ಕಾಂಗ್ರೆಸ್ ನಾಯಕಿ ಹಾಗೂ ಉತ್ತರಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಬಗ್ಗೆ ಅವರದ್ದೇ ಪಕ್ಷದ ಹರ್ಚಂದ್ಪುರ್ ಶಾಸಕ ರಾಕೇಶ್ ಸಿಂಗ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಕೋಲ್ಕತ್ತಾದಲ್ಲಿ ವಿದ್ಯಾಸಾಗರ ಪ್ರತಿಮೆಯನ್ನು ಪುನರ್ ನಿರ್ಮಿಸುವುದಾಗಿ ಮೋದಿ ಭರವಸೆ ನೀಡಿದ್ದಾರೆ. ನಾವು ಅವರ (ಬಿಜೆಪಿ) ಹಣವನ್ನು ಏಕೆ ತೆಗೆದುಕೊಳ್ಳಬೇಕು, ಬಂಗಾಳವು ಸಾಕಷ್ಟು ಸಂಪನ್ಮೂಲಗಳನ್ನು ಹೊಂದಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಉತ್ತರಪ್ರದೇಶದ ಮವುನಲ್ಲಿ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ರೋಡ್ ಶೋ ಸಂದರ್ಭದಲ್ಲಿ ನಡೆದ ಹಿಂಸಾಚಾರಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರೇ ನೇರ ಹೊಣೆ. ಕೊಲ್ಕತ್ತಾದಲ್ಲಿ ಹಂಗಾಮ ನಡೆಸಿದ್ದೇ ಬಿಜೆಪಿ ಅಧ್ಯಕ್ಷರು. ಬಿಜೆಪಿ ಕಾರ್ಯಕರ್ತರೇ ಈಶ್ವರ್ ಚಂದ್ರ ವಿದ್ಯಾಸಾಗರ್ ಅವರ ಪ್ರತಿಮೆಯನ್ನು ಧ್ವಂಸಗೊಳಿಸಿದ್ದು ಎಂದು ಮಮತಾ ಆರೋಪಿಸಿದ್ದಾರೆ.
ಬಡಜನರಿಗೆ ಶೌಚಾಲಯ ಮತ್ತು ಇಂಧನ ಅವಶ್ಯಕತೆ ಪೂರೈಕೆಗೆ ಪ್ರಧಾನಿ ನರೇಂದ್ರ ಮೋದಿ ಆದ್ಯತೆ ನೀಡುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಮೋದಿ ಅವರು ಮತ್ತಷ್ಟು ವರ್ಷ ದೇಶದ ಆಡಳಿತ ನಡೆಸಲಿದ್ದಾರೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಇತ್ತೀಚೆಗೆ ಚೆನ್ನೈನಲ್ಲಿ ತಮ್ಮ ಮಕ್ಕಳ್ ನೀದಿಮೈಯ್ಯಂ ಪಕ್ಷದ ಪರವಾಗಿ ಉಪಚುನಾವಣೆ ರ್ಯಾಲಿ ಉದ್ದೇಶಿಸಿ ಮಾತನಾಡುತ್ತಾ, "ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಒಬ್ಬ ಹಿಂದೂ ಆಗಿದ್ದ. ಆತನ ಹೆಸರು ನಾಥೂರಾಮ್ ಗೋಡ್ಸೆ' ಎಂದು ಕಮಲ್ ಹಾಸನ್ ಹೇಳಿದ್ದರು.
ನರೇಂದ್ರ ಮೋದಿ ಅವಧಿಯಲ್ಲಿ ಗುಜರಾತ್ ನಲ್ಲಿ ಬರೀ ಕೋಮುಗಲಭೆಗಳೇ' ನಡೆದಿವೆ. ಆದರೆ ನಮ್ಮ ಸರ್ಕಾರದಲ್ಲಿ ಉತ್ತರ ಪ್ರದೇಶವು ಗಲಭೆಗಳು ಮತ್ತು ಅರಾಜಕತೆಯಿಂದ ಮುಕ್ತವಾಗಿತ್ತು ಎಂದು ಮಾಯಾವತಿ ಹೇಳಿದ್ದಾರೆ.
ಬಿಜೆಪಿಯ ಮಹಿಳಾ ಕಾರ್ಯಕರ್ತರ ಗಂಡಂದಿರು ನರೇಂದ್ರ ಮೋದಿಯವರನ್ನು ಭೇಟಿಯಾಗಿದರೆ ಅವರಿಗೆ ಭಯವಾಗುತ್ತದೆ ಏಕೆಂದರೆ ಮೋದಿಯಂತೆ ತಮ್ಮ ಹೆಂಡತಿಯನ್ನು ಅವರು ತೊರೆದು ಹೋಗಬಹುದೆಂದು ಅವರು ಭಯಪಡುತ್ತಾರೆ ಎಂದು ಬಿಎಸ್ಪಿ ನಾಯಕಿ ಮಾಯಾವತಿ ಸೋಮವಾರದಂದು ವ್ಯಂಗ್ಯವಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರದಲ್ಲಿ ತಮ್ಮ ವಿರುದ್ಧ ದ್ವೇಷದ ಭಾಷಣವನ್ನು ಮಾಡಿ ಪ್ರಚಾರ ನಡೆಸಿದ್ದರೆ, ನಾವು ಪ್ರೀತಿ ಬಳಸಿದ್ದೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ನಾನು ಪ್ರಧಾನಿ ಹುದ್ದೆಗೆ ಸ್ಪರ್ಧೆಯಲ್ಲಿ ಇಲ್ಲ. ಜನ ನನ್ನನ್ನು ಹಿಂದುತ್ವದ 'ಪೋಸ್ಟರ್ ಬಾಯ್' ಎಂದು ಉಲ್ಲೇಖಿಸಲ್ಪಡುವಲ್ಲಿ ನನಗೆ ಯಾವುದೇ ಆಕ್ಷೇಪಗಳಿಲ್ಲ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.