ಕೋವಿಡ್ ನಿಂದ ಗುಣಮುಖರಾದವರ ಪೈಕಿ ಹಲವರಲ್ಲಿ ಕ್ಷಯ ರೋಗ ಪತ್ತೆಯಾಗಿದೆ.ಈ ಕುರಿತು ವಿಸ್ತೃತವಾದ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಸೂಚಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ (K Sudhakar) ತಿಳಿಸಿದರು.
Universal Vaccine Against Corona - ಕೊರೊನಾ ವೈರಸ್ (Coronavirus) ಹುಟ್ಟಿನಿಂದಲೇ ತನ್ನ ರೂಪ ಬದಲಿಸಿಕೊಳ್ಳುತ್ತಲೇ ಇದೆ. ಡೆಲ್ಟಾ (Covid-19) ಮತ್ತು ಓಮಿಕ್ರಾನ್ (Omicron) ನಂತಹ ಹಲವು ರೂಪಾಂತರಿಗಳಿಗೆ ಇಡೀ ವಿಶ್ವವೇ ಸಾಕ್ಷಿಯಾಗಿದೆ. ಇವೆಲ್ಲವುಗಳ ನಡುವೆ, ಈ ಬಣ್ಣ ಬದಲಿಸುವ ವೈರಸ್ ವಿರುದ್ಧದ ಯುನಿವರ್ಸಲ್ ವ್ಯಾಕ್ಸಿನ್ (Corona Vaccine) ಅಂದರೆ ಸಾರ್ವತ್ರಿಕ ಲಸಿಕೆ ತಯಾರಿಕೆಯ ಕುರಿತು ಚರ್ಚೆಗಳು ಕೂಡ ತೀವ್ರಗೊಂಡಿವೆ. ಯುನಿವರ್ಸಲ್ ವ್ಯಾಕ್ಸಿನ್ ಅಂದರೆ, ಕೊರೊನಾ ವೈರಸ್ ನ (Coronavirus News) ಎಲ್ಲಾ ರೂಪಾಂತರಿಗಳ ವಿರುದ್ಧ ಹೋರಾಡಲು ಸಹಾಯ ಮಾಡುವ ಒಂದೇ ಲಸಿಕೆ ಎಂದರ್ಥ.
ಕರೋನಾ ವರದಿಯು ಸಕಾರಾತ್ಮಕವಾಗಿ ಬಂದರೆ ಭಯಪಡಬೇಡಿ. ಸಕಾರಾತ್ಮಕ ಚಿಂತನೆಯಿಂದ ರೋಗವನ್ನು ಸೋಲಿಸಲು ಪ್ರಯತ್ನಿಸಿ. ರೋಗಲಕ್ಷಣಗಳು ಆರಂಭಿಕ ಸ್ಥಿತಿಯಲ್ಲಿದ್ದರೆ, 14 ದಿನಗಳಲ್ಲಿ ವೈರಸ್ ಅನ್ನು ಹೇಗೆ ಸೋಲಿಸಬಹುದು ಎನ್ನುವುದನ್ನು ಕಲಿಯಿರಿ.
ಮಂಗಳವಾರ ಮುಖ್ಯಮಂತ್ರಿ ಉದ್ದವ್ ಠಾಕ್ರೆಯನ್ನು ಭೇಟಿಯಾದ ಆರೋಗ್ಯ ಸಚಿವ ರಾಜೇಶ್ ಟೋಪೆ, ರಾಜ್ಯಾದ್ಯಂತ ಬುಧವಾರ ರಾತ್ರಿ 8 ಗಂಟೆಯಿಂದ ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸುವಂತೆ ಮನವಿ ಮಾಡಿದ್ದಾರೆ.
Coronavirus News - ಪೆಗಿಲೇಟೆಡ್ ಇಂಟರ್ಫೆರಾನ್ ಆಲ್ಫಾ 2 ಬಿ ಔಷಧಿ ತನ್ನ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ನಲ್ಲಿ ಕೋವಿಡ್ -19 ಚಿಕಿತ್ಸೆಗೆ ಸಂಬಂಧಿಸಿದಂತೆ ಉತ್ತೀಜನಾತ್ಮಕ ಫಲಿತಾಂಶಗಳನ್ನು ನೀಡಿದೆ ಎಂದು Zydus Cadila ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಹೋಳಿ ಹಬ್ಬಕ್ಕೂ ಮುಂಚೆ ದೇಶದೆಲ್ಲೆಡೆ ಕೊರೊನಾ ಪ್ರಕರಣಗಳ ಹೆಚ್ಚಳ ಸಾಕಷ್ಟು ಚಿಂತೆಗಿಡುವಂತೆ ಮಾಡಿದೆ.ಈಗಾಗಲೇ ಹಲವು ರಾಜ್ಯಗಳು ಕೊರೊನಾ ಹಿನ್ನಲೆಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿವೆ.ದೆಹಲಿ, ಮಹಾರಾಷ್ಟ್ರ, ಪಂಜಾಬ್, ಕೇರಳ, ಕರ್ನಾಟಕ ಛತ್ತೀಸ್ಗಡ ಮತ್ತು ಗುಜರಾತ್ನಲ್ಲಿ ಕರೋನಾ ವೈರಸ್ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ.
ಕೇರಳ ಮತ್ತು ಮಹಾರಾಷ್ಟ್ರದ ಎರಡು ರಾಜ್ಯಗಳಲ್ಲಿ ಇನ್ನೂ 40,000 ಕ್ಕೂ ಹೆಚ್ಚು ಸಕ್ರಿಯ ಕೊರೊನಾ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಗುರುವಾರ ಹೇಳಿದ್ದಾರೆ.
ಅಸ್ಟ್ರಾಜೆನೆಕಾ ಮತ್ತು ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ COVID-19 ಲಸಿಕೆಯ ಕ್ಲಿನಿಕಲ್ ಪ್ರಯೋಗದಲ್ಲಿ ಸ್ವಯಂ ಸೇವಕರೊಬ್ಬರು ಸಾವನ್ನಪ್ಪಿದ್ದಾರೆ ಎಂದು ಬ್ರೆಜಿಲ್ ಆರೋಗ್ಯ ಪ್ರಾಧಿಕಾರ ಅನ್ವಿಸಾ ಬುಧವಾರ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.