ನವದೆಹಲಿ: ‘ಅಥ್ಲೆಟಿಕ್ಸ್ ನಲ್ಲಿ ಚಿನ್ನ ಗೆಲ್ಲುವುದು ನನ್ನ ಕನಸಾಗಿತ್ತು. 37 ವರ್ಷಗಳಿಂದ ಅಪೂರ್ಣವಾಗಿ ಉಳಿದಿದ್ದ ನನ್ನ ಕನಸನ್ನು ಪೂರ್ಣಗೊಳಿಸಿದ ನಿನಗೆ ಶುಭಾಶಯಗಳು. ಧನ್ಯವಾದಗಳು ಮಗನೇ’. ಹೀಗೆ ಹೇಳಿದ್ದು ಇಂಡಿಯನ್ ಗೋಲ್ಡನ್ ಗರ್ಲ್ ಖ್ಯಾತಿಯ ಪಿ.ಟಿ.ಉಷಾ. ಹೌದು, ಟೋಕಿಯೊ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಶನಿವಾರ 87.58 ಮೀ. ದೂರ ಜಾವೆಲಿನ್ ಎಸೆಯುವ ಮೂಲಕ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟ ನೀರಜ್ ಚೋಪ್ರಾ ಹೊಸ ಇತಿಹಾಸ ಬರೆದಿದ್ದಾರೆ.
ಇದನ್ನೂ ಓದಿ: Breaking News: ಭಾರತಕ್ಕೆ ಮತ್ತೊಂದು ಪದಕ: ಕಂಚಿಗೆ ಮುತ್ತಿಕ್ಕಿದ ಬಜರಂಗ್ ಪೂನಿಯಾ
ಭಾರತಕ್ಕೆ ಅಥ್ಲೆಟಿಕ್ ನಲ್ಲಿ ಮೊದಲ ಚಿನ್ನದ ಪದಕ ಸಿಕ್ಕಂತಾಗಿದೆ. ಅಥ್ಲೆಟಿಕ್ ನ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆಲ್ಲುವ ಮೂಲಕ ನೀರಜ್ ಚೋಪ್ರಾ ಮಹತ್ವದ ಸಾಧನೆ ಮಾಡಿದ್ದಾರೆ. ಬಂಗಾರದ ಪದಕಕ್ಕೆ ಮುತ್ತಿಕ್ಕಿದ 23 ವರ್ಷದ ‘ಚಿನ್ನ’ದ ಹುಡುಗ ನೀರಜ್ ಚೋಪ್ರಾಗೆ ದೇಶಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ನೀರಜ್ ಚೋಪ್ರಾ ಸಾಧನೆಯನ್ನು ಕೊಂಡಾಡಿದ್ದಾರೆ. ಇಡೀ ದೇಶದಲ್ಲಿಯೇ ಸಂಭ್ರಮಾಚರಣೆ ನಡೆಯುತ್ತಿದೆ. ನೀರಜ್ ಚೋಪ್ರಾಗೆ ಅನೇಕ ರಾಜ್ಯ ಸರ್ಕಾರಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಬಹುಮಾನ ಘೋಷಿಸಿದ್ದಾರೆ.
Realised my unfinished dream today after 37 years. Thank you my son @Neeraj_chopra1 🇮🇳🥇#Tokyo2020 pic.twitter.com/CeDBYK9kO9
— P.T. USHA (@PTUshaOfficial) August 7, 2021
ಈ ಎಲ್ಲದರ ಮಧ್ಯೆ ಭಾರತದ ಹೆಮ್ಮೆಯ ಅಥ್ಲೀಟ್, ಚಿನ್ನದ ಹುಡುಗಿ ಖ್ಯಾತಿಯ ಪಿ.ಟಿ.ಉಷಾ ತಮ್ಮ ಟ್ವೀಟರ್ ಖಾತೆಯಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾಗೆ ಅಭಿನಂದನೆ ಸಲ್ಲಿಸಿದ್ದಾರೆ. ‘ಇದು ನನ್ನ ಕನಸಾಗಿತ್ತು. 37 ವರ್ಷದಿಂದ ಅಪೂರ್ಣವಾಗಿ ಉಳಿದಿದ್ದ ಕನಸನ್ನು ಪರಿಪೂರ್ಣಗೊಳಿಸಿದ ನಿನಗೆ ಶುಭಾಶಯಗಳು. ಧನ್ಯವಾದಗಳು ಮಗನೇ’ ಎಂದು ಹೃದಯಪೂರ್ವಕವಾಗಿ ಅಭಿನಂದನೆ ತಿಳಿಸಿದ್ದಾರೆ.
37 years ago on 8th Aug 1984, I missed the podium by 1/100th of a second & that unrealised dream could well be fulfilled by my son & India's pride @Neeraj_chopra1 who has qualified for the finals #Tokyo2020 on 7th August. My blessings & best wishes to him.https://t.co/jbhHF7Sjik
— P.T. USHA (@PTUshaOfficial) August 4, 2021
1984ರ ಲಾಸ್ ಏಂಜಲಿಸ್ ಬೇಸಿಗೆ ಒಲಂಪಿಕ್ಸ್ ನಲ್ಲಿ ಭಾರತ ಒಂದೂ ಪದಕ ಗೆಲ್ಲದೆ ನಿರಾಸೆ ಅನುಭವಿಸಿತ್ತು. ಈ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ 400 ಮೀ. ಹರ್ಡಲ್ಸ್ನಲ್ಲಿಪಿ.ಟಿ.ಉಷಾ ಕಂಚಿನ ಪದಕ ಗೆಲ್ಲುವ ಅವಕಾಶವನ್ನು ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದರು. ಆ ಒಲಂಪಿಕ್ಸ್ ಮುಗಿದು 37 ವರ್ಷಗಳ ಬಳಿಕ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ದೊರೆತಿದೆ. ಅಥ್ಲೆಟಿಕ್ ಪಂದ್ಯದಲ್ಲಿ ಭಾರತಕ್ಕ ಇದೇ ಮೊದಲ ಬಾರಿಗೆ ಚಿನ್ನದ ಪದಕ ಲಭಿಸಿದಂತಾಗಿದೆ.
ಇದನ್ನೂ ಓದಿ: Tokyo Olympics 2020: ಗಾಲ್ಫ್ ನಲ್ಲಿ ಪದಕ ಜಸ್ಟ್ ಮಿಸ್, ಟೋಕಿಯೊದಲ್ಲಿ ಕನ್ನಡತಿಯ ಸಾಧನೆ
2008ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ 10 ಮೀ. ಏರ್ ರೈಫಲ್ ಶೂಟಿಂಗ್ ನಲ್ಲಿ ಅಭಿನವ್ ಬಿಂದ್ರಾ ಚಿನ್ನದ ಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್ ವೈಯುಕ್ತಿಕ ವಿಭಾಗದಲ್ಲಿ ಸ್ವರ್ಣ ಗೆದ್ದ ಭಾರತದ ಮೊದಲ ಅಥ್ಲೀಟ್ ಎನ್ನುವ ದಾಖಲೆ ಬರೆದಿದ್ದರು. ಇದೀಗ ನೀರಜ್ ಚೋಪ್ರಾ ಕೂಡ ಆ ಸಾಧನೆ ಮಾಡುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಟ್ರಾಕ್ ಮತ್ತು ಫೀಲ್ಡ್ ಅಥ್ಲೀಟ್ ಒಬ್ಬ ಒಲಿಂಪಿಕ್ಸ್ನಲ್ಲಿ ಚಿನ್ನ ಗೆಲ್ಲುವ ಕನಸು ನನಸಾದಂತಾಗಿದೆ. ಅತ್ಯಂತ ಸಂಭ್ರಮ ಮತ್ತು ಖುಷಿಯಿಂದ ಪಿ.ಟಿ.ಉಷಾ ಟ್ವೀಟ್ ಮಾಡಿ ನೀರಜ್ ಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ