ನವದೆಹಲಿ : ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಐದು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿದೆ, ಆದರೆ ಐಪಿಎಲ್ 2022 ರಲ್ಲಿ ಮುಂಬೈ ತಂಡ ಸತತ ಮೂರು ಪಂದ್ಯಗಳಲ್ಲಿ ಸೋತಿದೆ. ಇಂದು (ಏಪ್ರಿಲ್ 9) ಮುಂಬೈ ಇಂಡಿಯನ್ಸ್, ಆರ್ಸಿಬಿ ತಂಡವನ್ನು ಎದುರಿಸಲಿದೆ. ರೋಹಿತ್ ಆರ್ಮಿಗೆ ಆರ್ಸಿಬಿ ಈ ಆಟಗಾರನ ಭಯ ಕಾಡುತ್ತಿದೆ. ಆ ಆಟಗಾರ ಯಾರು? ಯಾಕೆ ಭಯ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಈ ಆಟಗಾರ ಪ್ರಶಸ್ತಿಯ ಕನಸು ಭಗ್ನ
ದಿನೇಶ್ ಕಾರ್ತಿಕ್ ಐಪಿಎಲ್ 2022 ರಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ್ದಾರೆ. ಅವರು ತಮ್ಮ ಬ್ಯಾಟಿಂಗ್ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ದಿನೇಶ್ ಕಾರ್ತಿಕ್ 36 ವರ್ಷಕ್ಕೆ ಕಾಲಿಟ್ಟಿದ್ದಾರೆ ಮತ್ತು ಈ ವಯಸ್ಸಿನಲ್ಲೂ ಅವರು RCB ತಂಡಕ್ಕಾಗಿ ಪಂದ್ಯಗಳನ್ನು ಗೆಲ್ಲುತ್ತಿದ್ದಾರೆ. ದಿನೇಶ್ ಕಾರ್ತಿಕ್ ರಾಜಸ್ಥಾನ್ ರಾಯಲ್ಸ್ ವಿರುದ್ಧ 44 ರನ್ಗಳ ಇನಿಂಗ್ಸ್ ಆಡಿದರು. ಆರ್ಸಿಬಿಗೆ ದಿನೇಶ್ ಕಾರ್ತಿಕ್ನಲ್ಲಿ ಅಸಾಧಾರಣ ಫಿನಿಶರ್ ಸಿಕ್ಕಿದೆ. ಕಾರ್ತಿಕ್ ಕೊನೆಯ ಓವರ್ಗಳಲ್ಲಿ ಬಿರುಸಿನ ಬ್ಯಾಟಿಂಗ್ ಮಾಡಿದರು. ದಿನೇಶ್ ಕಾರ್ತಿಕ್ ಅವರ ಐಪಿಎಲ್ ಕೆರಿಯರ್ ಮುಗಿಯಿತು ಎಂದು ಎಲ್ಲರೂ ಯೋಚಿಸುತ್ತಿದ್ದಾಗ, ಕಾರ್ತಿಕ್ ಐಪಿಎಲ್ನಲ್ಲಿ ತಮ್ಮ ಬ್ಯಾಟಿಂಗ್ ಕೌಶಲ್ಯವನ್ನು ತೋರಿಸಿದ್ದಾರೆ.
ಇದನ್ನೂ ಓದಿ : ಇಂದು RCB-MI ಸೆಣಸಾಟ: ವಿಕೆಟ್ ಕೀಪರ್ಗಳ ಜಿದ್ದಾಜಿದ್ದಿಗೆ ವೇದಿಕೆಯಾಗಲಿದ್ಯಾ ಪಂದ್ಯ?
ತಿಲಕ್ ವರ್ಮಾ ಉತ್ತಮ ಪ್ರದರ್ಶನ
ಮುಂಬೈ ಇಂಡಿಯನ್ಸ್ ಪರ ಯುವ ತಿಲಕ್ ವರ್ಮಾ ಕೂಡ ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ. ಆದರೆ, ಬ್ರೆವಿಸ್ ಚೊಚ್ಚಲ ಪಂದ್ಯದಲ್ಲಿ ಉತ್ತಮ ಆಟ ಪ್ರದರ್ಶಿಸಿದರು. ಸೂರ್ಯಕುಮಾರ್ ಯಾದವ್ ಅವರು ಕಳೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಅಮೋಘ ಆಟವಾಡಿದರು, ಅವರು ಫಿಟ್ ಆಗಿದ್ದಾರೆ ಮತ್ತು ಮಧ್ಯಮ ಓವರ್ಗಳಲ್ಲಿ ತಂಡಕ್ಕೆ ಯೋಗ್ಯವಾದ ಮೊತ್ತವನ್ನು ನೀಡಬಲ್ಲರು ಎಂದು ತೋರಿಸಿದರು. ಟೈಮಲ್ ಮಿಲ್ಸ್ ಎಲ್ಲಾ ಪಂದ್ಯಗಳಲ್ಲಿ ಸತತವಾಗಿ ವಿಕೆಟ್ ಪಡೆದರೆ, ಬಾಸಿಲ್ ಥಂಪಿ ಮತ್ತು ಮುರುಗನ್ ಅಶ್ವಿನ್ ಕೂಡ ತಮ್ಮ ಫಾರ್ಮ್ನಲ್ಲಿದ್ದಾರೆ.
ರೋಹಿತ್ ಶರ್ಮಾ ಮಾಡಬಲ್ಲ ದಾಖಲೆ
ಐಪಿಎಲ್ನಲ್ಲಿ 500 ಫೋರ್ ಪೂರೈಸಲು ನಾಯಕ ರೋಹಿತ್ ಶರ್ಮಾಗೆ ಐದು ಬೌಂಡರಿಗಳ ಅವಶ್ಯಕತೆಯಿದೆ. ಈ ದಾಖಲೆ ಬರೆದ ಆಟಗಾರರಲ್ಲಿ ಐದನೇ ಬ್ಯಾಟ್ಸ್ಮನ್ ಆಗಲಿದ್ದಾರೆ. 200 ಸಿಕ್ಸರ್ಗಳನ್ನು ಪೂರ್ಣಗೊಳಿಸಲು ಶರ್ಮಾಗೆ ಇನ್ನೂ ಐದು ಸಿಕ್ಸರ್ಗಳು ಬೇಕಾಗಿವೆ. ಜಸ್ಪ್ರೀತ್ ಬುಮ್ರಾ 24 ವಿಕೆಟ್ಗಳೊಂದಿಗೆ ಐಪಿಎಲ್ನಲ್ಲಿ ಆರ್ಸಿಬಿ ವಿರುದ್ಧ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಹೊರಹೊಮ್ಮಿದ್ದಾರೆ.
ಇದನ್ನೂ ಓದಿ : PBKS v GT: 6,6 ತೇವಾಟಿಯಾ ಕೊನೆಯ ಓವರ್ ಥ್ರಿಲ್ಲರ್ ಸಿಕ್ಸರ್ ಗೆ ಬೆಚ್ಚಿದ ಪಂಜಾಬ್ ಕಿಂಗ್ಸ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.