assault on a graduate student: ಸಂತ್ರಸ್ತೆ, ಕೋರಮಂಗಲದ ಪಬ್ ಒಂದರಲ್ಲಿ ಸ್ನೇಹಿತರ ಜೊತೆ ಪಾರ್ಟಿ ಮಾಡಿದ್ದಾಳೆ. ತನ್ನ ವೋಕ್ಸ್ ವ್ಯಾಗನ್ ಕಾರಿನಲ್ಲಿ ತೆರಳುವಾಗ ಕೋರಮಂಗಲದ ಎಂಪೈರ್ ಸರ್ಕಲ್ ಬಳಿ ಆಟೋವೊಂದಕ್ಕೆ ಡಿಕ್ಕಿಯಾಗಿದೆ. ಈ ವೇಳೆ ಫೋರಂ ಮಾಲ್ ಬಳಿ ಇದೆ ವಿಚಾರಕ್ಕೆ ಗಲಾಟೆ ಸಹ ಆಗಿದೆ.
ಕಾಲೇಜು ಯುವತಿಯರ ಸ್ನೇಹ ಬೆಳೆಸಿ ಆಕೆ ಏನೂ ಮಾಡ್ತಾಳೆ, ಎಲ್ಲಿಗೆ ಹೋಗ್ತಾಳೆ, ಯಾರ ಜೊತೆ ಆತ್ಮೀಯವಾಗಿರ್ತಾಳೆ ಎಂಬ ಸೀಕ್ರೆಟ್ಗಳನ್ನು ತಿಳಿದುಕೊಂಡು ಬ್ಲಾಕ್ ಮೇಲ್ ಮಾಡುವವರು ಇರುತ್ತಾರೆ.
ಮಹಿಳೆ ಮತ್ತು ಆಕೆಯ ಸ್ನೇಹಿತನ ನೆರವಿಗೆ ಧಾವಿಸಿದ ದಾರಿಹೋಕರು ನಾಲ್ವರ ಪೈಕಿ ಒಬ್ಬನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ನಂತರ ಉಳಿದ ಮೂವರನ್ನು ಕೂಡಾ ವಶಕ್ಕೆ ತೆಗೆದುಕೊಳ್ಳಲಾಗಿದೆ.
Crime News: ಉದ್ಯಮಿಯಾಗಿರುವ ಚೇತನ್ ಶಾರವರು 2023ನೇ ಸಾಲಿನಲ್ಲಿ ತಮ್ಮ ಮಗಳಿಗೆ ಸೆಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ಬಿಬಿಎ ಸೀಟಿಗಾಗಿ ಪ್ರಯತ್ನಿಸುತ್ತಿದ್ದರು. ಆ ಸಂದರ್ಭದಲ್ಲಿ ಚೇತನ್ ಶಾರ ಮಗಳ ಸ್ನೇಹಿತನೊಬ್ಬನ ಮೂಲಕ ಆರೋಪಿ ಸಚಿನ್ ಪರಿಚಯವಾಗಿತ್ತು.
ಟ್ರಾಫಿಕ್ ಪೊಲೀಸರಿಗೆ ಆಕ್ಸಿಡೆಂಟ್ ಕೇಸ್ ಗಳು ತುಂಬಾನೇ ತಲೆಕೆಡಿಸ್ತಾ ಇವೆ. ದಿನೇ ದಿನೇ ಅಪಘಾತಗಳು ಹೆಚ್ಚಾಗ್ತಾ ಇದ್ದು ,ಸಾವು ನೋವು ಕೂಡ ಜಾಸ್ತಿ ಆಗ್ತಾ ಇದೆ. ಇದರಿಂದ ನಾಲ್ಕು ಇಲಾಖೆಗಳು ಸೇರಿ ಸರ್ವೆ ಮಾಡಿದ್ದು, ನಗರದಲ್ಲಿ 59 ಬ್ಲಾಕ್ ಸ್ಫಾಟ್ ಗಳನ್ನು ಗುರ್ತಿಸಿದ್ದಾರೆ. ಕಳೆದ ಮೂರು ತಿಂಗಳಿನಿಂದ ನಗರದಲ್ಲಿ ಅಪಘಾತ ಸಂಖ್ಯೆ ಹೆಚ್ಚಾಗ್ತಾ ಇದೆ. ಇದರಿಂದ ತಲೆಕೆಡಿಸಿಕೊಂಡ ಸಂಚಾರಿ ಪೊಲೀಸರು ಅಪಘಾತಗಳು ಯಾಕೆ ಆಗ್ತಾ ಇವೆ ಅನ್ನೋ ಸರ್ವೆ ಮಾಡಲು ಮುಂದಾಗಿದ್ದಾರೆ. ಅದು ಕೂಡ ಸಾರಿಗೆ ಇಲಾಖೆ, PWD ಹಾಗೂ ಬಿಬಿಎಂಪಿ ಜೊತೆ ಸೇರಿ ನಗರದ ಅಪಘಾತಗಳು ಆದ ಸ್ಥಳದಲ್ಲಿ ಸರ್ವೆ ಮಾಡಿದ್ದಾರೆ. ಈ ವೇಳೆ ಒಟ್ಟು 59 ಬ್ಲಾಕ್ ಸ್ಪಾಟ್ ಗಳು ಅಂತಾ ಗುರ್ತಿಸಿದ್ದು ಈ ಬ್ಲಾಕ್ ಸ್ಪಾಟ್ ಗಳಲ್ಲೇ ಮೂರು ತಿಂಗಳಲ್ಲಿ 369 ಅಪಘಾತಗಳು ಆಗಿದೆ. ಇದ್ರಲ್ಲಿ
ಏನೇ ಹೇಳಿ ಇತ್ತೀಚೆಗೆ ಬೆಂಗಳೂರು ಸಿಟೀಲಿ ಪುಡಿ ರೌಡಿಗಳ ಪುಂಡಾಟ ಜೋರಾಗಿದೆ ಅಲ್ವಾ.. ರಾತ್ರಿ ಅನ್ನಲ್ಲ.. ಮಟ.. ಮಟ ಮಧ್ಯಾಹ್ನ ಅನ್ನೋಲ್ಲ.. ರಸ್ತೆ ಮಧ್ಯೆಯೇ ಗಾಡಿ ಅಡ್ಡ ಹಾಕ್ತಾರೆ.. ಮಾರಕಾಸ್ತ್ರ ತೋರ್ಸಿ ಸುಲುಗೆ ಮಾಡ್ತಾರೆ.. ಇದ್ನ ನೋಡಿದ್ರೆ ಅಂತೋರಿಗೆ ಪೊಲೀಸ್ರ ಭಯಾನೇ ಇಲ್ವೇನೋ ಅನ್ಸೋದ್ರಲ್ಲಿ ಎರಡು ಮಾತಿಲ್ಲ..
ನಿನ್ನೆ ಪಬ್ ವೊಂದರಲ್ಲಿ ಪಾರ್ಟಿ ಮಾಡಿದ್ದ ನಾಲ್ವರು ಯುವಕರ ತಂಡ ಪಾರ್ಟಿ ಮುಗಿಸಿಕೊಂಡು ಕುಡಿದ ಮತ್ತಿನಲ್ಲಿ ಕಾರು ಓಡಿಸಿದ್ದಾರೆ.. ನ್ಯೂ ಬಿಇಎಲ್ ರಸ್ತೆ ಮೇಲೆ ಅತಿ ವೇಗವಾಗಿ ಹೋಗ್ತಿದ್ದ ಕಾರು ರಸ್ತೆ ಬದಿ ಕೆಲಸ ಮುಗಿಸಿಕೊಂಡು ಹೋಗ್ತಿದ್ದ ವ್ಯಕ್ತಿಗೆ ಮೊದಲು ಡಿಕ್ಕಿ ಹೊಡೆದಿದೆ..
ಆವತ್ತು ರಸ್ತೆಯುದ್ದಕ್ಕೂ ಅಟ್ಟಾಡಿಸಿ ಅಟ್ಟಹಾಸ ಮೆರೆದ ಹಂತಕರನ್ನು ಪೊಲೀಸರು ಬಂಧಿಸಿದ್ದಾರೆ. ಜುಲೈ 11 ರ ಮಂಗಳವಾರ ಡಿಜೆ ಹಳ್ಳಿಯ ಕೆಹೆಚ್ ಬಿ ರಸ್ತೆಯಲ್ಲಿರುವ ಡಿ ಮಾರ್ಟ್ ಮುಂಭಾಗದ ರಸ್ತೆಯಲ್ಲಿ ರಾತ್ರಿ 8 ಗಂಟೆ ಸುಮಾರಿಗೆ ಟೀ ಕುಡಿಯಲು ಮಡಿವಾಳ ಪೊಲೀಸ್ ಠಾಣೆ ರೌಡಿ ಶೀಟರ್ ಕಪಿಲ್ ಬಂದಿದ್ದ. ಎರಡು ಬೈಕ್ ನಲ್ಲಿ ಬಂದಿದ್ದ 4 ಜನ ಆರೋಪಿಗಳು ಕಪಿಲ್ ನನ್ನ ಕೊಚ್ಚಿ ಕೊಲೆ ಮಾಡಿ ನಂತರ ಎಸ್ಕೇಪ್ ಆಗಿದ್ರು.
Crime News: ಆಗಾಗ ಸ್ನೇಹಿತರನ್ನ ಭೇಟಿಯಾಗಿ ಟೀ ಕುಡಿಯಲು ಬರ್ತಿದ್ದ ಕಪಿಲ್, ಅದೇ ರೀತಿ ನೆನ್ನೆ ರಾತ್ರಿ ಕೂಡ ಟೀ ಕುಡಿಯಲು ಬಂದಿದ್ದ. ಈ ವೇಳೆ ಎರಡು ಬೈಕ್ ಗಳಲ್ಲಿ ಬಂದಿದ್ದ ದುಷ್ಕರ್ಮಿಗಳು, ಹೆಲ್ಮೆಟ್ ಹಾಗೂ ಪುಲ್ ಓವರ್ ಧರಿಸಿದ್ರು. ಬೈಕ್ವೊಂದರ ನಂಬರ್ ಪ್ಲೇಟ್ ಮೇಲೆ ಅನುಮಾನ ಪಟ್ಟಿದ್ದು, ಸ್ನೇಹಿತನನ್ನ ಕಪಿಲ್ ಕಳುಹಿಸಿದ್ದ.
Drug Peddlers Arrested: ಗಿರಿನಗರ ಪೊಲೀಸರು ಆರೋಪಿಗಳ ಬಂಧನಕ್ಕೆ ತೆರಳಿದಾಗ ಪ್ರತಿರೋಧ ಎದುರಿಸಿದ್ದರು. ಬಂಧಿತರ ಕುಟುಂಬ ಸದಸ್ಯರು ತಮ್ಮನ್ನು ಯಾರೋ ದುಷ್ಕರ್ಮಿಗಳು ಅಪಹರಣ ಮಾಡಲು ಯತ್ನಿಸುತ್ತಿದ್ದಾರೆ ಅಂತಾ ಮಹಾರಾಷ್ಟ್ರ ಪೊಲೀಸರಿಗೆ ದೂರು ನೀಡಿದ್ದರಂತೆ.
ಮೂಲತಃ ಪಶ್ಚಿಮ ಬಂಗಾಳ ಮೂಲದವನಾದ ಈತ ಕೊನೆಯ ವರ್ಷದ ಇಂಜಿನಿಯರಿಂಗ್ ಓದಿಕೊಂಡು ಖಾಸಗಿ ಕಂಪನಿಯಲ್ಲಿ ಪಾರ್ಟ್ ಟೈಮ್ ಕೆಲಸ ಮಾಡಿಕೊಂಡಿದ್ದ. ಸಾರ್ವಭೌಮ ನಗರದ ಬಾಡಿಗೆ ಮನೆಯಲ್ಲಿದ್ದ ಈತ ಒಂದು ನಾಯಿಯನ್ನು ಸಾಕಿಕೊಂಡಿದ್ದ.
ಎಲೆಕ್ಷನ್ ಟೈಮಲ್ಲಿ ರೇಡ್ ಮಾಡಿ ವಾರ್ನಿಂಗ್ ಕೊಟ್ಟಿದ್ದ ಪೊಲೀಸರು ಎಲೆಕ್ಷನ್ ಟೈಮಲ್ಲಿ ಜೈಲಿಗೆ ಕಳಿಸಿದ್ದೋರನ್ನೆಲ್ಲಾ ಚುನಾವಣೆ ಮುಗಿದ ಮೇಲೆ ಬಿಡುಗಡೆಗೊಳಿಸಿ ವಾರ್ನ್ ಮಾಡಿದ್ದರು. ಆದರೆ, ನಗರದ ಕೆಲವೆಡೆ ರೌಡಿ ಆಸಾಮಿಗಳ ಪುಂಡಾಟ ಶುರುವಾಗಿತ್ತು.. ಅಲ್ಲದೇ ಗಾಂಜಾ ಘಾಟು, ಡ್ರಗ್ ಗಮ್ಮತ್ತು ಮತ್ತೆ ಶುರುವಾಗಿತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.