Lok Sabha Elections: ಲೋಕಸಭಾ ಚುನಾವಣೆಯಲ್ಲಿ ನಾವು 20 ಸ್ಥಾನಗಳನ್ನು ಗೆಲ್ಲುತ್ತೇವೆ. ಬಿಜೆಪಿಯವರು ಲೋಕಸಭಾ ಚುನಾವಣೆಯಲ್ಲಿ ಸೋಲುತ್ತಾರೆ. ಹೀಗಾಗಿಯೇ ಅವರು ಹತಾಶರಾಗಿ ಸರ್ಕಾರ ಬೀಳಿಸುವ ಹೇಳಿಕೆ ಕೊಡುತ್ತಿದ್ದಾರೆ ಅಂತಾ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಮಂಗಳವಾರ ಹೊಸ ಹಣಕಾಸು ಯೋಜನೆಯನ್ನು ಹೊರತಂದಿದೆ, ಇದರ ಅಡಿಯಲ್ಲಿ ರಾಜ್ಯದ ಒಂದು ಕೋಟಿಗೂ ಹೆಚ್ಚು ರೈತರಿಗೆ ವಾರ್ಷಿಕವಾಗಿ ರಾಜ್ಯ ಸರ್ಕಾರದಿಂದ 6,000 ರೂ ಹಾಗೂ ಕೇಂದ್ರ ಸರ್ಕಾರದಿಂದ 6,000 ರೂ ಒಟ್ಟು ವರ್ಷಕ್ಕೆ 12,000 ರೂ ಸಿಗಲಿದೆ.ಮುಖ್ಯಮಂತ್ರಿ ಏಕನಾಥ್ ಶಿಂಧೆ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಮೋ ಶೆಟ್ಕರಿ ಮಹಾಸನ್ಮಾನ್ ಯೋಜನೆಗೆ ಅನುಮೋದನೆ ನೀಡಲಾಯಿತು.
Sanjay Raut: ಮೊದಲು ಅಜೀತ್ ಪವಾರ್ ಮತ್ತು ಇದೀಗ ಅವರ ಹೇಳಿಕೆಗೆ ಸಂಜಯ್ ರಾವುತ್ ಪ್ರತಿಕ್ರಿಯೆ ಮಹಾರಾಷ್ಟ್ರದ ರಾಜಕೀಯದಲ್ಲಿ ಭಾರಿ ಸಂಚಲನಕ್ಕೆ ಕಾರಣವಾಗಿದೆ. ಇದು ಮಹಾರಾಷ್ಟ್ರದ ಸಿಎಂ ಏಕನಾಥ್ ಶಿಂಧೆ ಅವರಿಗೆ ಒಂದು ಸ್ಪಷ್ಟ ಸೂಚನೆ ಎಂದೇ ಬಿಂಬಿಸಲಾಗುತ್ತಿದೆ.
Dussehra Rally Controversy: ಮಹಾರಾಷ್ಟ್ರದಲ್ಲಿ ಶಿವಸೇನೆಯ ಉದ್ಧವ್ ಬಣಕ್ಕೆ ಭಾರಿ ನೆಮ್ಮದಿ ನೀಡಿರುವ ಬಾಂಬೆ ಹೈ ಕೋರ್ಟ್, ನಗರದ ಶಿವಾಜಿ ಪಾರ್ಕ್ ಮೈದಾನದಲ್ಲಿ ದಸರಾ ಮೇಳ ನಡೆಸಲು ಅನುಮತಿ ನೀಡಿದೆ. ಇನ್ನೊಂದೆಡೆ ಶಿಂಧೆ ಬಣಕ್ಕೆ ಅನುಮತಿ ನಿರಾಕರಿಸಲಾಗಿದ್ದು, ಬೇರೆಡೆ ಮೇಳ ನಡೆಸಲು ಸೂಚಿಸಲಾಗಿದೆ.
Maharashtra Politics: ಇತ್ತೀಚೆಗಷ್ಟೇ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿರುವ ಏಕನಾಥ್ ಸಿಂಧೆ ಔರಂಗಾಬಾದ್ ನಲ್ಲಿ ಶಿವಾಜಿಯ ಪುತ್ಥಳಿಯೊಂದನ್ನು ಅನಾವರಣಗೊಳಿಸಿದ್ದರು. ಇದನ್ನು ವಿರೋಧಿಸಿ ಎನ್ಸಿಪಿಯ ಯುವ ಘಟಕದ ಮುಖಂಡರು ಪುತ್ಥಳಿಯನ್ನು ಸ್ವಚ್ಛಗೊಳಿಸಿ ಕ್ಷೀರಾಭಿಷೇಕ ಮಾಡಿ ಶುದ್ಧೀಕರಣ ನಡೆಸಿದ್ದಾರೆ.
ಮಹಾರಾಷ್ಟ್ರದ ನೂತನ ಸಿಎಂ ಆಗಿ ಏಕನಾಥ್ ಸಿಂಧೆ ನೇಮಕವಾಗಿರುವ ಬೆನ್ನಲ್ಲೇ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಆದಿತ್ಯ ಠಾಕ್ರೆ 'ಪಕ್ಷದಲ್ಲಿ ಹೆಚ್ಚಿನ ಆಕಾಂಕ್ಷೆಯನ್ನು ಹೊಂದಿರುವ ಜನರು ಇದ್ದಾರೆ ಎನ್ನುವುದು ನನಗೆ ಮತ್ತು ನಮ್ಮ ತಂದೆಗೆ ತಿಳಿದಿತ್ತು ಎಂದು ಅವರು ಹೇಳಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.