ಕುಂದಾನಗರಿ ಬೆಳಗಾವಿಯಲ್ಲಿ ಮತ್ತೆ ವರುಣ ಆರ್ಭಟಿಸಿದೆ. ಕಳೆದ 3 ದಿನಗಳಿಂದ ಬಿಟ್ಟು ಬಿಡದೇ ಸುರಿಯುತ್ತಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಧಾರಾಕಾರ ಮಳೆಗೆ ಭತ್ತ ಬೆಳೆದ ರೈತರಲ್ಲಿ ಆತಂಕ ಶುರುವಾಗಿದೆ. ಬಳ್ಳಾರಿ ನಾಲಾ ಸುತ್ತಲಿನ ಜಮೀನಿನಲ್ಲಿನ ಭೂಮಿ ಜಲಾವೃತವಾಗಿವೆ.
ಸೇತುವೆಗಳು ಜಲಾವೃತ.. ಗ್ರಾಮ ಗ್ರಾಮಗಳ ಸಂಪರ್ಕ ಕಡಿತ ತೆಂಗು.. ಬಾಳೆ.. ಅಡಿಕೆ.. ಸೇರಿ ಎಲ್ಲಾ ಬೆಳೆಯು ಜಲಾವೃತ ಜಲಾಶಯಗಳು ಭರ್ತಿ.. ನದಿ ಪಾತ್ರದಲ್ಲಿ ಪ್ರವಾಹದ ಭೀತಿ ಕರಾವಳಿಯಲ್ಲಿ ಕುಸಿಯುತ್ತಿವೆ ಗುಡ್ಡ.. ಮನೆಗಳು ನಾಶ..!
ರಮೇಶ್ ಜಾರಕಿಹೊಳಿ - ಲಕ್ಷ್ಮಣ್ ಸವದಿ ಬೆಂಬಲಿಗರ ನಡುವೆ ವಾಕ್ಸಮರ ಶುರವಾಗಿದೆ. ಮುಂದಿನ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಎಂದು ಸವದಿ ಬೆಂಬಲಿಗರು ಹೇಳಿದ್ರೆ, ಇದಕ್ಕೆ ರಮೇಶ್ ಜಾರಕಿಹೊಳಿ ಬೆಂಬಲಿಗರು ಕೌಂಟರ್ ಕೊಟ್ಟಿದ್ದಾರೆ.
ಕೃಷ್ಣಾ ನದಿ ಹೊಡತಕ್ಕೆ ಬೆಳಗಾವಿಯ ಅಥಣಿ ತಾಲೂಕಿನ ಸವದಿ ದರ್ಗಾ, ಜನವಾಡ ಗ್ರಾಮದ ರೈತರು ಕಂಗಾಲಾಗಿದ್ದಾರೆ. 60 ಎಕರೆ ಜಮೀನು ನದಿ ಪಾಲಾಗಿದ್ದು, ರೈತರು ಪರದಾಡುವಂತಾಗಿದೆ. ಸರ್ಕಾರ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ 40 ರೈತ ಕುಟುಂಬಗಳು ಬೀದಿಪಾಲಾಗಿವೆ.
ಉಟ್ಟ ಬಟ್ಟೆಯಲ್ಲೇ ಊರು ಬಿಟ್ಟ ಗ್ರಾಮಸ್ಥರು ರಾಜ್ಯದಲ್ಲಿ ಇನ್ನೂ ಎರಡು ದಿನ ಮಳೆಯ ಆರ್ಭಟ ಕರಾವಳಿ ಸೇರಿ ಹಲವು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಬೆಳಗಾವಿ, ಖಾನಾಪುರ ತಾಲೂಕಿನಲ್ಲಿ ಭಾರೀ ಕಟ್ಟೆಚ್ಚರ
ಚಾಲಕನ ನಿಯಂತ್ರಣ ತಪ್ಪಿ ಕಾರು ನದಿಗೆ ಉರುಳಿದ ಘಟನೆ ಬೆಳಗಾವಿಯ ಚಿಕ್ಕೋಡಿ ತಾಲೂಕಿನ ದಾನವಾಡ ಬಳಿ ನಡೆದಿದೆ. ಸ್ಥಳದಲ್ಲಿದ ಜನ ಕಾರು ಚಾಲಕನನ್ನು ರಕ್ಷಣೆ ಮಾಡಿದ್ದಾರೆ. ಹಗ್ಗದ ಸಹಾಯದಿಂದ ಕಾರನ್ನು ಮೇಲಕ್ಕೆತ್ತಲಾಗಿದೆ. ಚಿಕ್ಕೋಡಿಯ ಧೂದಗಂಗಾ ನದಿಯ ದಾನವಾಡ_ ದತ್ತವಾಡ ಸೇತುವೆ ಬಳಿ ಈ ಘಟನೆ ನಡೆದಿದೆ.
ರಾಜ್ಯದಲ್ಲಿ ಕಳೆದೊಂದು ವಾರದಿಂದ ವರುಣ ಅಬ್ಬರಿಸಿ ಬೊಬ್ಬರಿಯುತ್ತಿದ್ದಾನೆ. ಮಳೆಯ ಹೊಡೆತಕ್ಕೆ ಸಿಲುಕಿದ ಕರುನಾಡಿನ ಸೇತುವೆಗಳು ಜಲಾವೃತವಾಗಿದೆ.. ಸಂಚಾರ ಅಸ್ತವ್ಯಸ್ತವಾಗಿದೆ.. ನಿರಂತರ ಮಳೆಯಿಂದ ಜನರು ಹೈರಾಣರಾಗಿದ್ದಾರೆ.
ಸಿದ್ದರಾಮಯ್ಯ ಹಾಗೂ ನನ್ನ ಮಧ್ಯೆ ಮನಸ್ತಾಪವಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.. ಬೆಳಗಾವಿಯಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ, ನಾವು ಪಕ್ಷದಲ್ಲಿಯೇ ಇದ್ದೇವೆ. ಅವರು ನಮ್ಮ ಜೊತೆಗೇ ಇದ್ದಾರೆ ಎಂದಿದ್ದಾರೆ. ಅವರೊಂದಿಗೆ ಹಿಂದೆಯೂ ಇದ್ವಿ, ಈಗಲೂ ಇದ್ವಿ, ಮುಂದೆಯೂ ಇರ್ತೇವೆ ಎಂದಿದ್ದಾರೆ. ಕಡೆಗಣನೆ ವಿಚಾರದ ಬಗ್ಗೆಯೂ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಜನವಾಡ ಗ್ರಾಮದಲ್ಲಿ ಬೃಹತ್ ಮೊಸಳೆಯೊಂದು ಪ್ರತ್ಯಕ್ಷಗೊಂಡಿದ್ದು, ಜನ ಭಯಭೀತರಾಗಿದ್ದಾರೆ. ಮೊಸಳೆ ಸರಿ ಸುಮಾರು 15 ಅಡಿಯಷ್ಟು ಉದ್ದವಾಗಿದ್ದು, ಅಥಣಿ ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿ ಹಾಗೂ ಸ್ಥಳಿಯರು ಮೊಸಳೆ ರಕ್ಷಣೆ ಮಾಡಿದ್ದಾರೆ.
ನೀರು ನುಗ್ಗಿರುವ ಮನೆಗಳ ಮಾಲೀಕರಿಗೆ ತಲಾ ಹತ್ತು ಸಾವಿರ ರೂ.ಗಳ ಪರಿಹಾರ ಕೊಟ್ಟಿರುವುದನ್ನು ಬಿಟ್ಟರೆ ಪ್ರವಾಹಪೀಡಿತ ಪ್ರದೇಶಗಳಲ್ಲಿ ಯಾವುದೇ ಕೆಲಸವಾಗಿಲ್ಲ. ಮನೆಗಳನ್ನು ಕಳೆದುಕೊಂಡಿರುವ ಸಂತ್ರಸ್ತರಿಗೆ ತಾತ್ಕಾಲಿಕ ಶೆಡ್ಗಳನ್ನು ಬಹುತೇಕ ಕಡೆ ನಿರ್ಮಿಸಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.