ಈ ಮಹಾಧನ ಯೋಗವು 3 ರಾಶಿಯವರಿಗೆ ಬಹಳಷ್ಟು ಪ್ರಯೋಜನಗಳನ್ನು ನೀಡುತ್ತದೆ. 3 ರಾಶಿಯವರ ಸಂಪತ್ತನ್ನು ಹೆಚ್ಚಿಸಲಿದೆ. ಈ ಶುಭ ಯೋಗವು ಈ ರಾಶಿಯವರಿಗೆ ಸಂಪತ್ತು ಗಳಿಸಲು ಅನೇಕ ಅವಕಾಶಗಳನ್ನು ಒದಗಿಸುತ್ತದೆ.
Budh Vakri 2023: ಜ್ಯೋತಿಷ್ಯಶಾಸ್ತ್ರದಲ್ಲಿ ಗ್ರಹಗಳ ರಾಜಕುಮಾರ ಎಂದು ಕರೆಯಲ್ಪಡುವ ಬುಧನು ನಿನ್ನೆಯಷ್ಟೇ ಆಗಸ್ಟ್ 24, 2023ರಂದು ಹಿಮ್ಮುಖ ಚಲನೆಯನ್ನು ಆರಂಭಿಸಿದ್ದಾನೆ. ಅಕ್ಟೋಬರ್ 01, 2023ರವರೆಗೆ ಇದೇ ಸ್ಥಿತಿಯಲ್ಲಿರುವ ಬುಧನು ಈ ಸಮಯದಲ್ಲಿ ಕೆಲವು ರಾಶಿಯವರ ಜೀವನದಲ್ಲಿ ಅಪಾರ ಧನ- ಸಂಪತ್ತನ್ನು ಕರುಣಿಸಲಿದ್ದಾನೆ ಎಂದು ಹೇಳಲಾಗುತ್ತದೆ.
ಕನ್ಯಾ ರಾಶಿಗೆ ಬುಧ ಪ್ರವೇಶವಾಗುತ್ತಿದ್ದಂತೆಯೇ ಭದ್ರ ರಾಜಯೋಗವನ್ನು ಸೃಷ್ಟಿಸುತ್ತದೆ. ಭದ್ರ ರಾಜಯೋಗವು ಕೆಲವು ರಾಶಿಯವರಿಗೆ ಉದ್ಯೋಗ-ವ್ಯವಹಾರದಲ್ಲಿ ಪ್ರಗತಿ ತಂದು ಕೊಡುತ್ತದೆ. ಇದರೊಂದಿಗೆ ಆರ್ಥಿಕ ಲಾಭವೂ ಸಿಗಲಿದೆ.
Mercury Transit 2023: ವೈದಿಕ ಜೋತಿಷ್ಯ ಪಂಚಾಂಗದ ಪ್ರಕಾರ ಜುಲೈ 8, 2023 ರಂದು ನವಗ್ರಹಗಳಲ್ಲಿ ಬುದ್ಧಿ ಮತ್ತು ವಾಣಿಯ ಕಾರಕ ಗ್ರಹ ಎಂದೇ ಕರೆಯಲಾಗುವ ಬುಧ ಕರ್ಕ ರಾಶಿಗೆ ಪ್ರವೇಶಿಸಲಿದ್ದಾನೆ. ಬುಧನ ಈ ಗೋಚರ ಎಲ್ಲಾ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರಲಿದೆ, ಆದರೆ, ನಾಲ್ಕು ರಾಶಿಗಳ ಜಾತಕದವರ ಮೇಲೆ ಇದರ ವಿಶೇಷ ಪ್ರಭಾವ ಉಂಟಾಗಲಿದ್ದು, ಈ ರಾಶಿಗಳ ಜನರ ಭಾಗ್ಯ, ನೌಕರಿ ಹಾಗೂ ವ್ಯಾಪಾರದಲ್ಲಿ ಅಪಾರ ಉನ್ನತಿ ನೆರವೇರಲಿದೆ.
ಜ್ಯೋತಿಷ್ಯ ಜಗತ್ತಿನಲ್ಲಿ, ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸುತ್ತಲೇ ಇರುತ್ತವೆ. ಇದನ್ನು ಗ್ರಹ ಸಂಚಾರ ಎಂದು ಕರೆಯಲಾಗುತ್ತದೆ. ಅಂದರೆ, ಒಂದು ರಾಶಿಯಿಂದ ಹೊರಬಂದ ಗ್ರಹವು ಮತ್ತೊಂದು ರಾಶಿಯನ್ನು ಪ್ರವೇಶಿಸುತ್ತದೆ. ಇದು ಎಲ್ಲಾ ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ರಾಜಕುಮಾರ ಬುಧನ ಮಹತ್ವ ಅಪಾರ. ಬುಧ ಗ್ರಹ ಎಂದರೆ ಮಾತು, ಗಣಿತ, ತರ್ಕ, ವ್ಯವಹಾರ ಮತ್ತು ಆರ್ಥಿಕತೆಯ ಅಂಶ ಎಂದು ಪರಿಗಣಿಸಲಾಗಿದೆ.
ಸೂರ್ಯ ಇಂದು ಮೇಷ ರಾಶಿಗೆ ಕಾಲಿಟ್ಟಿದ್ದು, ಮೇ 15 ರವರೆಗೆ ಅಂದರೆ ಒಂದು ತಿಂಗಳು ಇದೇ ರಾಶಿಯಲ್ಲಿ ಇರಲಿದ್ದಾನೆ. ಈ ಒಂದು ತಿಂಗಳು, ಸೂರ್ಯನು 5 ರಾಶಿಯ ಜನರ ಮೇಲೆ ದಯೆ ತೋರುತ್ತಾನೆ. ಈ ಜನರು ಉದ್ಯೋಗ-ವ್ಯವಹಾರದಲ್ಲಿ ಹೆಚ್ಚಿನ ಪ್ರಗತಿಯನ್ನು ಪಡೆಯುವ ಸಾಧ್ಯತೆಗಳಿವೆ. ಇದರೊಂದಿಗೆ, ಇದ್ದಕ್ಕಿದ್ದಂತೆ ಸಾಕಷ್ಟು ಹಣ ಮತ್ತು ಗೌರವವನ್ನು ಸಹ ಪಡೆಯಬಹುದು.
ಏಪ್ರಿಲ್ 14 ರಂದು ಸೂರ್ಯನು ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ. ಮಾರ್ಚ್ 31 ರಿಂದ ಬುಧ ಕೂಡಾ ಮೇಷ ರಾಶಿಯಲ್ಲಿಯೇ ಇದ್ದಾನೆ. ಈ ಎರಡು ಗ್ರಹಗಳು ಒಂದೇ ರಾಶಿಯಲ್ಲಿ ಬಂದು ಸೇರುವುದರಿಂದ ಬುಧಾದಿತ್ಯ ಯೋಗ ರೂಪುಗೊಳ್ಳುತ್ತಿದೆ. ಸಂಪತ್ತಿನ ಬೆಳವಣಿಗೆಯ ದೃಷ್ಟಿಯಿಂದ ಬುಧಾದಿತ್ಯ ಯೋಗವು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ರಾಜಕುಮಾರ ಎಂದು ಬಣ್ಣಿಸಲ್ಪಡುವ ಬುದ್ಧಿವಂತಿಕೆ, ವೈಭವ ಮತ್ತು ಸೌಂದರ್ಯದ ಅಂಶನಾದ ಬುಧ ಗ್ರಹ ಸದ್ಯ ಮಕರ ರಾಶಿಯಲ್ಲಿದ್ದಾನೆ. ಈ ತಿಂಗಳಾಂತ್ಯದಲ್ಲಿ ಬುಧನು ಕುಂಭ ರಾಶಿಗೆ ಪ್ರವೇಶಿಸಲಿದ್ದು ಕೆಲವು ರಾಶಿಯವರ ಜೀವನದಲ್ಲಿ ಅದೃಷ್ಟವನ್ನು ತರಲಿದ್ದಾನೆ ಎಂದು ಹೇಳಲಾಗುತ್ತಿದೆ.
Mercury Transit 2023: ಗ್ರಹಗಳ ರಾಜಕುಮಾರ, ಬುದ್ದಿ, ತರ್ಕ, ವ್ಯವಹಾರದ ಅಂಶ ಎಂದು ಪರಿಗಣಿಸಲ್ಪಡುವ ಬುಧನು ಶೀಘ್ರದಲ್ಲೇ ಮಕರ ರಾಶಿಯನ್ನು ಪ್ರವೇಶಿಸಲಿದ್ದಾನೆ. ಈ 20 ದಿನಗಳ ಕಾಲ ಇದೇ ರಾಶಿಯಲ್ಲಿ ಉಳಿಯಲಿರುವ ಬುಧನು ಎಲ್ಲಾ ರಾಶಿಗಳ ಮೇಲೆ ಶುಭ ಅಶುಭ ಪರಿಣಾಮವನ್ನು ಉಂಟು ಮಾಡಲಿದ್ದಾನೆ. ಈ ಸಮಯದಲ್ಲಿ ಬುಧನು ಐದು ರಾಶಿಯವರಿಗೆ ಬಂಪರ್ ಆರ್ಥಿಕ ಲಾಭವನ್ನು ನೀಡಲಿದ್ದಾನೆ ಎಂದು ಹೇಳಲಾಗುತ್ತಿದೆ.
ಜ್ಯೋತಿಷ್ಯದ ಪ್ರಕಾರ, ಜನವರಿ 12, 2023 ರಂದು, ಬುಧ ಗ್ರಹವು ಧನು ರಾಶಿಯಲ್ಲಿ ಉದಯಿಸಲಿದೆ. ಧನು ರಾಶಿಯ ಮೇಲೆ ಈಗಾಗಲೇ ಗುರುವಿನ ಪ್ರಭಾವವಿದೆ. ಬುಧ ಮತ್ತು ಗುರು ಗ್ರಹಗಳ ನಡುವೆ ಸ್ನೇಹ ಸಂಬಂಧವಿದೆ. ಹೀಗಾಗಿ ಬುಧನ ಉದಯದಿಂದಾಗಿ, ಅನೇಕ ರಾಶಿಯವರು ವಿಶೇಷ ಲಾಭವನ್ನು ಗಳಿಸಲಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.