ನಟ ಝೈದ್ ಖಾನ್ ಕನ್ನಡ ಪ್ರೇಮ: ಝೈದ್ ಖಾನ್ ಅವರಿಗೆ ಬಾಲಿವುಡ್ಡಿನಿಂದ ಬಿಗ್ ಆಫರ್ ಒಂದು ಬಂದಿದೆ. ಹಿಂದಿಯ ಖ್ಯಾತ ನಿರ್ದೇಶಕರೋರ್ವರು ಒಂದೊಳ್ಳೆ ಕಥೆ ಹಿಡಿದು ಝೈದ್ ಖಾನ್ ಅವರನ್ನು ಸಂಪರ್ಕಿಸಿದ್ದಾರೆ. ಅದು ದೊಡ್ಡ ಬಜೆಟ್ಟಿನ ಚಿತ್ರ. ಪ್ರಸಿದ್ಧ ನಟಿಯೋರ್ವರು ಅದರಲ್ಲಿ ನಟಿಸಲಿದ್ದಾರಂತೆ. ಈ ಅವಕಾಶವನ್ನು ಝೈದ್ ಸೇರಿದಂತೆ ಯಾವ ನಾಯಕನೂ ನಿರಾಕರಿಸಲು ಸಾಧ್ಯವಿರಲಿಲ್ಲ.
ಝೈದ್ ಖಾನ್ ನಾಯಕನಾಗಿ ನಟಿಸಿರುವ ಚೊಚ್ಚಲ ಸಿನಿಮಾ ಬನಾರಸ್ ಯಶಸ್ವಿಯಾಗಿ ಮೂರನೇ ವಾರದತ್ತ ದಾಪುಗಾಲಿಟ್ಟಿದೆ. ಈಗಲೂ ಅದೇ ಪ್ರೀತಿಯಿಂದ ಪ್ರೇಕ್ಷಕರು ಬನಾರಸ್ ಅನ್ನು ಮೆಚ್ಚಿ ಕೊಂಡಾಡುತ್ತಿದ್ದಾರೆ. ಇದರೊಂದಿಗೆ ಮೊದಲ ಹೆಜ್ಜೆಯಲ್ಲಿಯೇ ನಾಯಕನಾಗಿ ನೆಲೆ ಕಂಡುಕೊಂಡ ಖುಷಿ ಝೈದ್ ಪಾಲಿಗೆ ದಕ್ಕಿದೆ. ಇದಕ್ಕೆಲ್ಲ ಕಾರಣರಾದ ಸಮಸ್ತ ಕನ್ನಡ ನಾಡಿನ ಜನತೆಗೆ, ಸಹಕಾರ ನೀಡಿದ ಮಾಧ್ಯಮ ಮಿತ್ರರಿಗೆ ಝೈದ್ ಖಾನ್ ಮನಃಪೂರ್ವಕವಾಗಿ ಧನ್ಯವಾದ ಸಲ್ಲಿಸಿದ್ದಾರೆ.
ಮೊದಲ ಸಿನಿಮಾದಲ್ಲಿಯೇ ಝೈದ್ ಖಾನ್ ಅನುಭವಿ ಹೀರೋ ರೀತಿ ನಟಿಸಿದ್ದಾರೆ. ಅವರ ಮತ್ತು ಸೋನಲ್ ಮಂಥೆರೋ ಜೋಡಿ ಚೆನ್ನಾಗಿದೆ. ಸಿನಿಮಾ ಎಲ್ಲಿಯೂ ಬೋರ್ ಆಗಲ್ಲವೆಂದು ಸಿದ್ದರಾಮಯ್ಯ ಹೇಳಿದ್ದಾರೆ.
ನಿಜ ಕಣ್ರೀ.. ಡಿ ಬಾಸ್ ದರ್ಶನ್ ಹೇಳಿದಂತೆ ಜಮೀರ್ ಅಹಮದ್ ಅವರ ಪುತ್ರನ ನಟನೆ ಸಖತ್ ಕಿಕ್ಕೇರಿಸಿಬಿಟ್ಟಿದೆ. ಆಕ್ಟಿಂಗ್ ಬಗ್ಗೆ ಏನೂ ಗೊತ್ತಿಲ್ಲದ Zaid Khan ಸೂಪರ್ ಆಗಿ ನಟನೆ ಕಲಿತು ಯಾರಿಗೂ ಕಮ್ಮಿ ಇಲ್ಲ ಅನ್ನೋ ಲೆವೆಲ್ಲಿಗೆ ಮೊದಲ ಸಿನಿಮಾದಲ್ಲಿ ಮಿಂಚಿದ್ದಾರೆ.ಪಟಪಟ ಅಂತ ಪಂಚಿಂಗ್ ಡೈಲಾಗ್ ಹೇಳೋ ಸಿದ್ದಾರ್ಥ್ (Zaid khan) ಎಂಟ್ರಿ ಮಾತ್ರ ಸಿನಿಮಾದಲ್ಲಿ ಜಬರ್ದಸ್ತ್ ಆಗಿದೆ. ಹೀರೋಯಿನ್ ಧನಿ (ಸೋನಲ್) ಯನ್ನ ತಮಾಷೆಗೆ ಪಟಾಯಿಸಲು ಮಾಡಿದ ತುಂಟಾಟ ಹೀರೋ Zaid ಗೆ ದೊಡ್ಡ ತಲೆನೋವಾಗಿ ಕಾಡುತ್ತೆ. ತಂದೆಯ (ದೇವರಾಜ್ )ಮಾತಿನಂತೆ ಆ ಹುಡುಗಿಯನ್ನ ಬೆಂಗಳೂರರಿಂದ ಬನಾರಸ್ ಗೆ ಕ್ಷಮೆ ಕೇಳಲು ಹೊರಟೆಬಿಡ್ತಾನೆ ಸಿದ್ದಾರ್ಥ್ (Zaid Khan). ಆಮೇಲೆ ನಿಜವಾದ ಕಥೆ ಏನೂ ಅನ್ನೋದು ಎಳೆಎಳೆಯಾಗಿ ತೆರೆದುಕೊಳ್ಳುತ್ತಾ ಹೋಗುತ್ತೆ.
ಶಾಸಕ ಜಮೀರ್ ಅಹ್ಮದ್ಖಾನ್ ಅವರ ಪುತ್ರ ಝೈದ್ಖಾನ್ ನಾಯಕನಾಗಿ ನಟಿಸಿರುವ ಬಹುನಿರೀಕ್ಷಿತ ಚಿತ್ರ ಬನಾರಸ್. ಬೆಲ್ ಬಾಟಂ ಖ್ಯಾತಿಯ ಜಯತೀರ್ಥ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರದ ಬಿಡುಗಡೆ ಪೂರ್ವ ಮನರಂಜನಾ (ಪ್ರೀರಿಲೀಸ್ ಇವೆಂಟ್) ಕಾರ್ಯಕ್ರಮ ಶನಿವಾರ ಸಂಜೆ ಗಂಡುಮೆಟ್ಟಿದ ನಾಡು ಹುಬ್ಬಳ್ಳಿಯ ರೈಲ್ವೇ ಸ್ಪೋರ್ಟ್ಸ್ ಗ್ರೌಂಡ್ ಆವರಣದಲ್ಲಿ ಅದ್ದೂರಿಯಾಗಿ ನೆರವೇರಿತು.
Banaras Prerelease Event: ಈಗಾಗಲೇ ತನ್ನ ಸುಂದರ ಹಾಡುಗಳು ಹಾಗೂ ಟ್ರೈಲರ್ ಮೂಲಕ ಜನಪ್ರಿಯವಾಗಿರುವ ಬನಾರಸ್ ಚಿತ್ರದ ಈ ವರ್ಣರಂಜಿತ ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ವಿನೋದ್ ಪ್ರಭಾಕರ್, ನೆನಪಿರಲಿ ಪ್ರೇಮ್, ವಿ.ನಾಗೇಂದ್ರ ಪ್ರಸಾದ್, ನಿರ್ದೇಶಕ ಜಯತೀರ್ಥ ಸೇರಿದಂತೆ ಚಿತ್ರರಂಗದ ಹಲವಾರು ಪ್ರಮುಖರು ಭಾಗವಹಿಸಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.