Pakistan Captain Babar Azam Statement: ಶ್ರೇಷ್ಠ ಬ್ಯಾಟ್ಸ್’ಮನ್ ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡವು ಏಷ್ಯಾಕಪ್-2023 ರ ಸೂಪರ್-4 ಸುತ್ತಿನ ಪಂದ್ಯದಲ್ಲಿ ಭಾರತದ ವಿರುದ್ಧ ಹೀನಾಯವಾಗಿ ಸೋತಿದೆ. ಬಾಬರ್ ಅಜಮ್ ಮೇಲೆ ಪಾಕ್ ಅಭಿಮಾನಿಗಳು ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರೂ ಸಹ, ಅದನ್ನು ಈಡೇರಿಸಲು ಅವರಿಂದ ಸಾಧ್ಯವಾಗಲಿಲ್ಲ. ಕೇವಲ 10 ರನ್ ಗಳಿಸಿ ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಬೌಲ್ಡ್ ಆದರು. ಇಂಥಾ ಸೋಲಿನ ನಂತರ ಬಾಬರ್ ಅಜಮ್ ಮೊದಲು ಕ್ಷಮೆ ಕೇಳಿ, ಆ ನಂತರ ಸೋಲಿಗೆ ಕಾರಣವಾದ ಅಂಶಗಳ ಬಗ್ಗೆ ಮಾತನಾಡಿದರು.
ಇದನ್ನೂ ಓದಿ: ಭಾರೀ ಇಳಿಕೆ ಕಂಡ ಚಿನ್ನ: ನಿರಂತರ ಕುಸಿತದ ಬಳಿಕ 10 ಗ್ರಾಂ ಬಂಗಾರಕ್ಕೆ ಎಷ್ಟಿದೆ ರೇಟ್?
ಏಷ್ಯಾಕಪ್ ಸೂಪರ್-4 ಸುತ್ತಿನ ಪಂದ್ಯದಲ್ಲಿ ಪಾಕಿಸ್ತಾನವನ್ನು 228 ರನ್’ಗಳ ಬೃಹತ್ ಅಂತರದಿಂದ ಸೋಲಿಸುವ ಮೂಲಕ ಭಾರತ ಕ್ರಿಕೆಟ್ ತಂಡ ಸೋಮವಾರ ಇತಿಹಾಸ ನಿರ್ಮಿಸಿದೆ. ಇದು ಏಕದಿನದಲ್ಲಿ ಪಾಕಿಸ್ತಾನ ವಿರುದ್ಧ ಭಾರತಕ್ಕೆ ಸಿಕ್ಕ ಅತಿ ದೊಡ್ಡ ಗೆಲುವು. ಇದರೊಂದಿಗೆ ರೋಹಿತ್ ಶರ್ಮಾ ನಾಯಕತ್ವದ ತಂಡ ಈ ಕಾಂಟಿನೆಂಟಲ್ ಕ್ರಿಕೆಟ್ ಟೂರ್ನಿಯ ಫೈನಲ್’ಗೆ ಬಲವಾದ ಹೆಜ್ಜೆಯನ್ನಿಟ್ಟಿದೆ.
ಮೀಸಲು ದಿನದವರೆಗೂ ನಡೆದ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ (ಔಟಾಗದೆ 122) ಹಾಗೂ ಕೆಎಲ್ ರಾಹುಲ್ (ಅಜೇಯ 111) ಅವರ ಶತಕಗಳ ನೆರವಿನಿಂದ ಭಾರತ 2 ವಿಕೆಟ್ ಕಳೆದುಕೊಂಡು 356 ರನ್ ಗಳ ಬೃಹತ್ ಮೊತ್ತ ಕಲೆಹಾಕಿತು.
ಬಾಬರ್ ಆಜಂ ಹೇಳಿದ್ದೇನು?
ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಮೊದಲು ಹವಾಮಾನದ ಬಗ್ಗೆ ಮಾತನಾಡಿದರು. “ಇಲ್ಲಿನ ವಾತಾವರಣ ನಮ್ಮ ಕೈಯಲ್ಲಿಲ್ಲ ಆದರೆ ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸಿದ್ದೇವೆ. ನಮ್ಮ ಬ್ಯಾಟಿಂಗ್ ಮತ್ತು ಬೌಲಿಂಗ್’ನಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಭಾರತೀಯ ಆರಂಭಿಕರು ನಮ್ಮ ಬೌಲರ್’ಗಳಿಗಾಗಿ ಯೋಜನೆಯನ್ನು ಹೊಂದಿದ್ದರು. ಅದೇ ಕಾರಣದಿಂದ ಉತ್ತಮ ಆರಂಭವನ್ನು ಪಡೆದರು. ಇದಾದ ನಂತರ ವಿರಾಟ್ ಮತ್ತು ರಾಹುಲ್ ಮುಂದಕ್ಕೆ ಕೊಂಡೊಯ್ದರು. ಜಸ್ಪ್ರೀತ್ ಮತ್ತು ಸಿರಾಜ್ ಮೊದಲ 10 ಓವರ್’ಗಳಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದರು. ಆದರೆ ನಮ್ಮ ಬ್ಯಾಟಿಂಗ್ ನಿರೀಕ್ಷಿಸಿದಂತೆ ಇರಲಿಲ್ಲ” ಎನ್ನುತ್ತಾ ಸೋಲಿಗೆ ಬ್ಯಾಟ್ಸ್‌ಮನ್’ಗಳೇ ಹೊಣೆ ಎಂದು ಪರೋಕ್ಷಾಗಿ ಹೇಳಿದ್ದಾರೆ.
ಇದನ್ನೂ ಓದಿ: 11 ವರ್ಷ ಹಳೆಯ ದಾಖಲೆ ಮುರಿದು ಇತಿಹಾಸ ಬರೆದ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಜೋಡಿ!
ವಿರಾಟ್ ಅಬ್ಬರ..
ಪವರ್’ಫುಲ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಆಗಿ ಆಯ್ಕೆಯಾದರು. ತಮ್ಮ ನೆಚ್ಚಿನ ನಂಬರ್-3 ಕ್ರಮಾಂದಲ್ಲಿ ಬಂದ ವಿರಾಟ್ 94 ಎಸೆತಗಳ ತಮ್ಮ ಅಜೇಯ ಇನ್ನಿಂಗ್ಸ್’ನಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ ಶತಕದಾಟವನ್ನಾಡಿದ್ದಾರೆ. ಇನ್ನೊಂದೆಡೆ ರಾಹುಲ್ 106 ಎಸೆತಗಳಲ್ಲಿ 12 ಬೌಂಡರಿ ಹಾಗೂ 2 ಸಿಕ್ಸರ್ ಬಾರಿಸಿ ಅಜೇಯರಾಗಿ ಮರಳಿದರು. ನಾಯಕ ರೋಹಿತ್ 56 ರನ್ ಮತ್ತು ಶುಭ್ಮನ್ ಗಿಲ್ 58 ರನ್ ಗಳಿಸಿದ್ದರು. ಸ್ಪಿನ್ನರ್ ಕುಲದೀಪ್ ಯಾದವ್ ಪಾಕಿಸ್ತಾನದ ಬ್ಯಾಟ್ಸ್‌ಮನ್’ಗಳಿಗೆ ಕಠಿಣ ಕ್ಲಾಸ್ ನೀಡಿ 8 ಓವರ್’ಗಳಲ್ಲಿ ಕೇವಲ 25 ರನ್’ಗೆ 5 ವಿಕೆಟ್ ಪಡೆದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ