Top 10 Fastest Indian Pacers: ಬಾಂಗ್ಲಾದೇಶ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಮಯಾಂಕ್ ಯಾದವ್ ಪಾದಾರ್ಪಣೆ ಮಾಡಿದರು. ಚೊಚ್ಚಲ ಪಂದ್ಯದಲ್ಲೇ ಮಯಾಂಕ್ 149.9 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದರು. ಅಂದಹಾಗೆ ಐಪಿಎಲ್ 2024ರಲ್ಲಿ ಅತಿ ವೇಗದ ಬಾಲ್ ಎಸೆದ ಬೌಲರ್ ಮಯಾಂಕ್.
ಇನ್ನು ನಾವಿಂದು ಈ ವರದಿಯಲ್ಲಿ ಭಾರತದ ಟಾಪ್ 10 ವೇಗದ ಬೌಲರ್‌ಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಉಮ್ರಾನ್ ಮಲಿಕ್- ಗಂಟೆಗೆ 157 ಕಿ.ಮೀ
ಭಾರತದ ಉಮ್ರಾನ್ ಮಲಿಕ್ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ವೇಗದ ಬೌಲರ್. ಉಮ್ರಾನ್ ಐಪಿಎಲ್ 2022 ರಲ್ಲಿ 157 ಕಿಮೀ ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದರು. ಆದರೆ, ಸರಿಯಾದ ಲೈನ್ ಆಂಡ್ ಲೆಂಗ್ತ್ ಕಾಯ್ದುಕೊಳ್ಳಲು ಸಾಧ್ಯವಾಗದ ಕಾರಣ ಉಮ್ರಾನ್ ಸದ್ಯ ಭಾರತ ತಂಡದಿಂದ ಹೊರಗುಳಿದಿದ್ದಾರೆ.
ಮಯಾಂಕ್ ಯಾದವ್ - ಗಂಟೆಗೆ 156 ಕಿಮೀ
ಮಯಾಂಕ್ ಯಾದವ್ ಐಪಿಎಲ್ 2024 ರಲ್ಲಿ 156 ಕಿಮೀ ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಸಂಚಲನ ಮೂಡಿಸಿದರು. ಭವಿಷ್ಯದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲೂ 156 ರನ್ ವೇಗದಲ್ಲಿ ಚೆಂಡನ್ನು ಬೌಲ್ ಮಾಡಬಹುದೆಂಬ ಭರವಸೆಯನ್ನು ಮಯಾಂಕ್ ತಮ್ಮ ವೇಗದ ಬೌಲಿಂಗ್‌ನಿಂದ ಹೆಚ್ಚಿಸಿದ್ದಾರೆ.
ಜಾವಗಲ್ ಶ್ರೀನಾಥ್- ಗಂಟೆಗೆ 154.5 ಕಿ.ಮೀ
ಭಾರತದ ಮಾಜಿ ವೇಗದ ಬೌಲರ್ ಜಾವಗಲ್ ಶ್ರೀನಾಥ್ ಅವರು ತಮ್ಮ ವೃತ್ತಿಜೀವನದಲ್ಲಿ 154.5 ಕಿಮೀ / ಗಂ ವೇಗದಲ್ಲಿ ಚೆಂಡನ್ನು ಎಸೆದ ದಾಖಲೆಯನ್ನು ಮಾಡಿದ್ದಾರೆ.
ಇರ್ಫಾನ್ ಪಠಾಣ್- ಗಂಟೆಗೆ 153.7 ಕಿ.ಮೀ
ಭಾರತದ ಸ್ವಿಂಗ್ ಸುಲ್ತಾನ್ ಎಂದು ಕರೆಯಲ್ಪಡುವ ಇರ್ಫಾನ್ ಪಠಾಣ್ ಅವರು ತಮ್ಮ ವೃತ್ತಿಜೀವನದಲ್ಲಿ ಗಂಟೆಗೆ 153.7 ಕಿಮೀ ವೇಗದಲ್ಲಿ ಚೆಂಡನ್ನು ಎಸೆಯುವ ಅದ್ಭುತಗಳನ್ನು ಮಾಡಿದ್ದರು.
ಮೊಹಮ್ಮದ್ ಶಮಿ- 153.3 ಕಿಮೀ/ಗಂ
ಭಾರತದ ದಿಗ್ಗಜ ವೇಗದ ಬೌಲರ್ ಮೊಹಮ್ಮದ್ ಶಮಿ ಗಂಟೆಗೆ 153.3 ಕಿಮೀ ವೇಗದಲ್ಲಿ ಚೆಂಡನ್ನು ಎಸೆಯುವ ಮೂಲಕ ಅದ್ಭುತ ಸಾಧನೆ ಮಾಡಿದ್ದಾರೆ. ಶಮಿಯನ್ನು ಭಾರತದ ಅತ್ಯುತ್ತಮ ವೇಗದ ಬೌಲರ್ ಎಂದು ಪರಿಗಣಿಸಲಾಗಿದೆ. ಮೊಹಮ್ಮದ್ ಶಮಿ ಪ್ರಸ್ತುತ ಭಾರತ ತಂಡದಿಂದ ಹೊರಗಿದ್ದಾರೆ ಆದರೆ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಅವರು ಮರಳಬಹುದು ಎಂದು ನಿರೀಕ್ಷಿಸಲಾಗಿದೆ.
ಜಸ್ಪ್ರೀತ್ ಬುಮ್ರಾ - 153.26 KMPH
ಭಾರತದ ಶ್ರೇಷ್ಠ ಬೌಲರ್ ಎಂದು ಪರಿಗಣಿಸಲ್ಪಟ್ಟಿರುವ ಜಸ್ಪ್ರೀತ್ ಬುಮ್ರಾ ಅವರು 153.2 ಕಿಮೀ ವೇಗದಲ್ಲಿ ಚೆಂಡನ್ನು ಎಸೆಯುವ ಮೂಲಕ ತಮ್ಮ ವೃತ್ತಿಜೀವನದಲ್ಲಿ ಅದ್ಭುತಗಳನ್ನು ಮಾಡಿದ್ದಾರೆ.
ನವದೀಪ್ ಸೈನಿ- ಗಂಟೆಗೆ 152.8 ಕಿ.ಮೀ
ಭಾರತದ ಮತ್ತೊಬ್ಬ ವೇಗದ ಬೌಲರ್ ನವದೀಪ್ ಸೈನಿ ತಮ್ಮ ವೃತ್ತಿಜೀವನದ ಅತ್ಯಂತ ವೇಗದ ಚೆಂಡನ್ನು ಗಂಟೆಗೆ 152.85 ಕಿಮೀ ವೇಗದಲ್ಲಿ ಎಸೆದಿದ್ದಾರೆ.
ಇಶಾಂತ್ ಶರ್ಮಾ- ಗಂಟೆಗೆ 152.6 ಕಿ.ಮೀ
ಭಾರತದ ದಂತಕಥೆ ವೇಗದ ಬೌಲರ್ ಇಶಾಂತ್ ಶರ್ಮಾ ಅವರು ತಮ್ಮ ವೃತ್ತಿಜೀವನದಲ್ಲಿ 152.6 ಕಿಮೀ / ಗಂ ವೇಗದಲ್ಲಿ ವೇಗದ ಎಸೆತವನ್ನು ಎಸೆದಿದ್ದಾರೆ.
ವರುಣ್ ಆರೋನ್- 152.5 ಕಿಮೀ/ಗಂ
ಭಾರತದ ವೇಗದ ಬೌಲರ್ ವರುಣ್ ಆರೋನ್ ಒಮ್ಮೆ ಭಾರತದ ವೇಗದ ಬೌಲರ್ ಆಗಿ ಹೊರಹೊಮ್ಮಿದ್ದರು. 150 km/h ವೇಗದಲ್ಲಿ ಬೌಲಿಂಗ್ ಮಾಡಿದ್ದರು. ಗಾಯಗಳ ಕಾರಣದಿಂದಾಗಿ ಅವರ ವೃತ್ತಿಜೀವನವು ಹೆಚ್ಚು ಕಾಲ ಉಳಿಯಲು ಸಾಧ್ಯವಾಗಲಿಲ್ಲ.
ಇದನ್ನೂ ಓದಿ: "ಇವರು ಈ ಬಾರಿ ಬಿಗ್‌ಬಾಸ್ ಟ್ರೋಫಿ ಗೆಲ್ಲಬೇಕು"- ಬಿಗ್‌ಬಾಸ್‌ನಿಂದ ಹೊರಬಂದ ನಟಿ ಯಮುನಾ ಶ್ರೀನಿಧಿ
ಉಮೇಶ್ ಯಾದವ್- ಗಂಟೆಗೆ 152.2 ಕಿ.ಮೀ
ಭಾರತದ ವೇಗದ ಬೌಲರ್ ಉಮೇಶ್ ಯಾದವ್ ಅವರು ತಮ್ಮ ವೃತ್ತಿಜೀವನದ ಅತ್ಯಂತ ವೇಗದ ಎಸೆತವನ್ನು ಗಂಟೆಗೆ 152.2 ಕಿ.ಮೀ ವೇಗದಲ್ಲಿ ಎಸೆದಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ