ಇಂದಿನ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತದ ಆಟಗಾರ್ತಿಯರು ರನ್ ಗಳ ಮೂಲಕ ದಾಖಲೆಯನ್ನೇ ಸೃಷ್ಠಿಸಿದ್ದಾರೆ. ಶೆಫಾಲಿ ವರ್ಮಾ ದ್ವಿಶತಕ, ಸ್ಮೃತಿ ಮಂಧಾನ ಶತಕ ಮತ್ತು ಜೆಮಿಮಾ ರಾಡ್ರಿಗಸ್ ಅರ್ಧ ಶತಕ ಬಾರಿಸಿ ಟೀಂ ಇಂಡಿಯಾಗೆ ಹೊಸ ಇತಿಹಾಸ ನಿರ್ಮಿಸಿದರು.
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡದ ಯುವ ಆಟಗಾರ್ತಿ ಶಫಾಲಿ ವರ್ಮಾ ಇತಿಹಾಸ ಸೃಷ್ಟಿಸಿದರು.ಪಂದ್ಯದ ಆರಂಭದಿಂದಲೂ ಶಫಾಲಿ ವರ್ಮಾ ವಿಭಿನ್ನವಾಗಿ ಕಾಣಿಸಿಕೊಂಡು ದಕ್ಷಿಣ ಆಫ್ರಿಕಾದ ಬೌಲರ್ಗಳ ಮೇಲೆ ಬ್ಯಾಟ್ನಿಂದ ದಾಳಿ ನಡೆಸಿದರು. ಶಫಾಲಿ ದುರದೃಷ್ಟವಶಾತ್ 205 ರನ್ ಗಳಿಸಿ ರನೌಟ್ ಆದರು. ಆದರೆ ಈ ಇನ್ನಿಂಗ್ಸ್ ಮೂಲಕ ಮಹಿಳಾ ಕ್ರಿಕೆಟ್ನಲ್ಲಿ ಹೊಸ ಅಧ್ಯಾಯವನ್ನೇ ಬರೆದಿದ್ದಾರೆ.
ಇದನ್ನು ಓದಿ : ವಾಟ್ಸಾಪ್ ಮೂಲಕ ವಿಮಾನ ಟಿಕೆಟ್ ಬುಕಿಂಗ್: ಹೊಸ ವೈಶಿಷ್ಟ್ಯ ಪರಿಚಯಿಸಿದ ಇಂಡಿಗೋ
ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಶಫಾಲಿ ವರ್ಮಾ ಅದ್ಭುತ ಬ್ಯಾಟಿಂಗ್ ಮಾಡಿ ದ್ವಿಶತಕ ದಾಖಲಿಸಿದರು. ಕೇವಲ 194 ಎಸೆತಗಳಲ್ಲಿ ದ್ವಿಶತಕ ದಾಖಲಿಸಿದರು. ಇದರೊಂದಿಗೆ ಮಹಿಳಾ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಂತ ವೇಗವಾಗಿ ದ್ವಿಶತಕ ಸಿಡಿಸಿದ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
That's Stumps on Day 1 of the #INDvSA Test!
A record-breaking & a run-filled Day comes to an end as #TeamIndia post a massive 525/4 on the board! 👏 🙌
Scorecard ▶️ https://t.co/4EU1Kp7wJe@IDFCFIRSTBank pic.twitter.com/ELEdbtwcUB
— BCCI Women (@BCCIWomen) June 28, 2024
256 ಎಸೆತಗಳಲ್ಲಿ ದ್ವಿಶತಕ ಸಿಡಿಸಿದ್ದ ಆಸ್ಟ್ರೇಲಿಯಾದ ಅನಾಬೆಲ್ ಸದರ್ಲ್ಯಾಂಡ್ ಅವರ ಹಿಂದಿನ ದಾಖಲೆಯನ್ನು ಶಫಾಲಿ ಮುರಿಯುವ ಮೂಲಕ ಕೇವಲ 194 ಎಸೆತಗಳಲ್ಲಿ 205 ರನ್ ಗಳಿಸಿದರು. 16 ವರ್ಷಗಳ ಹಿಂದೆ ಕೇವಲ 194 ಎಸೆತಗಳಲ್ಲಿ ದ್ವಿಶತಕ ಸಿಡಿಸಿದ್ದ ಭಾರತದ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ದಾಖಲೆಯನ್ನು ಶೆಫಾಲಿ ವರ್ಮಾ ಸರಿಗಟ್ಟಿದ್ದಾರೆ.
ಇದನ್ನು ಓದಿ : ಪಾನಿಪುರಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು!! ಯಾಕೆ ಗೊತ್ತಾ ಕೇಳಿದ್ರೆ ಶಾಕ್ ಆಗುವುದಂತೂ ಖಂಡಿತ..
ಮೊದಲ ದಿನವೇ ಅತಿ ಹೆಚ್ಚು ರನ್ ಗಳಿಸಿದ ದಾಖಲೆ
ಶೆಫಾಲಿ ವರ್ಮಾ ಅವರ ದ್ವಿಶತಕ ಮತ್ತು ಸ್ಮೃತಿ ಮಂಧಾನ ಅವರ ಶತಕದಿಂದ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದ ಮೊದಲ ದಿನದಲ್ಲಿ ಭಾರಿ ಸ್ಕೋರ್ ಮಾಡಿದೆ. ಟೆಸ್ಟ್ ಕ್ರಿಕೆಟ್ನಲ್ಲಿ ಮೊದಲ ದಿನ ಅತಿ ಹೆಚ್ಚು ರನ್ ಗಳಿಸಿದ ತಂಡ ಎಂಬ ದಾಖಲೆ ನಿರ್ಮಿಸಿದೆ. ಶೆಫಾಲಿ ವರ್ಮಾ 205, ಸ್ಮೃತಿ ಮಂಧಾನ 149, ಶುಭಾ ಸತೀಶ್ 15 ಮತ್ತು ಜೆಮಿಮಾ ರಾಡ್ರಿಗಸ್ 55 ರನ್ ಗಳಿಸಿ ಔಟಾದರು. ಪ್ರಸ್ತುತ ಹರ್ಮನ್ಪ್ರೀತ್ ಕೌರ್ 42* ರನ್ ಮತ್ತು ರಿಚಾ ಘೋಷ್ 43* ರನ್ಗಳೊಂದಿಗೆ 16 ವರ್ಷಗಳ ಹಿಂದೆ ಕೇವಲ 194 ಎಸೆತಗಳಲ್ಲಿ ದ್ವಿಶತಕ ಸಿಡಿಸಿದ್ದ ಭಾರತದ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ದಾಖಲೆಯನ್ನು ಶೆಫಾಲಿ ವರ್ಮಾ ಸರಿಗಟ್ಟಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ