ಲಕ್ಷ್ಮೀ ಹೆಬ್ಬಾಳ್ಕರ್ ಸೋಲಿಸಲು ರಮೇಶ್ ಜಾರಕಿಹೊಳಿ ಜಿದ್ದಿಗೆ ಬಿದ್ದಿದ್ದು ಫುಲ್ ಆ್ಯಕ್ಟೀವ್ ಆಗಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗ್ತಿದ್ದಾರೆ.
ಕಿತ್ತೂರು ತಾಲೂಕಿನ ಖೊದಾನಪೂರ ಗ್ರಾಮದ ಬಾಪುಸಾಹೇಬ ಇನಾಮದಾರ ಎಂಬುವವರು ತಮ್ಮ 10ಎಕರೆ ಜಮೀನಿನ ಖಾತೆ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಕಿತ್ತೂರು ತಹಶೀಲ್ದಾರ್ 5 ಲಕ್ಷ ರೂ.ಗಳ ಲಂಚದ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಬಾಪುಸಾಹೇಬ್ ಪುತ್ರ ರಾಜೇಂದ್ರ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ಸಲ್ಲಿಸಿದರು.
ಹಿಂದೂ ಪದದ ವಿವಾದಿತ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂಗೆ ಪತ್ರ ಬರೆದು ಜಾರಕಿಹೊಳಿ ಹೇಳಿಕೆ ಹಿಂಪಡೆದ ವಿಚಾರಕ್ಕೆ 'ಮಾತು ಆಡಿದ್ರೆ ಹೋಯ್ತು.. ಮುತ್ತು ಒಡೆದರೆ ಹೋಯ್ತು' ಎಂದು ಬೆಳಗಾವಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕನ್ನಡ ಅಭಿಮಾನಿಗಳಿಗೆ ರಾಜ್ಯೋತ್ಸವ ಶುಭಕೋರಿದ ನಟ ಶಿವಣ್ಣ ರಾಜ್ಯೋತ್ಸವ ಎಂದರೆ ನೆನಪಿಗೆ ಬರುವುದು ನಮ್ಮ ನೆಲ, ಜಲ, ಭಾಷೆ ಕನ್ನಡ ಇಂಡಸ್ಟ್ರಿ ಬೆಳೆಯುತ್ತಿರುವುದು ನಿಮ್ಮ ಪ್ರಿತಿ, ನಿಮ್ಮ ಸಹಕಾರ ನಮ್ಮ ಅಪ್ಪು ಅವರ ಮೇಲೆ ಬಹಳ ಪ್ರಿತಿ ಅಭಿಮಾನ ಹೀಗೆ ಇರಲಿ ನಾವು ಅಭಿಮಾನಿಗಳಿಗೆ ಪ್ರಿತಿ ಬಿಟ್ರೆ ಏನು ಕೊಡಲು ಸಾಧ್ಯವಿಲ್ಲ
ರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವದ ಸಂಭ್ರಮ... ಸಡಗರ ಬೆಳಗಾವಿಯ ಚೆನ್ನಮ್ಮ ವೃತ್ತಕ್ಕೆ ಹೂವಿನಿಂದ ಸಿಂಗಾರ ಎಲ್ಲಿ ನೋಡಿದರೂ ರಾರಾಜಿಸುತ್ತಿರುವ ಕನ್ನಡ ಬಾವುಟ ರಾಜ್ಯೋತ್ಸವ ಜೊತೆ ಅಪ್ಪು ಉತ್ಸವ ಮಾಡಲು ಸಕಲ ಸಿದ್ಧತೆ ಚೆನ್ನಮ್ಮ ವೃತ್ತದಲ್ಲಿ ಜಮಾವಣೆಯಾಗಲಿರುವ ಕನ್ನಡಾಭಿಮಾನಿಗಳು
ಕನ್ನಡ ರಾಜ್ಯೋತ್ಸವ ಹಿನ್ನೆಲೆ ಬೆಳಗಾವಿಯಲ್ಲಿ ಪೊಲೀಸರಿಂದ ಬಿಗಿ ಬಂದೋಬಸ್ತ್. ಪ್ರಮುಖ ರಸ್ತೆಗಳಲ್ಲಿ ಪೊಲೀಸರ ರೂಟ್ ಮಾರ್ಚ್. ಕಮಿಷನರ್ ಬೋರಲಿಂಗಯ್ಯ ನೇತೃತ್ವದಲ್ಲಿ ಪಥಸಂಚಲನ. ನಗರದ ಚೆನ್ನಮ್ಮ ವೃತ್ತದಿಂದ ಖಾಕಿ ಪಥಸಂಚಲನ.
ಕನ್ನಡ ರಾಜ್ಯೋತ್ಸವ ಹಿನ್ನೆಲೆ ಬೆಳಗಾವಿಯಲ್ಲಿ ಪೊಲೀಸರಿಂದ ಬಿಗಿ ಬಂದೋಬಸ್ತ್. ಪ್ರಮುಖ ರಸ್ತೆಗಳಲ್ಲಿ ಪೊಲೀಸರ ರೂಟ್ ಮಾರ್ಚ್. ಕಮಿಷನರ್ ಬೋರಲಿಂಗಯ್ಯ ನೇತೃತ್ವದಲ್ಲಿ ಪಥಸಂಚಲನ. ನಗರದ ಚೆನ್ನಮ್ಮ ವೃತ್ತದಿಂದ ಖಾಕಿ ಪಥಸಂಚಲನ.
ಬೆಳಗಾವಿಯ ಗಣೇಶ ವೃತ್ತದ ಬಳಿ ಮಹಾನಗರ ಪಾಲಿಕೆ ವತಿಯಿಂದ ಒತ್ತುವರಿ ತೆರವು ಕಾರ್ಯಾಚರಣೆ ನಡೆದಿದೆ. ಇಂದು ಬೆಳ್ಳಂಬೆಳಗ್ಗೆ ಪಾಲಿಕೆ ಅಧಿಕಾರಿಗಳು ಸಿಬ್ಬಂದಿ ಹಾಗೂ ಜೆಸಿಬಿ ಸಮೇತ ಸ್ಥಳಕ್ಕೆ ಆಗಮಿಸಿ ಒತ್ತುವರಿ ಮಾಡಿಕೊಂಡು ಕಟ್ಟಿಕೊಂಡಿದ್ದ ಕಟ್ಟಡ ತೆರವು ಮಾಡಿದ್ದಾರೆ. ಈ ಒಂದೇ ಕಟ್ಟಡದಲ್ಲಿ ಡಿವೈಡ್ ಆಗಿ ನಾಲ್ಕೈದು ಮುಸ್ಲಿಂ ಕುಟುಂಬಗಳು ವಾಸವಿದ್ದವು. ಅಲ್ಲದೇ ಪಕ್ಕದಲ್ಲಿ ಗುಜರಿ ಅಂಗಡಿ, ಗ್ಯಾರೇಜ್ ಒತ್ತುವರಿ ಮಾಡಿದ್ದನ್ನ ತೆರವು ಮಾಡಲು ಮುಂದಾಗಿದ್ರು.
ಪಂಚಮಸಾಲಿ 2ಎ ಮೀಸಲಾತಿಗೆ ಆಗ್ರಹಿಸಿ ಹೋರಾಟ ತೀವ್ರಗೊಳ್ಳಲಿದೆ.. ಮೀಸಲಾತಿಗಾಗಿ ಬೆಳಗಾವಿ ಜಿಲ್ಲೆ ಹುಕ್ಕೇರಿಯಲ್ಲಿ ಅಕ್ಟೋಬರ್ 21ರಂದು ಬೃಹತ್ ಸಮಾವೇಶ ನಡೆಯಲಿದೆ. 25 ಲಕ್ಷ ಜನ ಸೇರಿಸಿ ವಿಧಾನಸೌಧಕ್ಕೆ ಮುತ್ತಿಗೆಗೆ ಚಿಂತನೆ ನಡೆಸಲಾಗಿದೆ..
ಆರೋಗ್ಯ ಸಚಿವರೇ ನಿಮ್ಮ ಇಲಾಖೆಯ ಅವ್ಯವಸ್ಥೆ ಸ್ಟೋರಿ ನೀವು ನೋಡಲೇಬೇಕು. ಪ್ರತಿದಿನವು ಭಯದಲ್ಲೇ ಆಸ್ಪತ್ರೆಯಲ್ಲಿ ಕೆಲಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತಂಗಡಿ ಸರ್ಕಾರಿ ಆಸ್ಪತ್ರೆಯ ದುಸ್ಥಿತಿಯಿದು. ಆಸ್ಪತ್ರೆ ವೈದ್ಯರು ಸಿಬ್ಬಂದಿ, ರೋಗಿಗಳಿಗೆ ಭಯದಲ್ಲೇ ಚಿಕಿತ್ಸೆ ನೀಡುತ್ತಾರೆ.
ಮಗನ ಮೆದುಳು ನಿಷ್ಕ್ರಿಯಗೊಂಡ ವಿಷಯ ತಿಳಿದ ಪೋಷಕರು ಮಗ ಜೀವಂತವಾಗಿ ಉಳಿಯೋದಿಲ್ಲ ಎಂದು ಮನಗಂಡು ಡಾ. ಅವಿನಾಶ ನಾಯಿಕ, ರಜನ ಸೋಮಯ್ಯ ಅವರ ಸಲಹೆ ಮೇರೆಗೆ ತಮ್ಮ ಮಗನ ಅಂಗಾಂಗ ದಾನಕ್ಕೆ ಒಪ್ಪಿಗೆ ಸೂಚಿಸಿದರು. ಈ ಮೂಲಕ ನಾಲ್ಕೈದು ಜನರ ಜೀವಕ್ಕೆ ಬೆಳಕು ನೀಡುವ ಮೂಲಕ, ಮಗನ ಸಾವಿನಲ್ಲೂ ಪೋಷಕರು ಸಾರ್ಥಕತೆ ಮೆರೆದರು.
ಕುಂದಾನಗರಿ ಬೆಳಗಾವಿಯಲ್ಲಿ ಗಣೇಶೋತ್ಸವ ಸಂಭ್ರಮ ಮನೆ ಮಾಡಿದೆ. ಸಾರ್ವಜನಿಕ ಗಣೇಶ ಮೂರ್ತಿಗಳ ಮೆರವಣಿಗೆ ರಂಗೇರಿತ್ತು.. ಸಾಂಪ್ರದಾಯಿಕ ನೃತ್ಯ, ವಿವಿಧ ವಾದ್ಯಮೇಳಗಳ ಸಂಗೀತ ಸಂಭ್ರಮವನ್ನು ಇಮ್ಮಡಿಗೊಳಿಸಿತ್ತು..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.