ದಿನಗಳು ಹತ್ತಿರ ಬಂದಂತೆ ಬಿಗ್ಬಾಸ್ ಮನೆಯಲ್ಲಿ ಟಾಸ್ಕ್ಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಸ್ಪರ್ಧಿಗಳ ಮಧ್ಯ ಧ್ವೇಷ, ಅಸೂಯೆ, ವಾದ ವಿವಾಧಗಳು ಹೆಚ್ಚಾಗುತ್ತಲೇ ಇವೆ. ಸದ್ಯ ಕಿಚ್ಚನ ಮುಂದೆಯೇ ನಡೆದ ಕಾಳಜಿ ಮತ್ತು ಸ್ವಾರ್ಥಿಗಳ ಚರ್ಚೆಯಲ್ಲಿ ಗುರೂಜಿಯನ್ನು ಬಿಟ್ಟರೆ ರಾಜಣ್ಣನೇ ಹೆಚ್ಚು ಸ್ವಾರ್ಥಿ ಎಂದು ಹೇಳಿದ ಮನೆ ಮಂದಿ ವಿರುದ್ಧ ರೂಪೇಶ್ ರಾಜಣ್ಣ ಕೆಂಡಾಮಂಡಲರಾಗಿದ್ದಾರೆ.
ಬಿಗ್ಬಾಸ್ ಆಟಕ್ಕೆ ಮನೆಮಂದಿಯಲ್ಲಾ ಸುಟ್ಟು ಸುಣ್ಣವಾಗುತ್ತಿದ್ದಾರೆ. ದಿನದಿಂದ ದಿನಕ್ಕೆ ದೊಡ್ಮನೆಯಲ್ಲಿ ಹೊಸ ಹೊಸ ಆಟಗಳು ಉದಯಿಸುತ್ತಿವೆ. ಇವೇಲ್ಲ ಪ್ರೇಕ್ಷಕರಿಗೆ ಮಜಾ ಕೊಟ್ಟರೆ ಸ್ಪರ್ಧಿಗಳಿಗೆ ಸಂಕಟಪ್ರಾಯವಾಗಿವೆ. ಸದ್ಯ ರೂಪೇಶ್ ರಾಜಣ್ಣ ಅವರು ಕಳೆದುಕೊಂಡ ಚಿನ್ನದ ಉಂಗುರ ಮತ್ತು ಬ್ರೆಸ್ಲೆಟ್ ಕಂಡು ಹಿಡಿಯುವುದಾಗಿ ಹೇಳಿ ಗುರೂಜಿ ಮತ್ತು ರೂಪೇಶ್ ಬಕ್ರಾ ಮಾಡಿದ ಎಪಿಸೋಡ್ ವೀಕ್ಷಕರನ್ನು ನಗೆಗಡಲಿಗೆ ತೆಲಿಸುತ್ತಿದೆ.
ಬಿಗ್ ಬಾಸ್ ಮೇಲೆ ಆರ್ಯವರ್ಧನ್ ಗುರೂಜಿ ಮ್ಯಾಚ್ ಫಿಕ್ಸಿಂಗ್ ಆರೋಪ ಮಾಡಿದ ನಂತರ ಕಿಚ್ಚ ಸುದೀಪ್ ಅವರು ವೇದಿಕೆಯ ಮೇಲೆಯೇ ಖಡಕ್ ವಾರ್ನಿಂಗ್ ನೀಡಿದ್ದರು. ಸದ್ಯ ಬಿಗ್ಬಾಸ್ ಕಾರ್ಯಕ್ರಮಕ್ಕೆ ಸುದೀಪ್ ಗೈರಾಗಿರುವ ಹಿನ್ನೆಲೆ, ಸುದೀಪ್ ಸರ್.. ಐ ಲವ್ ಯೂ, ಬೇಗ ಬನ್ನಿ ಎಂದು ಗುರೂಜಿ ಕಿಚ್ಚನಲ್ಲಿ ಕೇಳಿಕೊಂಡಿದ್ದಾರೆ.
ಬಿಗ್ ಬಾಸ್ ಮೂರನೇ ವಾರಕ್ಕೆ ಕಾಲಿಟ್ಟಿದ್ದು, ದಿನದಿಂದ ದಿನಕ್ಕೆ ಟಾಸ್ಕ್ಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಸದ್ಯ ದೊಡ್ಮನೆ ಸದಸ್ಯರು ಬಿಗ್ಬಾಸ್ ನೀಡಿದ್ದ ಟಂಗ್ ಟ್ವಿಸ್ಟಿಂಗ್ ಟಾಸ್ಕ್ ಮುಗಿಸಲು ಹರಸಾಹಸ ಪಟ್ಟರು. ಒಬ್ಬರೂ ಸಹ ಈ ಸ್ಪರ್ಧೆಯಲ್ಲಿ ಗೆಲ್ಲಲೇ ಇಲ್ಲ ಬದಲಿಗೆ ಬಿಗ್ಹೌಸ್ ತುಂಬಾ ನಗು ಕೇಳಿ ಬಂತು.
ಬಿಗ್ ಬಾಸ್ ಮೂರನೇ ವಾರಕ್ಕೆ ಕಾಲಿಟ್ಟಿದೆ. ಐಶ್ವರ್ಯ ಪಿಸ್ಸೆ ಎಲಿಮಿನೇಟ್ಗೆ ಮೊದಲ ಬಲಿಯಾದ್ರೆ, ನವಾಜ್ ಅವಾಜ್ ದೊಡ್ಮನೆಯಲ್ಲಿ ನಡಿಲಿಲ್ಲ. ಸದ್ಯ ಆರ್ಯವರ್ಧನ್ ಗುರೂಜಿ ಮನೆಯಿಂದ ಹೊರ ಹೋಗುವ ಮಾತನಾಡುತ್ತಿದ್ದಾರೆ. ಅಲ್ಲದೆ, ಇಂದು ನಡೆದ ಗೋಲ್ಡ್ ಮೈನ್ ಟಾಸ್ಕ್ ವೇಳೆ ಬಿಗ್ಬಾಸ್ ರೂಲ್ಸ್ ಉಲ್ಲಂಘಿಸಿದ್ದು ಅಲ್ಲದೆ, ಮನೆಯ ಸದಸ್ಯರ ಮೇಲೆ ಅವಾಜ್ ಹಾಕಿದ್ದಾರೆ.
ಬಿಗ್ಬಾಸ್ ಮನೆಯಿಂದ ಹೊರಗೆ ಹೊಗಲು ಆರ್ಯವರ್ಧನ್ ಗುರೂಜಿ ನಿರ್ಧರಿಸಿದ್ದಾರೆ. ಅಲ್ಲದೆ, ದೊಡ್ಮನೆಯಿಂದ ಹೊರ ಹೊಗಲು ಆಪ್ಷನ್ ಇದ್ರೆ ಕಳುಹಿಸಿಕೊಡಿ ಎಂದು ಕೇಳಿಕೊಂಡಿದ್ದಾರೆ. ಇದಕ್ಕೆ ಕಾರಣ ಏನಿರಬಹುದು ಅಂತಾ ಅವರ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ.
ಸದಾ ಬಿಗ್ಬಾಸ್ ಮನೆಯಲ್ಲಿ ಎಲ್ಲರ ನಗುವಿಗೂ ಕಾರಣ ಆರ್ಯವರ್ಧನ್ ಗುರೂಜಿ. ಏನಾದರೊಂದು ಕಿತಾಪತಿ ಮಾಡುವ ಮೂಲಕ ಎಲ್ಲರನ್ನು ನಗಿಸುತ್ತಲೇ ಇರುತ್ತಾರೆ. ಸದ್ಯ ಮನೆ ಮಂದಿಗೆಲ್ಲ ಗ್ರಹಗಳ ಹೊಲಿಕೆ ಮಾಡಲು ಹೋಗಿ ತಮ್ಮ ಮೇಲೆ ತಾವೇ ಗೂಬೆ ಕೂರಿಸಿಕೊಂಡಿದ್ದಾರೆ.
ನೀವು ಕೈ ರೇಖೆ ನೋಡಿ ಭವಿಷ್ಯ ಹೇಳಿದ್ದವರನ್ನ ನೋಡಿರಬಹುದು, ಅಬ್ಬಬ್ಬಾ ಅಂದ್ರೆ ಕಾಲಿನ ಗೆರೆಯನ್ನಾದ್ರೂ ನೋಡಿ ಭವಿಷ್ಯ ಹೇಳ್ತಾರೆ ಅಂದುಕೊಳ್ಳೋಣ, ಆದ್ರೆ ಎಲ್ಲಾದ್ರೂ ತುಟಿ ನೋಡಿ ಭವಿಷ್ಯ ಹೇಳಿದ್ದನ್ನು ಕೇಳಿದ್ದಿರಾ.. ಯಸ್ ಬಿಗ್ಹೌಸ್ನಲ್ಲಿ ಆರ್ಯವರ್ಧನ ಗುರೂಜಿ ಹಿಂಗೊಂದು ಪ್ರಯೋಗ ಮಾಡಿದ್ದು, ಅಮೂಲ್ಯ ಅಧರ ನೋಡಿ ಭವಿಷ್ಯ ನುಡಿದಿದ್ದಾರೆ.
Bigg Boss Kannada Season 9 : ಬಿಗ್ ಬಾಸ್ ಕನ್ನಡ ಸೀಸನ್ 9 ಮನೆಯಲ್ಲಿ ಸ್ಪರ್ಧಿಗಳು ಒಂದು ವಾರ ಕಳೆದಿದ್ದಾರೆ. ಜೊತೆಗೆ ಮೊದಲ ಎಲಿಮಿನೇಷನ್ ಕೂಡ ನಡೆದಿದ್ದು, ರೇಸರ್ ಐಶ್ವರ್ಯ ಪಿಸ್ಸೆ ಹೊರಬಂದಿದ್ದಾರೆ.
ಇದಕ್ಕೂ ಮೊದಲು ಸೋನು ಶ್ರೀನಿವಾಸ್ ಗೌಡ ಎಲಿಮಿನೇಟ್ ಆಗಬೇಕು ಅಥವಾ ಆಗಲಿದ್ದಾರೆ ಅನ್ನೋ ವಿಚಾರ ಎಲ್ಲಾ ಕಡೆ ಬಿಸಿಬಿಸಿ ಚರ್ಚೆಗೆ ಕಾರಣವಾಗಿತ್ತು. ಆದರೆ ಇವತ್ತು ನಡೆದಿದ್ದೇ ಬೇರೆ ಸ್ಟೋರಿ.
ಈ ವೇಳೆ ಭಾರಿ ಕುತೂಹಲ ಕೆರಳಿಸಿದ್ದ ಆರ್ಯವರ್ಧನ್ ಗುರೂಜಿ ಎಲಿಮಿನೇಷನ್ ವಿಚಾರ ದೊಡ್ಡ ಚರ್ಚೆಗೆ ಕಾರಣವಾಯಿತು. ಆದರೆ ಅಂತಿಮವಾಗಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಡಿಫರೆಂಟ್ ರಿಸಲ್ಟ್ ಕೊಟ್ಟರು.
ಬಿಗ್ ಬಾಸ್ ಓಟಿಟಿ ಸೀಸನ್-1 ದಿನದಿಂದ ದಿನಕ್ಕೆ ಸಾಕಷ್ಟು ಕುತೂಹಲ ಕೆರಳಿಸುತ್ತಿದೆ. ಅದರಲ್ಲೂ ಆರ್ಯವರ್ಧನ್ ಗುರೂಜಿ ಮೇಲೆ ಎಲ್ಲರೂ ಗಮನ ಹರಿಸುತ್ತಿದ್ದಾರೆ. ಎಲ್ಲರ ಜೊತೆ ಬೆರೆಯುತ್ತಾ, ಟಾಸ್ಕ್ ಬಂದಾಗ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ಆರ್ಯವರ್ಧನ್ ಗುರೂಜಿ ಇದೀಗ ಹೊಸ ಅವತಾರ ತಾಳಿದ್ದಾರೆ.
'ಬಿಗ್ ಬಾಸ್' ಮನೆಯಲ್ಲಿ ಕಿರಿಕ್ ಜೊತೆ ಸಂಭ್ರಮ, ಸಡಗರ ಕೂಡಾ ಇರುತ್ತೆ.. 'ಬಿಗ್ ಬಾಸ್' ಮನೆಯಲ್ಲಿ ಜಶ್ವಂತ್ ಹುಟ್ಟುಹಬ್ಬ ಆಚರಣೆ ಮಾಡಲಾಯ್ತು.. ಸಂಭ್ರಮ ಹೇಗಿತ್ತು..? ಇಲ್ಲಿದೆ ನೋಡಿ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.