ʻನನಗೆ ನೋಟಿಸ್ ಬಂದಿಲ್ಲ.. ಬಂದ್ರೂ ಉತ್ತರ ಕೊಡಲ್ಲʼ
ಬಿಜೆಪಿಯ ರೆಬೆಲ್ ನಾಯಕ ಯತ್ನಾಳ್ ದ್ವಂದ್ವ ಹೇಳಿಕೆ
ಕೇಂದ್ರ ಶಿಸ್ತು ಸಮಿತಿಗೇ ಸವಾಲೆಸೆದ ಹಿಂದೂ ಹುಲಿ
ನಿನ್ನೆ ಕಡೆಯ ದಿನ.. ಇಂದು ಏನಾಗುತ್ತೆ ಯತ್ನಾಳ್ ನಡೆ
72 ಗಂಟೆಯೊಳಗೆ ಉತ್ತರಿಸಲು ತಿಳಿಸಿದ್ದ ಹೈಕಮಾಂಡ್
ಬಸನಗೌಡ ಪಾಟೀಲ ಯತ್ನಾಳ್ ನೋಟಿಸ್ಗೆ ಉತ್ತರ ಕೊಡ್ತಾರಾ?
ಬಿವೈವಿ - ಯತ್ನಾಳ್ ಸಂಘರ್ಷದ ಮಧ್ಯೆ ಬಳ್ಳಾರಿ ಬಡಿದಾಟ
ರಾಮುಲು ವಿರುದ್ದ ಉಸ್ತುವಾರಿ ಗರಂ, ಕೆರಳಿದ ರಾಮುಲು..!
ನಾನು ರಾಜೀನಾಮೆ ಕೊಟ್ಟು ಹೋಗ್ತೇನೆ ಎಂದ ಶ್ರೀರಾಮುಲು
BJPಗೆ ಮಾಜಿ ಸಚಿವ ಶ್ರೀರಾಮುಲು ಗುಡ್ ಬೈ..?
ಇಂದು ಚಿತ್ರದುರ್ಗದಲ್ಲಿ ವಕ್ಫ್ ವಿರುದ್ಧ ಬಿಜೆಪಿ ಪ್ರೊಟೆಸ್ಟ್
ಯತ್ನಾಳ್ ಅಭಿಯಾನದ ಬಳಿಕ ವಿಜಯೇಂದ್ರ ಶಕ್ತಿ ಪ್ರದರ್ಶನ
ನಮ್ಮ ಭೂಮಿ ನಮ್ಮ ಹಕ್ಕು ಅಭಿಯಾನದಡಿ ಹೋರಾಟ
ಹೊಳಲ್ಕೆರೆ ತಾ. ನಂದನಹೊಸೂರು ಗ್ರಾಮಕ್ಕೆ ಭೇಟಿ
ʻನಮ್ಮ ಭೂಮಿ ನಮ್ಮ ಹಕ್ಕುʼ ಅಡಿ ಬಿಜೆಪಿ ತಂಡ ಪ್ರೊಟೆಸ್ಟ್
BJPಯಿಂದ ವಕ್ಫ್ ಬೋರ್ಡಿನ ಜನ ವಿರೋಧಿ ನೀತಿ ಖಂಡನೆ
ಬಿಜೆಪಿಯಲ್ಲಿ 3 ತಂಡಗಳಾಗಿ ಪ್ರವಾಸ ಮಾಡುತ್ತಿರುವ ನಾಯಕರು
ಕರ್ನಾಟಕದ ಬಿಜೆಪಿಯಲ್ಲಿ 2-3 ಬಣಗಳು ಇಲ್ಲ
ದೆಹಲಿಯಲ್ಲಿ ರಾಧಾ ಮೋಹನ್ ದಾಸ್ ಹೇಳಿಕೆ
ರಾಜ್ಯ ಬಿಜೆಪಿ ಉಸ್ತುವರಿ ರಾಧಾ ಮೋಹನ್ ದಾಸ್
ನನಗೂ, ಯತ್ನಾಳ್ಗೂ ದೆಹಲಿಯಲ್ಲಿ ಭೇಟಿಯಾಗಿಲ್ಲ
ಅವರು ದೆಹಲಿಗೆ ಬಂದಿದ್ದು ನಿಮ್ಮಿಂದ ನನಗೆ ಗೊತ್ತಾಯ್ತು
ವಿಜಯೇಂದ್ರ ಟೀಂ, ಯತ್ನಾಳ್ ಟೀಂ ಅಂತ ಏನು ಇಲ್ಲ
ನಮಗೆ ಬಿಜೆಪಿ ಟೀಂ ಮಾತ್ರ ಎಂದ ರಾಧಾ ಮೋಹನ್ ದಾಸ್
ತಪ್ಪು ಗ್ರಹಿಕೆ ಸರಿಪಡಿಸಲು ಏನು ಮಾಡಬೇಕು ಮಾಡ್ತೀವಿ
ದೆಹಲಿಯಲ್ಲಿ ಜಗದಾಂಬಿಕಾ ಪಾಲ್ ಭೇಟಿಯಾದ ಯತ್ನಾಳ್ ಟೀಂ
ರಾಜ್ಯದಲ್ಲಿ ನಡೆದ ವಕ್ಪ್ ಹೋರಾಟದ ವರದಿ ಸಲ್ಲಿಸಿದ ರೆಬಲ್ಸ್ ಟೀಂ
ಜಗದಾಂಬಿಕಾ ಪಾಲ್, ಜಂಟಿ ಸದನ ಸಮಿತಿ ಅಧ್ಯಕ್ಷ
ವಕ್ಪ್ ಪ್ರಕರಣದಲ್ಲಿ ನಡೆದಿರುವ ಘಟನೆಗಳು, ನೋಟೀಸ್ ಜಾರಿ,
ಹೋರಾಟ ಬೆಳವಣಿಗಳ ಬಗ್ಗೆ ಮಾಹಿತಿಹೊಂದಿರುವ ವರದಿ
DK Sivakumar: ಹೈಕೋರ್ಟ್ ತೀರ್ಪು ಪ್ರಶ್ನಿಸಿ ಯತ್ನಾಳ್ ಸುಪ್ರಿಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಲಿ. ಅವರಿಗೂ ನ್ಯಾಯಾಲಯ, ನಮಗೂ ನ್ಯಾಯಾಲಯ ಇದೆ. ನಾನು ಸಾಯೋವರೆಗೂ ಈ ರೀತಿ ಕೇಸ್ಗಳನ್ನು ಎದುರಿಸಲೇಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
Basanagowda Patil Yatnal: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಸ್ಲಿಮರು ಹಿಂದೂಗಳ ಮನೆಗೆ ನುಗ್ಗಿ ಹೊಡೆಯುತ್ತಾರೆ, ಅವರ ಹೆಣ್ಣುಮಕ್ಕಳನ್ನು ಹೊತ್ತೊಯ್ಯುತ್ತಾರೆ ಎಂದು ಊಹಾತ್ಮಕ ಹೇಳಿಕೆ ನೀಡಿ, ಮತದಾರರಲ್ಲಿ ಭೀತಿ ಹುಟ್ಟಿಸುತ್ತಿರುವ ಮತ್ತು ದ್ವೇಷ ಬಿತ್ತುತ್ತಿರುವ ಯತ್ನಾಳ್ ವಿರುದ್ಧ ಚುನಾವಣಾ ಆಯೋಗ ತತ್ ಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಮುಸಲ್ಮಾನರಿಗೆ ಮೀಸಲಾತಿ ಕೊಡುವ ವಿಚಾರದಲ್ಲಿ ಮುಖ್ಯಮಂತ್ರಿಗಳಿಗೆ ಸ್ಪಷ್ಟತೆ ಇಲ್ಲ. ಧರ್ಮಾಧಾರಿತ ಮೀಸಲಾತಿ ಕೊಡಲು ಸಂವಿಧಾನದಲ್ಲಿ ಸಾಧ್ಯವಿಲ್ಲ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ರಾಯಚೂರಿನ ಲಿಂಗಸುಗೂರಿನಲ್ಲಿ ಬಿಜೆಪಿ ಸಮಾವೇಶ
ಕಾಂಗ್ರೆಸ್ ಸರ್ಕಾರದ ವಿರುದ್ಧ ಶಾಸಕ ಯತ್ನಾಳ್ ವ್ಯಂಗ್ಯ
ಕೋಮು ಘಟನೆಗಳನ್ನು ನೋಡಿ ಮತದಾನ ಮಾಡಿ
ಸಮಾವೇಶದಲ್ಲಿ ಮತದಾರರಿಗೆ ಶಾಸಕ ಯತ್ನಾಳ್ ಮನವಿ
ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿದ ಅವರು, ಇನ್ನು ಒಂದು ವರ್ಷದಲ್ಲಿ ಶಾಸಕರಿಗೆ ಸಂಬಳ ಸಿಗದಂತಹ ಪರಿಸ್ಥಿರಿ ಬರುತ್ತದೆ. ಲೋಕಸಭಾ ಚುನಾವಣೆ ಮುಗಿದ ಬಳಿಕ ಕಾಂಗ್ರೆಸ್ನವರು ಬೇರೆ ರೀತಿಯಲ್ಲಿ ಮಾತನಾಡಲು ಶುರು ಮಾಡುತ್ತಾರೆ ಅಂತಾ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಯತ್ನಾಳ್, ಇಂದು ಗ್ಯಾರಂಟಿ ಗ್ಯಾರಂಟಿ ಅಂತಿದ್ದಾರೆ. ಆದರೆ ದೇಶ ಉಳಿದರೆ ಮಾತ್ರ ಗ್ಯಾರಂಟಿ ಜಾರಿಯಲ್ಲಿರುತ್ತದೆ. ದೇಶ ಉಳಿಯದಿದ್ದರೆ, ಮುಸ್ಲಿಂರೆಲ್ಲ ಒಂದಾದರೆ ಹಿಂದೂಗಳ ಜಮೀನು ಉಳಿಯಲ್ಲ, ಮನೆಯೂ ಉಳಿಯಲ್ಲ. ಒಂದು ಮತಾಂತರವಾಗಬೇಕು, ಇಲ್ಲ ಸಾಯಬೇಕು.. ಇವೆರಡೇ ಆಯ್ಕೆ ಉಳಿಯುತ್ತವೆ ಎಂದು ಹೇಳಿದ್ದಾರೆ.
ಕರಾವಳಿ ಹಿಂದುತ್ವ ನೋಡಲು ಇಲ್ಲಿಗೆ ಬಂದಿದ್ದೇನೆ
ಅವರು ಚೌಟಾ, ಇವರು ಕೋಟಾ, ಕಾಂಗ್ರೆಸ್ಗೆ ಡ್ಯಾಶ್
ಕಾಂಗ್ರೆಸ್ ವಿರುದ್ಧ ಉಡುಪಿಯಲ್ಲಿ ಯತ್ನಾಳ್ ವಿವಾದ
ಮೋದಿ ಚುನಾವಣೆ ಅಲ್ಲ ಧರ್ಮ ಉಳಿಸೋ ಚುನಾವಣೆ
ಸಿಎಂ ಸಿದ್ದರಾಮಯ್ಯ ಸ್ಟೈಲಿನಲ್ಲೇ ಅಣುಕಿಸಿದ ಯತ್ನಾಳ್
ಯತ್ನಾಳ್ ಅವರಿಗೂ ಕಾಂಗ್ರೆಸ್ಸಿಗೂ ಸಂಬಂಧವಿಲ್ಲ. ಆದರೆ ಬಿಜೆಪಿಯವರು ತಮ್ಮ ಸಮಾಧಾನಕ್ಕೆ ಅವರನ್ನು ಕಾಂಗ್ರೆಸ್ ಏಜೆಂಟ್ ಎಂದು ಬಿಂಬಿಸುವ ಯತ್ನ ಮಾಡುತ್ತಿದ್ದಾರೆ. ಬಹುಶಃ, ಬಿಜೆಪಿ ಸರ್ಕಾರದ ಅವಧಿಯ ಅವ್ಯವಹಾರಗಳ ಬಗ್ಗೆ ಯತ್ನಾಳ್ ಅವರ ಹತ್ತಿರ ಮಾಹಿತಿ ಇರುವುದರಿಂದಲೇ ಅವರು ಹಿಂದೇಟು ಹಾಕುತ್ತಿರಬಹುದು ಎಂದರು.
ಮಾಜಿ ಶ್ಯಾಡೋ ಸಿಎಂ ವಿಜಯೇಂದ್ರ ಅವರೇ, 40 ಸಾವಿರ ಕೋಟಿಯಲ್ಲಿ ಬಿಜೆಪಿಯ ದೆಹಲಿ ನಾಯಕರಿಗೆ ಪಾಲೆಷ್ಟು?, ರಾಜ್ಯದ ನಾಯಕರ ಪಾಲೆಷ್ಟು?, ಹೆಣದಿಂದ ಸಂಪಾದಿಸಿದ ಈ ಪಾಪದ ಹಣದಿಂದ ಮಾಲ್ಡಿವ್ಸ್ನಲ್ಲಿ ತಾವು ಹೂಡಿಕೆ ಮಾಡಿದ್ದೆಷ್ಟು? ಅಮೆರಿಕದಲ್ಲಿ ಖರೀದಿಸಿದ ಮನೆಗಳೆಷ್ಟು? ಫಾರ್ಮ್ ಲ್ಯಾಂಡ್ಗಳೆಷ್ಟು? ಮತ್ತು ದುಬೈನಲ್ಲಿ ಮಾಡಿದ ಆಸ್ತಿಗಳೆಷ್ಟು? ಮಾತಾಡಿ ವಿಜಯೇಂದ್ರ ಮಾತಾಡಿ! ಎಂದು ಕಾಂಗ್ರೆಸ್ ಟೀಕಿಸಿದೆ.
Rs 40,000 crore Covid scam: ಸ್ವಪಕ್ಷದವರಿಂದಲೇ ಬಿಜೆಪಿಯ 40 ಸಾವಿರ ಕೋಟಿಯ ಕೋವಿಡ್ ಹಗರಣವನ್ನು ಬಹಿರಂಗಪಡಿಸಿದರೂ "ನಾ ಖವುಂಗಾ ನಾ ಖಾನೆದುಂಗ" ಎಂದು ಭಾಷಣ ಬಿಗಿಯುವ ಪ್ರಧಾನಿ ಮೋದಿಯವರು "ಕೈ ಕಟ್ ಬಾಯ್ ಮುಚ್" ಎನ್ನುವಂತೆ ಸುಮ್ಮನಿರುವುದೇಕೆ? ಐಟಿ, ಇಡಿ, ಸಿಬಿಐ ಮುಂತಾದ ತನಿಖಾ ಸಂಸ್ಥೆಗಳು ಎಲ್ಲಿ ಹೋದವು? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
Rs 40,000 crore Covid scam: ಸ್ವತಃ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿದ್ದರೂ, BSY & ಸನ್ಸ್ ವಿರುದ್ಧ ಇಷ್ಟೆಲ್ಲಾ ಮಾತಾಡಿದರೂ ಯತ್ನಾಳ್ ವಿರುದ್ಧ ಬಿಜೆಪಿ ಕಠಿಣ ಕ್ರಮ ಕೈಗೊಳ್ಳದಿರುವುದು ನೋಡಿದರೆ 40 ಸಾವಿರ ಕೋಟಿ ಹಗರಣದ ಕಬಂದ ಬಾಹುಗಳು ವಿಸ್ತಾರವಾಗಿ ಹಬ್ಬಿರುವುದು ಸ್ಪಷ್ಟವೆಂದು ಕಾಂಗ್ರೆಸ್ ಟೀಕಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.