Mercury Transit 2023: ವೈದಿಕ ಜ್ಯೋತಿಷ್ಯದ ಪ್ರಕಾರ, ಪ್ರತಿ ಗ್ರಹವು ಒಂದು ನಿರ್ದಿಷ್ಟ ಸಮಯದಲ್ಲಿ ರಾಶಿ ಚಕ್ರವನ್ನು ಬದಲಾಯಿಸುತ್ತವೆ. ಗ್ರಹಗಳ ಸಂಚಾರದಲ್ಲಿನ ಸಣ್ಣ ಬದಲಾವಣೆಯೂ ಕೂಡ ದ್ವಾದಶ ರಾಶಿಗಳ ಮೇಲೆ ಒಳ್ಳೆಯ-ಕೆಟ್ಟ ಪರಿಣಾಮವನ್ನು ಉಂಟು ಮಾಡುತ್ತವೆ. ಇದೀಗ ಇನ್ನೊಂದು ವಾರದಲ್ಲಿ ತರ್ಕ, ವ್ಯವಹಾರ, ಬುದ್ಧಿವಂತಿಕೆಯ ಅಂಶ ಎಂದು ಪರಿಗಣಿಸಲ್ಪಡುವ ಬುಧನು ತನ್ನ ರಾಶಿಯನ್ನು ಬದಲಾಯಿಸಲಿದ್ದಾನೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬುಧ ಗ್ರಹವು ಫೆಬ್ರವರಿ 7, 2023ರಂದು ಧನು ರಾಶಿಯನ್ನು ತೊರೆದು ಶನಿಯ ರಾಶಿಚಕ್ರವಾದ ಮಕರ ರಾಶಿಯನ್ನು ಪ್ರವೇಶಿಸಲಿದೆ. ಈ ಸಮಯದಲ್ಲಿ ಬುಧನು ಐದು ರಾಶಿಯವರಿಗೆ ಹಣದ ಹೊಳೆಯನ್ನೇ ಹರಿಸಲಿದ್ದಾನೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...
ಮುಂದಿನ 20 ದಿನಗಳವರೆಗೆ ಈ ರಾಶಿಯವರಿಗೆ ಬಂಪರ್ ಲಾಭ ನೀಡಲಿದ್ದಾನೆ ಬುಧ:
ವೃಷಭ ರಾಶಿ:
ವೈದಿಕ ಜ್ಯೋತಿಷ್ಯದ ಪ್ರಕಾರ, ಬುಧ ರಾಶಿ ಪರಿವರ್ತನೆಯು ವೃಷಭ ರಾಶಿಯವರ ಜೀವನದಲ್ಲಿ ಹಲವು ಒಳ್ಳೆಯ ಫಲಗಳನ್ನು ನೀಡಲಿದೆ. ಈ ಸಮಯದಲ್ಲಿ ಬುಧನ ಕೃಪಾಕಟಾಕ್ಷದಿಂದಾಗಿ ನಿಮ್ಮ ಆರ್ಥಿಕ ಸಮಸ್ಯೆಗಳು ಬಗೆಹರಿಯಲಿವೆ. ನಿಮ್ಮ ಸಿಲುಕಿರುವ ಹಣಗಳು ಕೈಸೇರಲಿವೆ.
ಇದನ್ನೂ ಓದಿ- Surya Guru Yuti: ಸೂರ್ಯ-ಗುರು ಯುತಿ ಪರಿಣಾಮ- ಹೊಳೆಯಲಿದೆ ಈ 5 ರಾಶಿಯವರ ಅದೃಷ್ಟ
ಮಿಥುನ ರಾಶಿ:
ಬುಧನ ಸಂಚಾರವು ಮಿಥುನ ರಾಶಿಯವರಿಗೆ ವೈಯಕ್ತಿಯ ಜೀವನದಲ್ಲಿ ಲಾಭದಾಯಕ ಎಂದು ಸಾಬೀತುಪಡಿಸಲಿದೆ. ಆರ್ಥಿಕ ಮೂಲಗಳು ಹೆಚ್ಚಾಗಲಿದ್ದು ಮನೆಯಲ್ಲಿ ಸುಖ-ಸಂತೋಷ ವೃದ್ಧಿಯಾಗಲಿದೆ.
ಕನ್ಯಾ ರಾಶಿ:
ಬುಧ ರಾಶಿ ಪರಿವರ್ತನೆಯಿಂದಾಗಿ ಕನ್ಯಾ ರಾಶಿಯವರಿಗೆ ನಿಮ್ಮ ಬಹುದಿನದ ಕನಸುಗಳು ನನಸಾಗಲಿವೆ. ಇದುವರೆಗೆ ಇದ್ದ ಕೌಟುಂಬಿಕ ಕಲಹಗಳು ದೂರವಾಗಲಿವೆ. ವಿತ್ತೀಯ ಲಾಭದಿಂದಾಗಿ ಆರ್ಥಿಕ ಸ್ಥಿತಿ ಸುಧಾರಿಸಲಿದೆ.
ಮಕರ ರಾಶಿ:
ತರ್ಕಕಾರಕನಾದ ಬುಧನು ನಿಮ್ಮ ರಾಶಿಯನ್ನೇ ಪ್ರವೇಶಿಸುವುದರಿಂದ ಇದರ ಗರಿಷ್ಠ ಪರಿಣಾಮ ನಿಮ್ಮ ಮೇಲೆಯೇ ಗೋಚರಿಸಲಿದೆ. ಈ ಸಮಯದಲ್ಲಿ ನಿಮ್ಮ ವಾಕ್ಚಾತುರ್ಯದಿಂದಾಗಿ ನೀವು ಕೈ ಹಾಕಿದ ಕೆಲಸಗಳಲ್ಲೆಲ್ಲಾ ಯಶಸ್ಸು ಪ್ರಾಪ್ತಿಯಾಗಲಿದೆ. ವ್ಯಾಪಾರ-ವ್ಯವಹಾರದಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಲಾಭವಾಗಲಿದೆ.
ಇದನ್ನೂ ಓದಿ- Shani Asta 2023: ಶನಿ ಅಸ್ತ- ಈ 5 ರಾಶಿಯವರಿಗೆ ತುಂಬಾ ಅಪಾಯಕಾರಿ
ಮೀನ ರಾಶಿ:
ಉದ್ಯೋಗದ ದೃಷ್ಟಿಯಿಂದ ಬುಧ ಸಂಚಾರವು ಮೀನ ರಾಶಿಯವರಿಗೆ ಗೋಲ್ಡನ್ ಟೈಮ್ ಎಂತಲೇ ಹೇಳಬಹುದು. ಹೊಸ ವ್ಯಾಪಾರ ಆರಂಭಿಸಲು ಯೋಚಿಸುತ್ತಿರುವವರಿಗೂ ಕೂಡ ಇದು ಉತ್ತಮ ಸಮಯ. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ದೊರೆಯಲಿದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.