Baby elephant viral video: ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೊಂದು ವಿಡಿಯೋ ವೈರಲ್ ಆಗುತ್ತಿರುತ್ತದೆ. ಪ್ರಾಣಿಗಳಿಗೆ ಸಂಬಂಧಪಟ್ಟ ಒಂದಲ್ಲ ಒಂದು ವಿಡಿಯೋ ಪ್ರತಿದಿನ ಸಾಮಾಜಿಕ ಜಾಲತಾಣದಲ್ಲಿ ಹೊರ ಬರುತ್ತಿರುತ್ತದೆ. ಇದೀಗ ಅಂತಹದ್ದೆ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹೊರಬಿದ್ದಿದ್ದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ರಸ್ತೆಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಗಜರಾಜನ ಗದ್ದಲ.
ಕಬ್ಬಿನ ಲಾರಿಗಾಗಿ ರಸ್ತೆಯಲ್ಲೇ ನಿಂತಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತ
ಚಾಮರಾಜನಗರದಿಂದ ತಾಳವಾಡಿಗೆ ಹೋಗುವ ರಸ್ತೆಯ ಮದ್ಯ ನಿಂತ ಸಲಗ.
ಇನ್ನು ಕೆಲವರು ರಸ್ತೆಯಲ್ಲಿ ಆನೆ ಸಮೀಪವೇ ನಿಂತು ಹುಚ್ಚಾಟ
ಒಂದೇ ಕಡೆಯಲ್ಲಿ ರಾಶಿಯಾಗಿ ನಿಂತಿರುವ ಈ ಆನೆಗಳು ಮಲಗಿರುವ ತಮ್ಮ ಮರಿಗೆ ಕಾವಲು ನೀಡುತ್ತಿರುವುದು. ಮರಿ ಮಧ್ಯೆ ಮಲಗಿದೆ. ಆ ಮರಿಯಾ ಸುತ್ತಲೂ ಆನೆಗಳು ಕಾವಲು ಕಾಯುತ್ತಿರುವ ವಿಡಿಯೋ ವೈರಲ್ ಆಗಿದೆ.
ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ವನ್ಯಜೀವಿ ಸಫಾರಿಯಲ್ಲಿ ಗುರುವಾರ (ನವೆಂಬರ್ 30, 2023) ಸಂಜೆಯ ಸಫಾರಿಯಲ್ಲಿ ಸಫಾರಿ ಬಸ್ ನ್ನು ಅಡ್ಡ ಹಾಕಿರುವ ಸಲಗ, ದಾರಿ ಕೊಡದ ಘಟನೆ ವಾಹನವನ್ನು ಹಿಮ್ಮೆಟ್ಟಿಸಿದೆ.
ಆನೆ ಅವಳಿ ಮರಿಗಳಿಗೆ ಜನ್ಮ ನೀಡುವುದು ಅಪರೂಪವಂತೆ. ಒಮ್ಮೊಮ್ಮೆ ಹೀಗಾದಾಗ ಆ ದೃಶ್ಯ ಕಣ್ಣಿಗೆ ಹಬ್ಬ. ಇಲ್ಲಿ ತನ್ನ ಮುದ್ದಾದ ಎರಡು ಅವಳಿ ಮರಿಗಳೊಂದಿಗೆ ತಾಯಿ ಆನೆ ಹೆಜ್ಜೆ ಹಾಕುತ್ತಿದೆ.
ದೇವಸ್ಥಾನದ ಮೆರವಣಿಗೆಯಲ್ಲಿ ಆನೆ ಸಾಗುತ್ತಿತ್ತು. ದಾರಿ ಮಧ್ಯೆ ಆನೆ ಕಣ್ಣಿಗೆ ಹಲಸು ಬಿದ್ದಿದೆ. ಆಣೆ ಮೆರವಣಿಗೆಯಿಂದ ಹೊರ ಬಂದು ಮರದಿಂದ ಹಲಸಿನ ಹಣ್ಣು ತೆಗೆದು ತನ್ನ ಆಸೆ ತೀರಿಸಿಕೊಂಡಿದೆ.
ಕಾಡಿನ ಮಧ್ಯೆ ಕೊಳದಲ್ಲಿ ಆನೆ ನೀರು ಕುಡಿಯುತ್ತಾ ನಿಂತಿದೆ. ಅಲ್ಲಿಗೆ ತನ್ನ ದಾಹ ತೀರಿಸಿಕೊಳ್ಳಲು ಹುಲಿ ಕೂಡಾ ಬಂದಿದೆ. ಆದರೆ ತಾನಿದ್ದ ಜಾಗಕ್ಕೆ ಹುಲಿ ಬಂದಿರುವುದು ಆನೆಗೆ ಯಾಕೋ ಸರಿ ಕಾಣಲಿಲ್ಲ. ಹುಲಿಯನ್ನು ಆ ಸ್ಥಳದಲ್ಲಿ ನಿಲ್ಲುವುದಕ್ಕೂ ಗಜರಾಜ ಅವಕಾಶ ನೀಡಲಿಲ್ಲ.
ತುಂಬಿ ಹರಿಯುತ್ತಿರುವ ನದಿಯ ಮಧ್ಯೆ ಆನೆ ಸಿಲುಕಿ ಹಾಕಿಕೊಂಡಿದೆ. ನೀರಿನ ರಭಸ ಕಂಡು ಮರಿಯಾನೆ ತೀರಾ ಭಯಪಟ್ಟಿದೆ . ಅದೆಷ್ಟೇ ಪ್ರಯತನ್ ಪಟ್ಟರೂ ಒಂದು ಹೆಜ್ಜೆ ಕೂಡಾ ಮುಂದಿಡುತ್ತಿಲ್ಲ. ಆನೆ ಯನ್ನು ರಕ್ಷಿಸಲು ರಕ್ಷಣಾ ಸಿಬ್ಬಂದಿ ಕೂಡಾ ಭಾರೀ ಪ್ರಯತ್ನ ನಡೆಸುತ್ತಿದ್ದಾರೆ.
ಈ ವ್ಯಕ್ತಿ ಆನೆಯನ್ನು ನೋಡಿಕೊಳ್ಳುವಾತ. ಆನೆಯನ್ನು ನೀರಿಗೆ ಬಿಟ್ಟು ತಾನು ಕೂಡಾ ನೀರಿಗಿಳಿದಿದ್ದಾನೆ. ಆದರೆ ನೀರಿನ ರಭಸ ಅರಿತ ಅನೆ ವ್ಯಕ್ತಿಯನ್ನು ಕೈ ಹಿಡಿದು ತನ್ನ ಬಳಿ ಎಳೆದು ತಂದಿದೆ.
ಹುಲಿ ರಾಜಾರೋಷವಾಗಿ ಹೆಜ್ಜೆ ಹಾಕಿಕೊಂಡು ಬರುತ್ತಿತ್ತು. ಆದರೆ ಯಾವಾಗ ಆನೆಗಳ ಹಿಂದೂ ಬರುತ್ತಿದೆ ಎನ್ನುವುದು ಅರಿವಾಗುತ್ತದೆಯೂ ಹುಲಿ ಪೊದೆಯಲ್ಲಿ ಅವಿತು ಕೊಳ್ಳುತ್ತದೆ. ಮತ್ತೆ ಆನೆಗಳು ದೂರ ಸಾಗಿತು ಎನ್ನುವುದು ಖಾತ್ರಿಯಗುತ್ತಿದ್ದಂತೆಯೇ ಪೊದೆಯಿಂದ ಈಚೆ ಬರುತ್ತದೆ. ಅಷ್ಟರಲ್ಲಿ ಮತ್ತೆ ಆನೆಯ ಸದ್ದು ಕೇಳಿದೊಡನೆ ಮತ್ತೆ ಹುಲಿರಾಯ ತನ್ನ ಕಾಲಿಗೆ ಬುದ್ದಿ ಹೇಳಿ ಬಿಡುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.