಕ, ಕರ್ನಾಟಕದ ಗೆಲುವಿಗೆ ಬೇಕು 254 ರನ್

ಇಲ್ಲಿನ ಈಡನ್ ಗಾರ್ಡನ್ ನಲ್ಲಿ ಬಂಗಾಳ ವಿರುದ್ಧ ನಡೆಯುತ್ತಿರುವ ರಣಜಿ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡವು ತನ್ನ ಎರಡನೇ ಇನಿಂಗ್ಸ್ ನಲ್ಲಿ ಮೂರು ವಿಕೆಟ್ ನಷ್ಟಕ್ಕೆ 98 ರನ್ ಗಳಿಸಿದೆ.

Last Updated : Mar 2, 2020, 05:47 PM IST
ರಣಜಿ ಸೆಮಿಫೈನಲ್: ದೇವದತ್ತ ಪಡಿಕಲ್ ಅರ್ಧಶತಕ, ಕರ್ನಾಟಕದ ಗೆಲುವಿಗೆ ಬೇಕು 254 ರನ್ title=
Photo courtesy: Twitter(BCCI)

ಕೊಲ್ಕತ್ತಾ: ಇಲ್ಲಿನ ಈಡನ್ ಗಾರ್ಡನ್ ನಲ್ಲಿ ಬಂಗಾಳ ವಿರುದ್ಧ ನಡೆಯುತ್ತಿರುವ ರಣಜಿ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡವು ತನ್ನ ಎರಡನೇ ಇನಿಂಗ್ಸ್ ನಲ್ಲಿ ಮೂರು ವಿಕೆಟ್ ನಷ್ಟಕ್ಕೆ 98 ರನ್ ಗಳಿಸಿದೆ.

ಇದಕ್ಕೂ ಮೊದಲು ಎರಡನೇ ಇನಿಂಗ್ಸ್ ಬ್ಯಾಟಿಂಗ್ ಮಾಡಿದ್ದ ಬಂಗಾಳ ತಂಡವು 161 ರನ್ ಗಳಿಗೆ ಆಲೌಟ್ ಆಗಿತ್ತು, ಕರ್ನಾಟಕದ ಪರವಾಗಿ ಅಭಿಮನ್ಯು ಮಿಥುನ್ ಅವರು 4 ವಿಕೆಟ್ ಗಳನ್ನು ಕಬಳಿಸುವ ಮೂಲಕ ಬಂಗಾಳ ತಂಡದ ಬ್ಯಾಟಿಂಗ್ ಬೆನ್ನೆಲುಬನ್ನು ಮುರಿದರು. ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ತಂಡದ ಮೊತ್ತ 1 ಆಗಿದ್ದಾಗ ಕೆ.ಎಲ್.ರಾಹುಲ್ ಅವರ ವಿಕೆಟ್ ಕಳೆದುಕೊಳ್ಳುವ ಮೂಲಕ ಸಂಕಷ್ಟಕ್ಕೆ ಸಿಲುಕಿತು.

ಇನ್ನೊಂದೆಡೆ ತಳವೂರುವ ಲಕ್ಷಣ ತೋರಿದ್ದ ರವಿಕುಮಾರ್ ಸಮರ್ಥ ಅವರು 27 ರನ್ ಗಳಿಸಿ ಹೊರನಡೆದರು. ಇದಾದ ನಂತರ ಬಂದಂತಹ ಕರುಣ್ ನಾಯರ್ ಕೂಡ ಕೇವಲ 6 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಈಗ ದೇವದತ್ತ ಪಡಿಕಲ್ ಅಜೇಯ 50 ರನ್ ಹಾಗೂ ಮನೀಶ್ ಪಾಂಡೆ 11 ರನ್ ಗಳಿಸುವ ಮೂಲಕ ಕ್ರಿಸ್ ನಲ್ಲಿದ್ದಾರೆ. ಕರ್ನಾಟಕ ತಂಡಕ್ಕೆ ಗೆಲ್ಲಲು ಇನ್ನೂ 254 ರನ್ ಗಳ ಅಗತ್ಯವಿದೆ. ಮೂರನೇ ದಿನದಾಂತ್ಯಕ್ಕೆ ಕರ್ನಾಟಕ ಈಗ 98 ರನ್ ಗಳಿಗೆ ಮೂರು ವಿಕೆಟ್ ಗಳನ್ನು ಕಳೆದುಕೊಂಡಿದೆ.

Trending News