ಟಾಲಿವುಡ್ಗೆ ದುನಿಯಾ ವಿಜಯ್ ಎಂಟ್ರಿಕೊಟ್ಟಿದ್ದಾರೆ. ಗೋಪಿಚಂದ್ ನಿರ್ದೇಶನದ, ಬಾಲಕೃಷ್ಣ ಹಾಗೂ ದುನಿಯಾ ವಿಜಯ್ ಅಭಿನಯದ ವೀರಸಿಂಹ ರೆಡ್ಡಿ ರಿಲೀಸ್ಗೆ ರೆಡಿಯಾಗ್ತಿದೆ. ಈ ಸಿನಿಮಾದಲ್ಲಿ ದುನಿಯಾ ವಿಜಯ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಿನಿಮಾ ಬಗ್ಗೆ ದುನಿಯಾ ವಿಜಯ್ ಮಾತನಾಡಿದ್ದಾರೆ.
ʻಭೀಮಾʼಸಿನಿಮಾಗಾಗಿ ತೂಕ ಇಳಿಸಿದ್ದೇನೆ. ಜ.19ರಂದು ʻಭೀಮʼ ಫಸ್ಟ್ ಲುಕ್ ರಿಲೀಸ್ ಮಾಡ್ತೀವಿ ಎಂದು ದುನಿಯಾ ವಿಜಯ್ ಹೇಳಿದ್ದಾರೆ.. ನಾನು ಇಲ್ಲಿಗೆ ಬರೋದು ಗೊತ್ತಾಗಿ ಬಾಲಯ್ಯ ಅಭಿಮಾನಿಗಳು ಬಂದಿದ್ದಾರೆ. ಇದು ಕಲಾವಿದನಿಗೆ ಇರೋ ದೊಡ್ಡ ಗೌರವ ಎಂದು ದುನಿಯಾ ವಿಜಯ್ ಹೇಳಿದ್ದಾರೆ.
20ನೇ ತಾರೀಕು ನನ್ನ ಹುಟ್ಟು ಹಬ್ಬ... ಕೋವಿಡ್ ಹಿನ್ನೆಲೆ, ತಾಯಿ ತೀರಿಕೊಂಡ ಕಾರಣ ಕಳೆದ ವರ್ಷ ಹುಟ್ಟುಹಬ್ಬ ಆಚರಿಸಲಾಗಿಲ್ಲ. ಈ ಬಾರಿ ಅಭಿಮಾನಿಗಳ ಜೊತೆ ಹುಟ್ಟು ಹಬ್ಬ ಆಚರಿಸುತ್ತೇನೆ.. ಅಭಿಮಾನಿಗಳ ಜೊತೆ ಊಟ ಮಾಡೋ ಆಸೆ ಎಂದು ದುನಿಯಾ ವಿಜಯ್ ಹೇಳಿದ್ದಾರೆ.
ಟಾಲಿವುಡ್ ನಟ ನಂದಮೂರಿ ಬಾಲಕೃಷ್ಣ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಒಂಗೋಲ್ ನಿಂದ ಹೈದರಾಬಾದ್ ನಿಂದ ಹೊರಟಿದ್ದ ಹೆಲಿಕಾಪ್ಟರ್ 15 ನಿಮಿಷದಲ್ಲಿ ವಾಪಸ್ ಬಂದು ತುರ್ತು ಭೂಸ್ಪರ್ಶ ಮಾಡಿರುವುದಾಗಿ ವರದಿಯಾಗಿದೆ. ಹೆಲಿಕಾಪ್ಟರ್ನಲ್ಲಿ ಬಾಲಕೃಷ್ಣ ಅವರ ಜೊತೆ ನಟಿ ಶ್ರುತಿ ಹಾಸನ್ ಹಾಗೂ ʼವೀರ ಸಿಂಹರೆಡ್ಡಿʼ ಚಿತ್ರತಂಡದ ಕೆಲವು ಸದಸ್ಯರಿದ್ದು ಎಂದು ತಿಳಿದು ಬಂದಿದೆ.
ನಟಸಿಂಹ ನಂದಮೂರಿ ಬಾಲಕೃಷ್ಣ ನಟನೆಯ ʼವೀರ ಸಿಂಹ ರೆಡ್ಡಿʼ ಟ್ರೇಲರ್ ಆರ್ಭಟ ಜೋರಾಗಿದೆ. ಬಿಡುಗಡೆಯಾದ ದಿನವೇ ಲಕ್ಷಾಂತರ ಮಂದಿ ಬಾಲಯ್ಯನ ಉಗ್ರಾವತಾರಕ್ಕೆ ಫಿದಾ ಆಗಿದ್ದಾರೆ. ಅಲ್ಲದೆ, ಬಾಲಯ್ಯನ ಎದುರು ಕನ್ನಡದ ಬ್ಲಾಕ್ ಕೋಬ್ರಾ ದುನಿಯಾ ವಿಜಯ್ ಅಬ್ಬರಿಸಿದ್ದಾರೆ. ನಿನ್ನೆ ನಡೆದ ಪ್ರಿ ರಿಲೀಸ್ ಇವೆಂಟ್ನಲ್ಲಿ ಮಾತನಾಡಿದ ವಿಜಯ್, ಬಾಲಯ್ಯ ಅವರ ನಟನೆಯನ್ನು ಕೊಂಡಾಡಿದರು.
ಹೊಸಪೇಟೆಯಲ್ಲಿ ದರ್ಶನ್ ಅವರ ಮೇಲೆ ಚಪ್ಪಲಿ ಎಸೆದು ಹೇಯ ಕೃತ್ಯವೆಸಗಿರುವ ಕಿಡಿಗೇಡಿ ವಿಚಾರದಲ್ಲಿ ಪುನೀತ್ ರಾಜಕುಮಾರ್ ಅವರನ್ನು ಎಳೆದು ತರುತ್ತಿರುವುದಕ್ಕೆ ನಟ ದುನಿಯಾ ವಿಜಯ್ ಬೇಸರ ವ್ಯಕ್ತಪಡಿಸಿದ್ದಾರೆ.
ಪಾನಿಪುರಿ ಕಿಟ್ಟಿ ತಮ್ಮನ ಮೇಲೆ ದುನಿಯಾ ವಿಜಯ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಹೈಕೋರ್ಟ್ ಸೂಚನೆಗೆ ಮೇರೆಗೆ ಪಾನಿಪುರಿ ಕಿಟ್ಟಿ ಮೇಲೆ FIR ದಾಖಲಾಗಿದೆ. ಕಳೆದ ನಾಲ್ಕು ವರ್ಷದ ಹಿಂದೆ ನಡೆದ ಘಟನೆಯಲ್ಲಿ ಕಿಟ್ಟಿ ಹಾಗೂ ಸಹಚರರು ಹಲ್ಲೆ ನಡೆಸಿದ್ದರು ಎಂದು ವಿಜಯ್ ದೂರು ನೀಡಿದ್ದರು.
ನಟ ದುನಿಯಾ ವಿಜಯ್ ಸ್ಯಾಂಡಲ್ವುಡ್ನ ಯಶಸ್ವಿ ನಟರಲ್ಲಿ ಒಬ್ಬರು. ಸದ್ಯ ಕರುನಾಡ ಗಡಿದಾಟಿ ತೆಲುಗು ಪ್ರದೇಶಕ್ಕೆ ನುಗ್ಗಿರುವ ಕರಿಚಿರತೆ ಅಬ್ಬರಿಸುತ್ತಿದೆ. ಟಾಲಿವುಡ್ ಸ್ಟಾರ್, ನಟಸಿಂಹ ನಂದಮೂರಿ ಬಾಲಕೃಷ್ಣ ಅವರ ಮುಂಬರುವ NBK 107 ʼವೀರ ಸಿಂಹರೆಡ್ಡಿʼ ಸಿನಿಮಾದಲ್ಲಿ ಪ್ರತಾಪ್ ರೆಡ್ಡಿ ಪಾತ್ರದಲ್ಲಿ ಒಂಟಿ ಸಲಗ ಸದ್ದು ಮಾಡಲು ಸಿದ್ದವಾಗಿದೆ.
Puneetha Parva: ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ 'ಪುನೀತ ಪರ್ವ' ಕಾರ್ಯಕ್ರಮದಲ್ಲಿ ಮಾತನಾಡಿರುವ ಅಪ್ಪು ನೆನೆದು ಕುಟುಂಬಸ್ಥರು ಸೇರಿ ನೆರೆದಿದ್ದ ಅಭಿಮಾನಿಗಳು ಭಾವುಕರಾಗಿದ್ದರು. ಈ ಕಾರ್ಯಕ್ರಮದಲ್ಲಿ ನಟ ದುನಿಯಾ ವಿಜಯ್ ಸಹ ಭಾಗಿಯಾಗಿದ್ದರು. ನಟ ದುನಿಯಾ ವಿಜಯ್, ಧೃವ ಸರ್ಜಾ,ರಾಜ್ ಬಿ ಶೆಟ್ಟಿ ಜೊತೆ ವೇದಿಕೆ ಏರಿದ್ರೂ.
ಕಂಡ ಕೆಲವು ಘಟನೆಗಳನ್ನು ಆಧರಿಸಿ ಕಥೆ ಸಿದ್ಧಪಡಿಸಿಕೊಂಡಿದ್ದೀನಿ. ಚಿತ್ರಕ್ಕೆ ಶೀರ್ಷಿಕೆ ಏನಿಡಬೇಕೆಂದು ಬಹಳ ದಿನ ಚರ್ಚೆ ನಡೆದ ನಂತರ "ಭೀಮ" ಎಂಬ ಶೀರ್ಷಿಕೆ ಆಯ್ಕೆ ಮಾಡಿಕೊಂಡಿದ್ದೀವಿ.
ಕನ್ನಡಿಗರ ಮೆಚ್ಚುಗೆಗೆ ಪಾತ್ರವಾದ 'ಸಲಗ' ಚಿತ್ರಮಂದಿರದಲ್ಲಿ ಭರ್ಜರಿ ಕಲೆಕ್ಷನ್ ಮಾಡಿ, ಗಲ್ಲಾಪೆಟ್ಟಿಗೆಯಲ್ಲೂ ದಾಖಲೆ ಬರೆದಿತ್ತು. ಇದೀಗ ದುನಿಯಾ ವಿಜಿ 'ಸಲಗ' ಬಳಿಕ ಮತ್ತೊಂದು ರಕ್ತಸಿಕ್ತ ಅಧ್ಯಾಯಕ್ಕೆ ಸಜ್ಜಾಗಿದ್ದಾರೆ.
Duniya Vijay Birthday: ಕಳೆದ ವರ್ಷ ಕೋವಿಡ್ ಕಾರಣದಿಂದಾಗಿ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಆಚರಿಸಲು ಅಭಿಮಾನಿಗಳು ಸಾಧ್ಯವಾಗಿರಲಿಲ್ಲ. ಈ ಸಲವೂ ಅವರು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ.
ವಿಜಯ ಸರ್, ಅವರ ನಾಯಕತ್ವ ಅಲ್ಲಿ ಎಲ್ಲರದು ಅದ್ಬುತ ಬ್ಯಾಟಿಂಗ್ ಮತ್ತೆ ಡಾಲಿ ಧನಂಜಯ ಅವ್ರು ಖಡಕ್ ಪೊಲೀಸ್ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ಚರಣ್ ರಾಜ್ ಅವರ ಮ್ಯೂಸಿಕ್ ಅದ್ಭುತವಾಗಿ ಬಂದಿದೆ ಎಂದು ಹದಿ ಹೊಗಳಿದ್ದಾರೆ.
ಸಾಂಕ್ರಾಮಿಕ ಕೊರೊನಾ ವೈರಸ್ ಹಿನ್ನಲೆಯಲ್ಲಿ ನೇಕಾರ ಬದುಕು ಕಷ್ಟಕರವಾಗಿರುವುದರಿಂದಾಗಿ ಇತ್ತೀಚಿಗಷ್ಟೇ ನಟಿ ಪ್ರಿಯಾಂಕಾ ಉಪೇಂದ್ರ ಹಾಗೂ ಆಶಿಕಾ ರಂಗನಾಥ್ ನೇಕಾರರಿಗೆ ಸಹಾಯ ಮಾಡಲು ಜನರನ್ನು ಕೋರಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.